ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?

'ಸಪ್ತಸಾಗರದಾಚೆ ಎಲ್ಲೋ' ಸರಣಿ ಬಳಿಕ ರಕ್ಷಿತ್ ಶೆಟ್ಟಿ ಸೈಲೆಂಟ್ ಆಗಿದ್ದಾರೆ. 'ರಿಚರ್ಡ್ ಆಂಟನಿ' ಸಿನಿಮಾ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ. ಸದ್ಯಕ್ಕೆ ಸಿನಿಮಾ ಶುರುವಾಗುವಂತೆ ಕಾಣುತ್ತಿಲ್ಲ ಎನ್ನಲಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಲಿದೆ.

2 ವರ್ಷಗಳ ಹಿಂದೆಯೇ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಘೋಷಿಸಿದ್ದರು. ಸಣ್ಣ ಟೀಸರ್ ಸಮೇತ ಕುತೂಹಕ ಮೂಡಿಸಿದ್ದರು. ಸದ್ಯಕ್ಕೆ ಬೇರೆ ಸಿನಿಮಾಗಳನ್ನೆಲ್ಲಾ ಪಕ್ಕಕ್ಕಿಟ್ಟು 'ರಿಚರ್ಡ್ ಆಂಟನಿ' ಧ್ಯಾನ ಮಾಡುತ್ತಿದ್ದಾರೆ. 'ಯುವ' ಬಳಿಕ ಅತ್ತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇನ್ನು ಯಾವುದೇ ಸಿನಿಮಾವನ್ನು ಆರಂಭಿಸಿಲ್ಲ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಲಿರುವ 'ಕಾಂತಾರ'-1 ಚಿತ್ರಕ್ಕಾಗಿ ಸೆಟ್ ಹಾಕಲಾಗುತ್ತಿದೆ. ಅದನ್ನು ಬಿಟ್ಟರೆ 'ರಿಚರ್ಡ್ ಆಂಟನಿ' ಶುರುವಾಗಬೇಕಿದೆ.

Rakshith shetty drops hints about Richard Anthony by re-tweeting old tweets

ಮಾರ್ಚ್ 28ರಂದು 'ಉಳಿದವರು ಕಂಡಂತೆ' ಸಿನಿಮಾ 10 ವರ್ಷ ಪೂರೈಸಿತ್ತು. ಅದೇ ಸಂಭ್ರಮದಲ್ಲೇ 'ರಿಚರ್ಡ್ ಆಂಟನಿ' ಚಿತ್ರದ ಅಪ್‌ಡೇಟ್ ಸಿಗುತ್ತದೆ ಎಂದು ಕಾದವರಿಗೆ ನಿರಾಸೆ ಎದುರಾಗಿತ್ತು. 'ಉಳಿದವರು ಕಂಡಂತೆ' ಕನ್ನಡದ ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿದೆ. ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಕೆಲವರ ಹಾಟ್ ಫೇವರಿಟ್ ಸಿನಿಮಾ ಎನಿಸಿಕೊಂಡಿದೆ.

'ಉಳಿದವರು ಕಂಡಂತೆ' ಚಿತ್ರದಲ್ಲಿ ರಿಚರ್ಡ್ ಆಂಟನಿ ಪಾತ್ರವನ್ನು ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಅದೇ ಕಾರಣಕ್ಕೆ ಪ್ರೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ರಿಚರ್ಡ್ ಆಂಟನಿ ಯಾರು? ಆತನ ಹಿನ್ನೆಲೆ ಏನು? ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಈ ಬಾರಿ ರಕ್ಷಿತ್ ಶೆಟ್ಟಿ ಹೇಳಲು ಮುಂದಾಗಿದ್ದಾರೆ. ಇಷ್ಟು ದಿನ ಮೌನವಾಗಿದ್ದ ರಕ್ಷಿತ್ ದಿಢೀರನೆ ಸರ್ಪ್ರೈಸ್ ನೀಡಿದ್ದಾರೆ.

11 ವರ್ಷಗಳ ಹಿಂದೆ 'ಉಳಿದವರು ಕಂಡಂತೆ' ಸಿನಿಮಾ ಆರಂಭಿಸುವ ಮುನ್ನ ಟ್ವೀಟ್ ಮಾಡಿ ಒಂದಷ್ಟು ಅಪ್‌ಡೇಟ್ ಕೊಟ್ಟಿದ್ದರು. ಆ ಟ್ವೀಟ್‌ಗಳನ್ನು ಇದೀಗ ರಕ್ಷಿತ್ ಶೆಟ್ಟಿ ರೀ ಟ್ವೀಟ್ ಮಾಡಿದ್ದಾರೆ. ಆದರೆ ಏನನ್ನೂ ಹೊಸದಾಗಿ ಹೇಳಿಲ್ಲ. ಇದನ್ನು ನೋಡಿದ ಅಭಿಮಾನಿಗಳಿಗೂ ಕುತೂಹಲ ಮೂಡಿದೆ. ಶೀಘ್ರದಲ್ಲೇ 'ರಿಚರ್ಡ್ ಆಂಟನಿ' ಬರ್ತಾನೆ ಎಂದು ಚರ್ಚೆ ಆರಂಭಿಸಿದ್ದಾರೆ. ಮುಂದಿನ ತಿಂಗಳು ಅಪ್‌ಡೇಟ್ ಸಿಗುತ್ತದೆ ಎನ್ನುತ್ತಿದ್ದಾರೆ.

ಮೊದಲಿಗೆ 'ಉಳಿದವರು ಕಂಡಂತೆ' ಸ್ಕ್ರಿಪ್ಟ್ ಫೈನಲ್ ಕಂಪ್ಲೀಟ್ ಆಯ್ತು ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಅದನ್ನು ಈಗ ರಕ್ಷಿತ್ ಶೆಟ್ಟಿ ರೀ ಟ್ವೀಟ್ ಮಾಡಿರುವುದು ನೋಡಿ 'ರಿಚರ್ಡ್ ಆಂಟನಿ' ಸ್ಕ್ರಿಪ್ಟ್ ಕಂಪ್ಲೀಟ್ ಆಗಿರುವ ಬಗ್ಗೆ ಈ ಮೂಲಕ ಸುಳಿವು ನೀಡಿದ್ದಾರೆ ಎನ್ನಲಾಗ್ತಿದೆ.

'ಉಳಿದವರು ಕಂಡಂತೆ' ಕಂಪ್ಲೀಟ್ ಸ್ಕ್ರಿಪ್ಟ್ ಕೇಳಿದ ಸ್ನೇಹಿತ, ತಮಿಳಿನಲ್ಲಿ ಸಿನಿಮಾ ಮಾಡುವಂತೆ ಹೇಳುತ್ತಿದ್ದಾನೆ. ಉಡುಪಿಯಲ್ಲಿ ನಡೆದ ಕಥೆಯನ್ನು ಈಗ ತಮಿಳಿನಲ್ಲಿ ಹೇಳುವುದು ಹೇಗೆ? ಎಂದು ರಕ್ಷಿತ್ ನಕ್ಕು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಅನ್ನು ಕೂಡ ಈಗ ಮತ್ತೆ ನೆನಪಿಸಿದ್ದಾರೆ. ಕೆಲವರು ಅಯ್ಯೋ ರಕ್ಷಿತ್ ಶೆಟ್ಟಿ ಅಷ್ಟು ಸೋಂಬೇರಿನಾ? ರಿಚರ್ಡ್ ಆಂಟನಿ ಬಗ್ಗೆ ಹೊಸದಾಗಿ ಟ್ವೀಟ್ ಮಾಡುಬಹುದಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸೆನ್ನಾ ಹೆಗ್ಡೆ ಸದ್ಯಕ್ಕೆ ಸ್ಕ್ರಿಪ್ಟ್‌ನಲ್ಲಿ ಯಾವುದೇ ದೊಡ್ಡ ಬದಲಾವಣೆ ಇಲ್ಲ. ಮೇ ಅಂತ್ಯದ ವೇಳೆಗೆ ಸ್ಕ್ರಿಪ್ಟ್ ಅನ್ನು ಫ್ರೀಜ್ ಮಾಡಲಾಗುತ್ತದೆ. ಅದಕ್ಕೂ ಮುನ್ನ ನನ್ನ ತಂಡದ ಜೊತೆ ಉಡುಪಿಗೆ ಶಿಫ್ಟ್ ಆಗುತ್ತೇನೆ" ಎಂದು ಮತ್ತೊಂದು ಟ್ವೀಟ್ ಮಾಡಿದ್ದರು. "ಒಬ್ಬ ನಟ ಪಕ್ಕಾ ಸ್ಕ್ರಿಪ್ಟ್ ಕೇಳುವುದು ಅಪರಾಧವಲ್ಲ ಅಥವಾ ಕೆಟ್ಟ ಮನೋಭಾವವೂ ಅಲ್ಲ... ಅದು ಅವನ ಹಕ್ಕು" ಎಂದು ಮತ್ತೊಂದು ಟ್ವೀಟ್‌ನಲ್ಲಿ ರಕ್ಷಿತ್ ಶೆಟ್ಟಿ ಬರೆದುಕೊಂಡಿದ್ದರು.

More from Filmibeat

English summary
Rakshith shetty starrer Ulidavaru Kandanthe sequel Richard Anthony update soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X