ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಂಡತೆ 'ರಿಚ್ಚಿ' ಸಿನಿಮಾ

By Pavithra

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ರೀತಿಯ ಸಿನಿಮಾ ಮಾಡಿ ಕನ್ನಡ ಪ್ರೇಕ್ಷಕರನ್ನ ಮೆಚ್ಚಿಸಿದ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ. ಚೊಚ್ಚಲ ನಿರ್ದೇಶನದ ಚಿತ್ರದಲ್ಲೇ ಸ್ಯಾಂಡಲ್ ವುಡ್ ಮಂದಿಯನ್ನ ಮಾತ್ರವಲ್ಲದೇ ಅಕ್ಕ-ಪಕ್ಕದ ಇಂಡಸ್ಟ್ರಿಯವರನ್ನ ಕೂಡ ತನ್ನ ಸಿನಿಮಾದತ್ತ ಸೆಳೆದ ನಿರ್ದೇಶಕ.

ಸಿಂಪಲ್ ಸ್ಟಾರ್ ನಿರ್ದೇಶನದ ಮೊದಲ ಚಿತ್ರ 'ಉಳಿದವರು ಕಂಡಂತೆ' ತಮಿಳಿಗೆ ರೀಮೆಕ್ ಆಗಿ 'ರಿಚ್ಚಿ' ಹೆಸರಿನಲ್ಲಿ ಇತ್ತಿಚೆಗಷ್ಟೇ ತೆರೆಕಂಡಿದೆ. ಟ್ರೇಲರ್ ಮತ್ತು ಹಾಡಿನಿಂದ ಮೋಡಿ ಮಾಡಿದ್ದ 'ರಿಚ್ಚಿ' ಸಿನಿಮಾದಲ್ಲಿ ನಿವೀನ್ ಪೌಲಿ ನಾಯಕನಾಗಿ ಅಭಿನಯಿಸಿದ್ದರು. ಕನ್ನಡದ 'ಉಳಿದವರು ಕಂಡಂತೆ' ತಮಿಳು ಚಿತ್ರರಂಗದಲ್ಲೂ ಬಾರಿ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿತ್ತು. ಕನ್ನಡದ ಶ್ರದ್ಧಾ ಶ್ರೀನಾಥ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ಅಂದ್ಹಾಗೆ, 'ರಿಚ್ಚಿ' ಚಿತ್ರವನ್ನ ನಟ ರಕ್ಷಿತ್ ಶೆಟ್ಟಿ ನೋಡಿ ಮೆಚ್ಚಿಕೊಂಡಿದ್ದಾರೆ. ತಾವು ಕಂಡಂತೆ ರಿಚ್ಚಿ ಸಿನಿಮಾ ಹೇಗಿದೆ ಎಂಬ ಅಭಿಪ್ರಾಯವನ್ನ ಟ್ವಿಟ್ಟರ್ ನಲ್ಲಿ ವ್ಯಕ್ತ ಪಡಿಸಿದ್ದಾರೆ. ಒರಿಜಿನಲ್ ನಿರ್ದೇಶಕ ಕಂಡಂತೆ ರಿಚ್ಚಿ ಸಿನಿಮಾ ಹೇಗಿದೆ.? ಮುಂದೆ ಓದಿ

'ರಿಚ್ಚಿ' ಸಿನಿಮಾ ಬೇರೆಯವರ ದೃಷ್ಠಿಕೋನ

'ರಿಚ್ಚಿ' ಸಿನಿಮಾ ಬೇರೆಯವರ ದೃಷ್ಠಿಕೋನ

''ಉಳಿದವರು ಕಂಡಂತೆ' ಸಿನಿಮಾ ಅವರವರ ದೃಷ್ಟಿಕೋನಕ್ಕೆ ತಕ್ಕಂತೆ ನೋಡುವ ಚಿತ್ರ. ನಾನು ನನ್ನ ದೃಷ್ಟಿಕೋನಕ್ಕೆ ತಕ್ಕಂತೆ ಚಿತ್ರವನ್ನ ನಿರ್ದೇಶನ ಮಾಡಿದ್ದೆ. ಬೇರೆ ನಿರ್ದೇಶಕರು ಇದೇ ಕತೆಯನ್ನ ಡೈರೆಕ್ಟ್ ಮಾಡಿದ್ರೆ ಹೇಗಿರುತ್ತೆ ಅನ್ನೋದನ್ನ ನೋಡಲು ಕಾತುರದಿಂದ ನಾನು ಕಾದಿದ್ದೆ. ಇತ್ತೀಚೆಗಷ್ಟೇ 'ರಿಚ್ಚಿ' ಚಿತ್ರವನ್ನ ಸಿನಿಮಾತಂಡದ ಜೊತೆ ನೋಡಿದೆ ಖುಷಿ ಆಯ್ತು'' - ರಕ್ಷಿತ್ ಶೆಟ್ಟಿ, ನಟ

ಹಳೆಯ ನೆನಪುಗಳ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

ಹಳೆಯ ನೆನಪುಗಳ ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ

''ನಿರ್ದೇಶಕ ಗೌತಮ್ ರಾಮಚಂದ್ರನ್ ಪ್ರಯತ್ನ ಮತ್ತು ಚಿತ್ರದ ಬಗ್ಗೆ ಇರುವ ಫ್ಯಾಷನ್ ಅನ್ನ ನಿರಾಕರಿಸುವಂತಿಲ್ಲ. ರಿಚ್ಚಿ ಪಾತ್ರವನ್ನ ನಾನು ಕ್ರಿಯೆಟ್ ಮಾಡಿದ್ದು. ನಾನು ಸಿನಿಮಾದ ಚಿತ್ರೀಕರಣ ಶುರು ಮಾಡಿದ್ದಾಗ 'ರಿಚ್ಚಿ' ಪಾತ್ರಕ್ಕೆ ಹೇಗೆ ಅಭಿನಯಿಸಬೇಕು ಅನ್ನೋದು ನನಗೆ ತಿಳಿದಿರಲಿಲ್ಲ. ಮೊದಲ ದಿನ 'ಉಳಿದವರು ಕಂಡಂತೆ' ಚಿತ್ರೀಕರಣದಲ್ಲಿ ಎರಡು ಸೀನ್ ಗಳನ್ನ ಮಾತ್ರ ಚಿತ್ರೀಕರಿಸಿದ್ದೆ. ನಂತರದ ದಿನಗಳಲ್ಲಿ 'ರಿಚ್ಚಿ' ಪಾತ್ರಧಾರಿ ನನ್ನಲ್ಲಿ ನ್ಯಾಚುರಲ್ ಆಗಿ ಬಂತು. ನಿವೀನ್ ಪೌಲಿ ಬೇರೆ ಯಾರೋ ಬರೆದ ಪಾತ್ರಕ್ಕೆ ಜೀವ ತುಂಬಿದ್ದಾರೆ. 'ರಿಚ್ಚಿ' ಅನ್ನೋದು ಬೇರೆಯದ್ದೇ ರೀತಿಯ ಪಾತ್ರ'' - ರಕ್ಷಿತ್ ಶೆಟ್ಟಿ, ನಟ

ನಿವೀನ್ ಪೌಲಿ ಧೈರ್ಯ ಮೆಚ್ಚಿದ ರಕ್ಷಿತ್ ಶೆಟ್ಟಿ

ನಿವೀನ್ ಪೌಲಿ ಧೈರ್ಯ ಮೆಚ್ಚಿದ ರಕ್ಷಿತ್ ಶೆಟ್ಟಿ

''ಉಳಿದವರು ಕಂಡಂತೆ' ಅಂತಹ ಸಿನಿಮಾ ಮಾಡಲು ಧೈರ್ಯ ಬೇಕು. ಕರಾವಳಿ ಪ್ರದೇಶದಲ್ಲಿ ನಮ್ಮಿಂದ ದೂರವಾಗಿರುವ ಕೆಲ ಸನ್ನಿವೇಶಗಳನ್ನ ನೆನಪಿಸುವ ಚಿತ್ರವಿದೆ. ಪ್ರೇಕ್ಷಕರು ಈ ತರಹದ ಚಿತ್ರಗಳನ್ನ ಇಷ್ಟ ಪಡುತ್ತಾರೆ ಇನ್ನು ಕೆಲವರಿಗೆ ಚಿತ್ರ ಇಷ್ಟವಾಗುವುದಿಲ್ಲ. ನಿವೀನ್ ಪೌಲಿ ಈ ಚಿತ್ರದಲ್ಲಿ ಧೈರ್ಯದಿಂದ ಅಭಿನಯಿಸಿದರು. 'ಪ್ರೇಮಂ' ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು ಆದರೂ ಈ ಚಿತ್ರ ಮಾಡಲು ಒಪ್ಪಿಕೊಂಡರು'' - ರಕ್ಷಿತ್ ಶೆಟ್ಟಿ, ನಟ

'ಉಳಿದವರು ಕಂಡಂತೆ' ಚಿತ್ರಕ್ಕೆ ಹೋಲಿಕೆ ಬೇಡ

'ಉಳಿದವರು ಕಂಡಂತೆ' ಚಿತ್ರಕ್ಕೆ ಹೋಲಿಕೆ ಬೇಡ

''ನಿವೀನ್ ಪೌಲಿ ಹೊರತು ಪಡೆಸಿ ಮತ್ಯಾರು ಇಷ್ಟರ ಮಟ್ಟಿಗೆ ಅಭಿನಯಿಸಲು ಸಾಧ್ಯವಿಲ್ಲ ಅನ್ನೋದು ನನ್ನ ಅಭಿಪ್ರಾಯ. ಮೂಲ ಸಿನಿಮಾದ ಜೊತೆಗೆ 'ರಿಚ್ಚಿ'ಯನ್ನ ಹೋಲಿಕೆ ಮಾಡೋದು ಬೇಡ ಅನ್ನೋದು ನನ್ನ ಅಭಿಪ್ರಾಯ'' - ರಕ್ಷಿತ್ ಶೆಟ್ಟಿ, ನಟ

More from Filmibeat

English summary
Kannada actor Rakshith Shetty has seen the film ricchi remake film of ulidavaru kandante. Look at the movie and put their review on Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X