ಮುಖಾಮುಖಿಯಾಗುತ್ತಿದ್ದಾರೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ

Recommended Video

Rakshit vs Rashmika Face to Face | FILMIBEAT KANNADA

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರಶ್ಮಿಕಾ ಮಂದಣ್ಣ ನಡುವಿನ ಪ್ರೀತಿ, ಎಂಗೇಜ್ ಮೆಂಟ್, ಬ್ರೇಕಪ್ ಕಹಾನಿ ಎಲ್ಲರಿಗೂ ಗೊತ್ತಿರುವ ವಿಚಾರ. ಕಿರಿಕ್ ಪಾರ್ಟಿ ಸಿನಿಮಾ ನಂತರ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಮದುವೆಯಾಗಲು ನಿರ್ಧರಿಸಿ ನಿಶ್ಚಿತಾರ್ಥ ಮಾಡಿಕೊಂಡು ನಂತರ ದೂರ ದೂರ ಆಗಿರುವುದೆಲ್ಲ ಇತಿಹಾಸ.

ರಶ್ಮಿಕಾ ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ನಂತರ ಸ್ಟಾರ್ ಆದ ರಶ್ಮಿಕಾ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿದ್ದಾರೆ. ಕಿರಿಕ್ ಪಾರ್ಟಿ ನಂತರ ರಕ್ಷಿತ್ ಅಭಿಮಾನಿಗಳ ಮುಂದೆ ಬಂದಿಲ್ಲ. ಅಲ್ಲದೆ ಬ್ರೇಕಪ್ ನಂತರ ರಕ್ಷಿತ್ ಮತ್ತು ರಶ್ಮಿಕಾ ಎಲ್ಲಿಯೂ ಮುಖಾಮುಖಿಯಾಗಿರಲಿಲ್ಲ. ಆದ್ರೀಗ ಇಬ್ಬರು ಎದುರುಬದರಾಗುವ ಸಮಯ ಬಂದಿದೆ. ಅಂದರೆ ರಕ್ಷಿತ್ ಮತ್ತು ರಶ್ಮಿಕಾ ಸಿನಿಮಾ ಒಂದೆ ದಿನ ತೆರೆಗೆ ಬರತ್ತಿದೆ.

ರಕ್ಷಿತ್ v/s ರಶ್ಮಿಕಾ

ರಕ್ಷಿತ್ v/s ರಶ್ಮಿಕಾ

ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರ ರಿಲೀಸ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಡಿಸೆಂಬರ್ 27ಕ್ಕೆ ಚಿತ್ರ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ವಿಶೇಷ ಅಂದರೆ ಅದೇ ದಿನ ರಶ್ಮಿಕಾ ಅಭಿನಯದ ಚಿತ್ರ ಕೂಡ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ಇಬ್ಬರು ಮುಖಾಮುಖಿಯಾಗುತ್ತಿದ್ದಾರೆ.

ಡಿಸೆಂಬರ್ 27ಕ್ಕೆ ಪೊಗರು

ಡಿಸೆಂಬರ್ 27ಕ್ಕೆ ಪೊಗರು

ಧ್ರುವ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಪೊಗರು ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಮಿಂಚಿದ್ದಾರೆ. ಪೊಗರಿರುವ ನಟೋರಿಯಸ್ ಆಗಿ ಮಿಂಚಿರುವ ಧ್ರುವ ಅಭಿನಯದ ಪೊಗರು ಸಿನಿಮಾ ಕೂಡ ಡಿಸೆಂಬರ್ 27ಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಕಾರ್ಯಕ್ರಮ ವೊಂದರಲ್ಲಿ ನಿರ್ದೇಶಕ ನಂದಕಿಶೋರ್ ಡಿಸೆಂಬರ್ 27ಕ್ಕೆ ಪೊಗರು ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ಹೇಳಿದ್ದರು. ಅಂದ್ಮೇಲೆ ಡಿಸೆಂಬರ್ ನಲ್ಲಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಬಾಕ್ಸ್ ಆಫೀಸ್ ನಲ್ಲಿ ವಾರ್ ನಡೆಸಲಿದ್ದಾರೆ.

ಕಿರಿಕ್ ಪಾರ್ಟಿ ನಂತರ ಬರ್ತಿದ್ದಾರೆ ರಕ್ಷಿತ್

ಕಿರಿಕ್ ಪಾರ್ಟಿ ನಂತರ ಬರ್ತಿದ್ದಾರೆ ರಕ್ಷಿತ್

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ನಂತರ ಸುಮಾರು ಮೂರು ವರ್ಷಗಳ ಬಳಿಕ ನಾರಾಯಣನಾಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹಾಗಾಗಿ ರಕ್ಷಿತ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗುತ್ತಿದೆ. ಅದ್ದೂರಿಯಾಗಿ ತಯಾರಾಗಿರುವ ಅವನೇ ಶ್ರೀಮನ್ನಾರಾಯಣ ಕಳೆದ ಮೂರು ವರ್ಷದ ಹಿಂದೆ ಕಿರಿಕ್ ಪಾರ್ಟಿ ರಿಲೀಸ್ ಆದ ಸಮಯದಲ್ಲೆ ತೆರೆಗೆ ಬರುತ್ತಿರುವುದು ಮತ್ತೊಂದು ವಿಶೇಷ.

5 ಭಾಷೆಯಲ್ಲಿ ಶ್ರೀಮನ್ನಾರಾಯಣ, 2 ಭಾಷೆಯಲ್ಲಿ ಪೊಗರು

5 ಭಾಷೆಯಲ್ಲಿ ಶ್ರೀಮನ್ನಾರಾಯಣ, 2 ಭಾಷೆಯಲ್ಲಿ ಪೊಗರು

ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗುತ್ತಿದೆ. ಇನ್ನು ಪೊಗರು ಸಿನಿಮಾ ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಈ ಎರಡೂ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

More from Filmibeat

English summary
Kannada actor Rakshith Shetty and Rashmika Mandanna will comming face to face in december.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X