ಮತ್ತೆ ನಿರ್ದೇಶನಕ್ಕೆ ಮರಳಿದ ಸಿಂಪಲ್ ಸ್ಟಾರ್: ರಕ್ಷಿತ್ ಈಗ 'ಪುಣ್ಯಕೋಟಿ'

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ '777ಚಾರ್ಲಿ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಭಿನಯದ ಜೊತೆಗೆ ಚಿತ್ರ ನಿರ್ಮಾಣದಲ್ಲೂ ತೊಡಗಿ ಕೊಂಡಿರುವ ರಕ್ಷಿತ್ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಸದ್ಯ '777ಚಾರ್ಲಿ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

'777ಚಾರ್ಲಿ' ಮೈಸೂರಿನ ಮಾನಸ ಗಂಗೋತ್ರಿ ವಸತಿ ಗೃಹದಲ್ಲಿ ಚಿತ್ರೀಕರಣ ಮಾಡುಯುತ್ತಿದೆ. ನಾಯಿ ಮತ್ತು ಮನುಷ್ಯನ ನಡುವಿನ ಸಂಬಂದದ ಬಗ್ಗೆ ಇರುವ ಚಾರ್ಲಿ ಸಿನಿಮಾ ಫೋಸ್ಟರ್ ಗಳ ಮೂಲಕವೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು.

ರಕ್ಷಿತ್ ಕೈಯಲ್ಲಿ ಈಗಾಗಲೇ ಎರಡ್ಮೂರು ಸಿನಿಮಾಗಳಿವೆ. ಇದರ ಜೊತೆಗೀಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿನ್ನಲ್ ನೀಡಿದ್ದಾರೆ. ಹೌದು, 'ಅವನೇ ಶ್ರೀಮನ್ನಾರಾಯಣ' ಮತ್ತು '777ಚಾರ್ಲಿ' ಚಿತ್ರಗಳಲ್ಲಿ ಬ್ಯುಸಿ ಇರುವ ಸಿಂಪಲ್ ಸ್ಟಾರ್ ಈಗ ಪುಣ್ಯಕೋಟಿ ಆಗಲು ಹೊರಟಿದ್ದಾರೆ. ರಕ್ಷಿತ್ ಹೊಸ ಸಿನಿಮಾ 'ಪುಣ್ಯಕೋಟಿ' ಯಾವಾಗ ಶುರುವಾಗಲಿದೆ?ಮುಂದೆ ಓದಿ..

ಪುಣ್ಯಕೋಟಿ ಆದ ರಕ್ಷಿತ್

ಪುಣ್ಯಕೋಟಿ ಆದ ರಕ್ಷಿತ್

ನಟ ರಕ್ಷಿತ್ ಶೆಟ್ಟಿ ಈಗ 'ಪುಣ್ಯಕೋಟಿ' ಆಗಿದ್ದಾರೆ. ಅಂದ್ರೆ ರಕ್ಷಿತ್ 'ಪುಣ್ಯಕೋಟಿ' ಎನ್ನುವ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ವರ್ಷಗಳ ಬಳಿಕ ರಕ್ಷಿತ್ ಹೊಸ ಸಿನಿಮಾ ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. 'ಪುಣ್ಯಕೋಟಿ' ತುಂಬ ಖ್ಯಾತಿಗಳಿಸಿರುವ ಕತೆ. ಹಸು ಮತ್ತು ಹಸಿದ ಹುಲಿಯನ್ನು ವ್ಯಕ್ತಿಗಳಿಗೆ ಹೋಲಿಸಿ ಮಾಡಿರುವ ಕತೆ ಇದಾಗಿದಿಯಂತೆ. ಈಗಾಗಲೆ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿಯಾಗಿದ್ದು ಚಿತ್ರ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

ಉಳಿದವರು ಕಂಡಂತೆ ನಂತರ ರಕ್ಷಿತ್ ನಿರ್ದೇಶನ

ಉಳಿದವರು ಕಂಡಂತೆ ನಂತರ ರಕ್ಷಿತ್ ನಿರ್ದೇಶನ

ರಕ್ಷಿತ್ ನಿರ್ದೇಶನದ ಮೊದಲ ಸಿನಿಮಾ 'ಉಳಿದವರು ಕಂಡಂತೆ'. ವಿಭಿನ್ನ ಕತೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ರಕ್ಷಿತ್ ಈ ಚಿತ್ರದ ನಂತರ ಮತ್ತೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ 'ಪುಣ್ಯಕೋಟಿ'. 'ಉಳಿದವರು ಕಂಡಂತೆ' ನಂತರ ಅಭಿನಯದಲ್ಲಿ ತೊಡಗಿಕೊಂಡಿದ್ದ ಸಿಂಪಲ್ ಸ್ಟಾರ್ ಅನೇಕ ವರ್ಷಗಳ ಬಳಿಕ 'ಪುಣ್ಯಕೋಟಿ' ಮತ್ತೆ ನಿರ್ದೇಶನಕ್ಕೆ ಇಳಿದಿರುವುದು ಚಿತ್ರಪ್ರಿಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಪುಣ್ಯಕೋಟಿ ತಂಡ ಸೇರಿದ ಮೊದಲಿಗರು

ಪುಣ್ಯಕೋಟಿ ತಂಡ ಸೇರಿದ ಮೊದಲಿಗರು

'ಪುಣ್ಯಕೋಟಿ' ರಕ್ಷಿತ್ ಶೆಟ್ಟಿ ನಿರ್ದೇಶನದ ಜೊತೆಗೆ ನಾಯಕನಾಗಿ ಅಭಿನಯುಿಸುತ್ತಿರುವ ಚಿತ್ರ. ಈ ಚಿತ್ರಕ್ಕೆ ಈಗ ಸಂಗೀತ ನಿರ್ದೇಶನಕ ಚರಣ್ ರಾಜ್ ಮತ್ತು ಸಿನಿಮಾಟೋಗ್ರಾಫರ್ ಕರಮ್ ಚಾವ್ಲಾ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಇವಬ್ಬರು ಬಿಟ್ಟರೆ 'ಪುಣ್ಯಕೋಟಿ' ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ಹೊರಬಿದ್ದಿಲ್ಲ. ಬಹುತೇಕ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಂ 'ಪುಣ್ಯಕೋಟಿ'ಯಲ್ಲೂ ಮುಂದುವರೆಯಲಿದ್ದಾರಂತೆ.

ಕಿರಿಕ್ ಪಾರ್ಟಿ ನಂತರ ರಕ್ಷಿತ್ ಸಿನಿಮಾ ರಿಲೀಸ್ ಆಗಿಲ್ಲ

ಕಿರಿಕ್ ಪಾರ್ಟಿ ನಂತರ ರಕ್ಷಿತ್ ಸಿನಿಮಾ ರಿಲೀಸ್ ಆಗಿಲ್ಲ

ರಕ್ಷಿತ್ ಶೆಟ್ಟಿ ಅಭಿಮಾನಿಗಳ ಮುಂದೆ ಬರದೆ ವರ್ಷಗಳೇ ಆಗಿವೆ. ಕಿರಿಕ್ ಪಾರ್ಟಿ ಸಿನಿಮಾದ ನಂತರ ಸಿಂಪಲ್ ಸ್ಟಾರ್ ಅಭಿನಯದ ಸಿನಿಮಾಗಳು ರಿಲೀಸ್ ಆಗಿಲ್ಲ. ಸುಮಾರು ಮೂರು ವರ್ಷಗಳಿಂದ ರಕ್ಷಿತ್ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಚಿತ್ರೀಕರಣ ಮುಗಿದಿದ್ದು ಆಗಸ್ಟ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯ '777 ಚಾರ್ಲಿ'ಯಲ್ಲಿ ಅಭಿನಯಿಸುತ್ತಿರುವ ರಕ್ಷಿತ್ ಆ ನಂತರ 'ಪುಣ್ಯಕೋಟಿ' ಶುರು ಮಾಡಲಿದ್ದಾರೆ.

More from Filmibeat

English summary
Kannada actor Rakshith Shetty starrer new movie 'Punyakoti' script working is going on. This movie is directed by Rakshith shetty.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X