ನಟ ರಕ್ಷಿತ್ ಶೆಟ್ಟಿ ಮತ್ತು ದಿಗಂತ್ ಕಥೆ ಇಂದಿನಿಂದ ಶುರುವಾಗಿದೆ.!
ನಟ ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಈಗ ಸಾಕಷ್ಟು ಸಿನಿಮಾಗಳು ಮೂಡಿ ಬರುತ್ತಿವೆ. ಈ ಲಿಸ್ಟ್ ಗೆ ಇದೀಗ ಮತ್ತೊಂದು ಚಿತ್ರ ಸೇರಿಕೊಂಡಿದೆ. ವಿಶೇಷ ಅಂದರೆ ಇಲ್ಲಿ ನಾಯಕನಾಗಿ ನಟ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ 'ಕಥೆಯೊಂದು ಶುರುವಾಗಿದೆ' ಎಂಬ ಟೈಟಲ್ ಇಟ್ಟಿದ್ದು, ಚಿತ್ರದ ಮುಹೂರ್ತ ಇಂದು ನೆರವೇರಿದೆ. ಮುಹೂರ್ತದ ಫೋಟೋವನ್ನು ರಕ್ಷಿತ್ ಶೆಟ್ಟಿ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ಈ ಸಿನಿಮಾ ದಿಗಂತ್ ಅವರ 'ಪಂಚರಂಗಿ' ಸ್ಟೈಲ್ ನಲ್ಲಿ ಇರಲಿದೆಯಂತೆ. 'ಪಂಚರಂಗಿ' ಸಿನಿಮಾ ನೋಡಿ ಇಷ್ಟ ಪಟ್ಟವರಿಗೆ ಈ ಚಿತ್ರ ಕೂಡ ಹತ್ತಿರವಾಗಲಿದೆಯಂತೆ.

ಅಂದಹಾಗೆ, ಜಾಹಿರಾತು ನಿರ್ದೇಶಕರಾಗಿದ್ದ ಸೀನ್ನಾ ಹೆಗ್ಡೆ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಕಾಲಿವುಡ್ ನಟಿ ಪೂಜಾ ದೇವಾರಿಯ ಚಿತ್ರದ ನಾಯಕಿ ಆಗಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಉಳಿದಂತೆ ಈ ಚಿತ್ರದ ಜೊತೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾ ರಿಲೀಸ್ ಹಂತದಲ್ಲಿದೆ. ಜೊತೆಗೆ 'ಭೀಮಸೇನ ನಳಮಹಾರಾಜ' ಮತ್ತು '777 ಚಾರ್ಲಿ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.


Click it and Unblock the Notifications











