'ಚೂರಿಕಟ್ಟೆ'ಯ ಪ್ರತಿಭಾನ್ವಿತರಿಗೆ 'ರಕ್ಷಿತ್ ಶೆಟ್ಟಿ' ಸಾಥ್
ಕನ್ನಡ ಸಿನಿಮಾರಂಗದಲ್ಲಿ ಚೌಕಾಬಾರ ಎನ್ನುವ ಕಿರುಚಿತ್ರವೊಂದು ಸಾಕಷ್ಟು ಸುದ್ದಿ ಮಾಡಿತ್ತು. ಸಿನಿಮಾ ಮೇಕಿಂಗ್ ಕ್ವಾಲಿಟಿಯನ್ನೇ ಹೊಂದಿದ್ದ ಚೌಕಾಬಾರ ಕಿರುಚಿತ್ರವನ್ನ ರಘು ಶಿವಮೊಗ್ಗ ನಿರ್ದೇಶನ ಮಾಡಿದ್ದರು. ಅದೇ ನಿರ್ದೇಶಕರು ಈಗ 'ಚೂರಿಕಟ್ಟೆ' ಎನ್ನುವ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಟೈಟಲ್ ನಿಂದಲೇ ಗಾಂಧಿನಗರದ ಜನರ ಕುತೂಹಲ ಕೆರಳಿಸಿದ 'ಚೂರಿಕಟ್ಟೆ' ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿದೆ.
'ಚೂರಿಕಟ್ಟೆ' ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಪ್ರವೀಣ್ ತೇಜ್, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರೇರಣಾ ಕಂಬಂ, ಬಾಲಾಜಿ ಮನೋಹರ್, ಮಂಜುನಾಥ್ ಹೆಗ್ಡೆ... ಹೀಗೆ ಇನ್ನೂ ಅನೇಕ ನಟರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಶೇಷ ಅಂದರೆ ನಟ ರಕ್ಷಿತ್ ಶೆಟ್ಟಿ ಈ ಕಲಾವಿದರ ಪ್ರಯತ್ನಕ್ಕೆ ಸಾಥ್ ನೀಡಿ ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ.

ರಘು ಶಿವಮೊಗ್ಗ ನಿರ್ದೇಶನ ಮಾಡಿರುವ 'ಚೂರಿಕಟ್ಟೆ' ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಅನ್ನೋದು ಟೀಸರ್ ನೋಡಿದರೆ ತಿಳಿಯುತ್ತೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಾರ್ನಿಂಗ್ ಸ್ಟಾರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಮುಂದಿನ ವರ್ಷ ಬಿಡುಗಡೆಯಾಗಲಿರುವ ಡಿಫ್ರೆಂಟ್ ಜಾನರ್ ಚಿತ್ರಗಳ ಲಿಸ್ಟ್ ನಲ್ಲಿ 'ಚೂರಿಕಟ್ಟೆ'ಯೂ ಸೇರಿಕೊಳ್ಳುವುದು ಖಂಡಿತ.



Click it and Unblock the Notifications











