ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಬಗ್ಗೆ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ
ಕಾಪಿ ರೈಟ್ ಉಲ್ಲಂಘಿಸಿ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಹಾಡು ಬಳಸಿದ ಆರೋಪ ಸಂಬಂಧ ನಟ ರಕ್ಷಿತ್ ಶೆಟ್ಟಿ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಆಗಿದೆ. ಈ ಬಗ್ಗೆ ಈಗ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ರಕ್ಷಿತ್, ಈಗಾಗಲೆ ಈ ಪ್ರಕರಣವನ್ನು ನಾವು ಗೆದ್ದಿದ್ದೀವಿ. ಮತ್ತೆ ಈ ವಿಷಯದಲ್ಲಿ ಮತ್ತೊಂದು ಕೇಸ್ ದಾಖಲಿಸುವುದು ಏನಿದೆ? ಎಂದು ಪ್ರಶ್ನಿಸಿದ್ದಾರೆ.
2016 ಡಿಸೆಂಬರ್ 30ರಂದು ರಿಲೀಸ್ ಆದ ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ದಲ್ಲಿ ಹೇ ಹೂ ಆರ್ ಯೂ...ಹಾಡನ್ನು ಬಳಸಲಾಗಿತ್ತು. ಈ ಹಾಡು ಶಾಂತಿ ಕ್ರಾಂತಿ ಚಿತ್ರದ ಮಧ್ಯರಾತ್ರಿಯಲ್ಲಿ ಹೈವೇ ರಸ್ತೆಯಲ್ಲಿ ಹಾಡನ್ನು ಕಾಪಿ ಮಾಡಲಾಗಿದೆ ಎಂದು ಲಹರಿ ಸಂಸ್ಥೆ ಕೇಸ್ ದಾಖಲಿಸಲಾಗಿತ್ತು. ಸಮನ್ಸ್ ನೀಡಿದ್ದರು ವಿಚಾರಣೆಗೆ ಗೈರಾಗಿದ್ದಾರೆ ಎಂದು ರಕ್ಷಿತ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್ ಗೆ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ಮುಂದೆ ಓದಿ..
ಈ ಬಗ್ಗೆ ನಮಗೆ ಯಾವುದೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ..

ರಕ್ಷಿತ್ ಟ್ವೀಟ್ ನಲ್ಲಿ ಏನಿದೆ?
ಈ ಪ್ರಕರಣದ ಬಗ್ಗೆ ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ "ನಾವು ಈಗಾಗಲೆ ಸಿವಿಲ್ ಮತ್ತು ಹೈ ಕೋರ್ಟ್ ನಲ್ಲಿ ಈ ಕೇಸ್ ಗೆದ್ದಿದ್ದೇವೆ. ಅದೇ ವಿಷಯದಲ್ಲಿ ಮತ್ತೊಂದು ಕೇಸ್ ದಾಖಲಿಸುವಲ್ಲಿ ಏನು ಪ್ರಯೋಜನವಿದೆ? ಎರಡನೆಯ ಪ್ರಕರಣವನ್ನು ಆರು ತಿಂಗಳ ಹಿಂದೆಯೇ ದಾಖಲಿಸಲಾಗಿದೆ. ಆದರೆ ನಮ್ಮ ವಕೀಲರು ಸೇರಿದಂತೆ ನಮ್ಮಲ್ಲಿ ಯಾರಿಗೂ ಈ ಬಗ್ಗೆ ಮಾಹಿತಿ ನೀಡಿಲ್ಲ. ಏಕೆ?"ಎಂದು ಪ್ರಶ್ನಿಸಿದ್ದಾರೆ.

ನಾವು ಇದಕ್ಕೆಲ್ಲ ಬಗ್ಗುವುದಿಲ್ಲ
ಮತ್ತೊಂದು ಟ್ವೀಟ್ ನಲ್ಲಿ ರಕ್ಷಿತ್ ಶೆಟ್ಟಿ "ನಾವು ಇದಕ್ಕೆಲ್ಲ ಬಗ್ಗುವಿಲ್ಲ. ಮತ್ತೆ ಫೈಟ್ ಮಾಡುತ್ತೇವೆ. ನಮ್ಮ ಸಿನಿಮಾ ಬಿಡುಗಡೆಗೆ ತುಂಬ ಕಷ್ಟವಾಗಿತ್ತು. ಆದರೆ ನಾವು ನಮ್ಮ ನೆಲದಲ್ಲಿ ನಿಂತಿದ್ದೇವೆ. ಅದೃಷ್ಟವಶಾತ್ ನಾವು ಕೊನೆಯ ಕ್ಷಣದಲ್ಲಿ ಹಾಡನ್ನು ಕತ್ತರಿಸಿ ಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಯಿತು. ಆದರೆ ನ್ಯಾಯಾಲಯದ ಅನುಮತಿ ಮೇರೆಗೆ ಸಿನಿಮಾ ರಿಲೀಸ್ ಆದ ಎರಡನೆ ವಾರ ಹಾಡನ್ನು ಸೇರಿದೆವು" ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ವಕೀಲರು ಸಂಪರ್ಕಿಸಿದ್ದರು
"ಈ ಹಿಂದೆ ನಮ್ಮ ವಿರುದ್ಧ ಕೇಸ್ ದಾಖಲಿಸಿದ್ದಾಗ ಅವರ ವಕೀಲರು ನಮ್ಮನ್ನು ಸಂಪರ್ಕಿಸಿ ಚಲನಚಿತ್ರ ಬಿಡುಗಡೆಗೆ ಸ್ಟೇ ಆರ್ಡರ್ ನೀಡಿದ್ದರು. ಮತ್ತು ಪ್ರತಿಯೊಬ್ಬರಿಂದ ವೈಯಕ್ತಿಕವಾಗಿ ಸ್ವೀಕೃತಿಯನ್ನು ಪಡೆದಿದ್ದರು" ಎಂದು ಹೇಳಿದ್ದಾರೆ.

ಲಹರಿ ಸಂಸ್ಥೆಯಿಂದ ಎರಡನೆ ಬಾರಿ ಕೇಸ್
ಕಳೆದ ವರ್ಷ ಆಗಸ್ಟ್ ನಲ್ಲಿ ಎರಡನೆ ಬಾರಿಗೆ ಲಹರಿ ಆಡಿಯೋ ಸಂಸ್ಥೆ ಕಾಪಿ ರೈಟ್ ಕಾಯ್ದೆ ಅಡಿ ರಕ್ಷಿತ್ ಶೆಟ್ಟಿ ಮತ್ತು ಪರಮವ್ಹಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ರಕ್ಷಿತ್ ಮತ್ತು ಅಜನೀಶ್ ಲೋಕನಾಥ್ ವಿಚಾರಣೆಗೆ ಹಾಜರಾಗಿಲ್ಲ ಎನ್ನುವ ಹಿನ್ನಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಟಿಸಿದೆ.

ಇದರ ಮೂಲ ಯಾವುದು ಗೊತ್ತಾಗಿದೆ...
'ವಾಟ್ಸಾಪ್ ಗ್ರೂಪ್‌ಗಳಲ್ಲಿ ಎರಡು ಚಿತ್ರಗಳು ಹರಿದಾಡುತ್ತಿದ್ದಂತೆಯೇ ಈ ಎಲ್ಲ ಆನ್‌ಲೈನ್ ಲೇಖನಗಳು ಓಡಾಡತೊಡಿವೆ. ಇದನ್ನು ಶುರುಮಾಡಿದ್ದು ಯಾರು? ಇದನ್ನು ಯಾರೇ ಮಾಡಿರಲಿ, ಕ್ಷಮಿಸಿ ನೀವು ಬುದ್ಧಿವಂತಿಕೆಯ ಕೆಲಸವನ್ನೇನೂ ಮಾಡಿಲ್ಲ. ಇದು ಆರಂಭವಾದ ಮೂಲ ಗುಂಪಿನಿಂದಲೇ ಇದನ್ನು ನಾನು ಪಡೆದುಕೊಂಡಿದ್ದೇನೆ. ಸಹೋದರ, ನೀವು ನಿಮ್ಮ ಹೆಜ್ಜೆ ಗುರುತನ್ನು ಅಲ್ಲಿಯೇ ಉಳಿಸಿದ್ದೀರಿ. ಅದು ತುಂಬಾ ದೊಡ್ಡದು' ಎಂದು ಸ್ಮೈಲಿ ಎಮೋಜಿ ಬಳಸಿ ರಕ್ಷಿತ್ ಹೇಳಿದ್ದಾರೆ.

ಬಿಡುಗಡೆಯನ್ನು ಸಂಭ್ರಮಿಸಲೂ ಆಗಿರಲಿಲ್ಲ
'ಒಂದು ವರ್ಷದ ಕಠಿಣ ಶ್ರಮದ ಬಳಿಕ ನಾವು 'ಕಿರಿಕ್ ಪಾರ್ಟಿ'ಯ ಬಿಡುಗಡೆ ಮತ್ತು ಯಶಸ್ಸನ್ನು ಸಂಭ್ರಮಿಸಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯ ಹಿಂದಿನ ದಿನ ನಾವು ಕಾನೂನು ಸಮಸ್ಯೆಗಳನ್ನು ನಿಭಾಯಿಸುವ ವಿಚಾರವಾಗಿ ಓಡಾಡುತ್ತಿದ್ದೆವು. ಸಿನಿಮಾ ಬಿಡುಗಡೆಯಾದ ಕೆಲವು ದಿನಗಳ ಬಳಿಕವೂ ಇದು ಮುಂದುವರಿದಿತ್ತು. ಆ ಹಾಡನ್ನು ಮರಳಿ ಸಿನಿಮಾದೊಳಗೆ ಸೇರಿಸಿದ ಬಳಿಕವಷ್ಟೇ ನಾವು ಸಂಭ್ರಮಾಚರಣೆ ಮಾಡಿದ್ದು' ಎಂದು ನೋವು ಹಂಚಿಕೊಂಡಿದ್ದಾರೆ.

ಇನ್ನು ಎಲ್ಲ ಮಾಹಿತಿ ಕೊಡುತ್ತೇನೆ
'ಒಳ್ಳೆಯ ಕಾರಣಗಳಿಗಾಗಿ ನಾನು ಅದರ ಬಗ್ಗೆ ಈ ಹಿಂದೆ ಮಾತನಾಡಿರಲಿಲ್ಲ. ಆದರೆ ಇನ್ನೂ ಅನೇಕ ಸುಂದರ ಅನುಭವಗಳು ಮತ್ತು ಹೊಸ ಕಲಿಕೆಗಳು ನಮ್ಮ ದಾರಿಯಲ್ಲಿ ಬರುವಂತೆ ಕಾಣಿಸುತ್ತಿವೆ. ಈ ಬಾರಿ ನಾನು ನಿಮಗೆ ಮಾಹಿತಿಗಳನ್ನು ನೀಡುತ್ತಿರುತ್ತೇನೆ. ಇದು ಮೋಜಿನದ್ದಾಗಿರಲಿದೆ' ಎಂದು ಹೇಳಿದ್ದಾರೆ.


Click it and Unblock the Notifications











