ಪ್ರೇಮಿಗಳ ದಿನ ರಶ್ಮಿಕಾ ಮಂದಣ್ಣಗೆ ರಕ್ಷಿತ್ ಕೊಟ್ಟ ಉಡುಗೊರೆ
Recommended Video

ಫೆಬ್ರವರಿ 14 ಪ್ರೇಮಿಗಳ ದಿನದಂದು ಪ್ರೇಮಿಗಳು ಉಡುಗೊರೆಯನ್ನು ಹಂಚಿಕೊಳ್ಳುವುದು ಕಾಮನ್. ತಮ್ಮ ಪ್ರೀತಿಪಾತ್ರರಿಗೆ ನೆನಪಿನಲ್ಲಿ ಉಳಿಯುವಂತಹ ಒಂದು ಗಿಫ್ಟ್ ಕೊಡಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ.
ಇನ್ನೂ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಆದ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಈ ಬಾರಿಯ ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಯಾಕಂದ್ರೆ ನಟಿ ರಶ್ಮಿಕಾ ಮಂದಣ್ಣ ತಮ್ಮ ತೆಲುಗು ಸಿನಿಮಾದ ಶೂಟಿಂಗ್ ಗಾಗಿ ಹೈದರಾಬಾದ್ ನಲ್ಲಿ ಇದ್ದರು. ಈ ಕಾರಣ ಈ ಜೋಡಿ ಈ ವರ್ಷದ ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಣೆ ಮಾಡಲು ಆಗಿಲ್ಲ.

ಆದರೆ ರಕ್ಷಿತ್ ಪ್ರೇಮಿಗಳ ದಿನದ ವಿಶೇಷವಾಗಿ ರಶ್ಮಿಕಾಗೆ ಗುಲಾಬಿ ಹೂವನ್ನು ನೀಡಿದ್ದಾರೆ. ರಶ್ಮಿಕಾಗೆ ತಿಳಿಯಂತೆ ಅವರ ಶೂಟಿಂಗ್ ಸೆಟ್ ಗೆ ಹೂವನ್ನು ಸರ್ ಪ್ರೈಸ್ ಆಗಿ ಕಳಿಸಿದ್ದರಂತೆ. ಇನ್ನೂ ರಕ್ಷಿತ್ ಕಳುಹಿಸಿದ್ದ ಸರ್ ಪ್ರೈಸ್ ನೋಡಿ ರಶ್ಮಿಕಾ ಸಖತ್ ಖುಷಿ ಆಗಿದೆ. ಇನ್ನು 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಜೋಡಿಯಾಗಿದ್ದ ರಕ್ಷಿತ್ ಮತ್ತು ರಶ್ಮಿಕಾ ರಿಯಲ್ ಲೈಫ್ ನಲ್ಲಿಯೂ ಜೋಡಿಯಾಗಿದ್ದಾರೆ.


Click it and Unblock the Notifications











