For Quick Alerts
  ALLOW NOTIFICATIONS  
  For Daily Alerts

  ಹೊಸ ಕಾರು ಖರೀದಿಸಿದ್ರಾ ರಕ್ಷಿತ್ ಶೆಟ್ಟಿ? ಯಾವುದು ಈ ದುಬಾರಿ ಕಾರು?

  |

  ತೆಲುಗಿನ ಸ್ಟಾರ್ ನಟ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದರು ಎಂದು ಇತ್ತೀಚಿಗಷ್ಟೆ ಸುದ್ದಿಯೊಂದನ್ನು ನೋಡಿದ್ವಿ. ಕನ್ನಡದ ಖ್ಯಾತ ಕಿರುತೆರೆ ನಟಿ ಮೇಘಾ ಶೆಟ್ಟಿ ಒಂದೇ ದಿನ ಎರಡು ದುಬಾರಿ ಕಾರು ಖರೀದಿಸಿದ್ದು ವರದಿಯಾಗಿತ್ತು. ಇದೀಗ, ಸಿಂಪಲ್ ರಕ್ಷಿತ್ ಶೆಟ್ಟಿಯೂ ಹೊಸ ಕಾರು ಖರೀದಿಸಿರುವ ವಿಚಾರ ತಿಳಿದಿದೆ.

  ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಟ ರಕ್ಷಿತ್ ಶೆಟ್ಟಿ ಆಡಿ ಕ್ಯೂ8 (Audi Q8) ಕಾರು ಖರೀದಿ ಮಾಡಿದ್ದು, ಪೂಜೆ ಸಹ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು, ರಕ್ಷಿತ್ ಶೆಟ್ಟಿಯ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ವರದಿಗಳು ಪ್ರಕಾರ, ಈ ಕಾರಿನ ಬೆಲೆ 98 ಲಕ್ಷದಿಂದ 1.27 ಕೋಟಿಯವರೆಗೂ ಇದೆ.

  ಕೊರೊನಾದಿಂದ ಬ್ರೇಕ್‌ನಲ್ಲಿದ್ದ ರಕ್ಷಿತ್ ಶೆಟ್ಟಿ ಈಗ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಶೂಟಿಂಗ್‌ಗೆ ರೆಡಿಯಾಗಿದ್ದಾರೆ. ಎರಡನೇ ಹಂತದಲ್ಲಿ ಬಾಕಿ ಉಳಿದಿರುವ ಚಿತ್ರೀಕರಣ ಮಾಡಲು ರಕ್ಷಿತ್ ಶೆಟ್ಟಿ ಪ್ಲಾನ್ ಮಾಡಿದ್ದು, ಸುಮಾರು 35 ದಿನಗಳ ಕಾಲ ಫಿಕ್ಸ್ ಮಾಡಿಕೊಂಡಿದ್ದಾರಂತೆ. ಅದಾಗಲೇ ಸುಮಾರು 21 ದಿನ ಮೊದಲ ಹಂತದಲ್ಲಿ ಶೂಟಿಂಗ್ ಮುಗಿಸಿದೆ. ಎರಡನೇ ಹಂತದಕ್ಕೂ ಯೋಜನೆ ರೂಪಿಸಿದ್ದರು. ಈ ನಡುವೆ ಕೊರೊನಾ, ಲಾಕ್‌ಡೌನ್ ಆದ ಕಾರಣ ಬ್ರೇಕ್ ಹಾಕಲಾಗಿತ್ತು. ಈ ಹಿಂದೆ 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಹಾಗು 'ಕವಲುದಾರಿ' ಅಂತಹ ಚಿತ್ರಗಳನ್ನು ನಿರ್ದೇಶಿಸಿದ್ದ ಹೇಮಂತ್ ರಾವ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ರುಕ್ಮಿಣಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  ದುಬಾರಿ 'ಲ್ಯಾಂಬೋರ್ಗಿನಿ' ಕಾರು ಖರೀದಿಸಿದ ಸ್ಟಾರ್ ನಟದುಬಾರಿ 'ಲ್ಯಾಂಬೋರ್ಗಿನಿ' ಕಾರು ಖರೀದಿಸಿದ ಸ್ಟಾರ್ ನಟ


  ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ 777' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಈ ಹಿಂದೆ ಸಣ್ಣದೊಂದು ಟೀಸರ್ ರಿಲೀಸ್ ಮಾಡಿದ್ದ ಚಿತ್ರತಂಡ ಗಮನ ಸೆಳೆದಿತ್ತು. ಕನ್ನಡ ಸೇರಿದಂತೆ ಇತರೆ ಭಾಷೆಯಲ್ಲಿ ಚಾರ್ಲಿ ಸಿನಿಮಾ ತೆರೆಗೆ ಬರಲಿದೆ. ಇನ್ನುಳಿದಂತೆ ಕಿರಣ್ ರಾಜ್ ಈ ಚಿತ್ರ ನಿರ್ದೇಶಿಸಿದ್ದು, ಬಿಎಸ್ ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

  ಇತ್ತೀಚಿಗಷ್ಟೆ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಜೊತೆ ಹೊಸ ಸಿನಿಮಾ ಘೋಷಣೆ ಮಾಡಿದರು. ಹೊಂಬಾಳೆ ಫಿಲಂಸ್‌ನಲ್ಲಿ 'ರಿಚರ್ಡ್ ಆಂಟೋನಿ' ಎಂಬ ಸಿನಿಮಾ ಕೈಗೆತ್ತಿಕೊಂಡಿದ್ದು, ನಟನೆ ಮತ್ತು ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಇದು ಉಳಿದವರು ಕಂಡಂತೆ ಚಿತ್ರದ ಪ್ರಿಕ್ವೆಲ್ ಎನ್ನಲಾಗಿದೆ. 2014ರಲ್ಲಿ 'ಉಳಿದವರು ಕಂಡಂತೆ' ಸಿನಿಮಾ ತೆರೆಕಂಡಿತ್ತು. ಈ ಚಿತ್ರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದರು. ಅದಾದ ಮೇಲೆ ಸುಮಾರು 7 ವರ್ಷದ ನಂತರ ಮತ್ತೆ ಡೈರೆಕ್ಷನ್ ಕಡೆ ಹೆಜ್ಜೆಯಿಟ್ಟಿದ್ದಾರೆ ಸಿಂಪಲ್ ಸ್ಟಾರ್.

  ಹೊಂಬಾಳೆ ಜೊತೆ ಸಿನಿಮಾ: ಕತೆಯ ಎಳೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿಹೊಂಬಾಳೆ ಜೊತೆ ಸಿನಿಮಾ: ಕತೆಯ ಎಳೆ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

  ರಿಷಬ್ ಶೆಟ್ಟಿ 'ಕಿರಿಕ್ ಪಾರ್ಟಿ 2' ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರದ ಪೂರ್ವ ತಯಾರಿಯೂ ನಡೆಯುತ್ತಿದೆ. ರಕ್ಷಿತ್ ಶೆಟ್ಟಿ ಸಹ ಬ್ಯುಸಿಯಿದ್ದು, 'ರಿಚರ್ಡ್ ಆಂಟೋನಿ' ಆದ್ಮೇಲೆ 'ಪುಣ್ಯಕೋಟಿ' ಎಂಬ ಚಿತ್ರಕ್ಕೂ ಡೈರೆಕ್ಷನ್ ಮಾಡಲಿದ್ದಾರೆ.

  2019ರಲ್ಲಿ ತೆರೆಕಂಡ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಕೊನೆಯದಾಗಿ ರಕ್ಷಿತ್ ಶೆಟ್ಟಿ ನಟಿಸಿದ್ದರು. ಸಚಿನ್ ಈ ಚಿತ್ರ ನಿರ್ದೇಶಿಸಿದ್ದರು. ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ಈ ಚಿತ್ರ ರಿಲೀಸ್ ಆಗಿತ್ತು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದ್ದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನ್, ಪ್ರಕಾಶ್ ನಿರ್ಮಾಣ ಮಾಡಿದ್ದರು. ಶಾನ್ವಿ ಶ್ರೀವಸ್ತವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಬಾಲಾಜಿ ಮನೋಹರ್, ಮಧುಸೂದನ್ ರಾವ್, ಚಂದನ್ ಆಚಾರ್ ಸೇರಿದಂತೆ ಹಲವರು ಕಲಾವಿದರು ನಟಿಸಿದ್ದರು. ದೊಡ್ಡ ಆರಂಭ ಪಡೆಯಿತಾದರೂ ನಿರೀಕ್ಷೆಯಂತೆ ಸಕ್ಸಸ್ ಸಿಗಲಿಲ್ಲ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು.

  English summary
  Kannada actor Rakshith shetty Buys Audi Q8 Car on Varamahalskhi festival.
  Saturday, August 21, 2021, 9:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X