ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ರಕ್ಷಿತ್ ಮೊದಲ ಸಂದೇಶ ಏನು ಗೊತ್ತಾ?

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಿನ್ನೆ ರಾತ್ರಿಯಿಂದನೆ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ರಕ್ಷಿತ್. ಇಂದು ಹುಟ್ಟೂರಿನಲ್ಲಿರುವ ಕಿರಿಕ್ ಸ್ಟಾರ್ ಫ್ಯಾಮಿಲಿ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಲಿದ್ದಾರೆ.

ಇಂದು ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಾಕಷ್ಟು ಗಿಫ್ಟ್ ಗಳನ್ನು ನೀಡಿದ್ದಾರೆ. ರಕ್ಷಿತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರದ ನಂತರ ರಕ್ಷಿತ್ ಅಭಿನಯದ ಚಿತ್ರಗಳು ಮತ್ತೆ ತೆರೆ ಮೇಲೆ ಬಂದಿಲ್ಲ.

ಸಿಂಪಲ್ ಸ್ಟಾರ್ ನನ್ನು ತೆರೆ ಮೇಲೆ ನೋಡದೆ ಸುಮಾರು ಎರಡು ವರ್ಷಕ್ಕು ಅಧಿಕ ಸಮಯವಾಗಿದೆ. ಅಲ್ಲದೆ ರಕ್ಷಿತ್ ಸಾಮಾಜಿಕ ಜಾಲತಾಣದಿಂದನೂ ದೂರ ಸರಿದಿದ್ದರು. ಅಭಿಮಾನಿಗಳ ಜೊತೆಗಿನ ಸಂವಾದವನ್ನೆ ಕಡಿದುಕೊಂಡಿದ್ದ ರಕ್ಷಿತ್ ಈಗ ಮತ್ತೆ ವಾಪಸ್ ಆಗಿದ್ದಾರೆ. ಸಿನಿಮಾ ಮೂಲಕ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಕ್ಕು ವಾಪಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ರಕ್ಷಿತ್ ಮೊದಲ ಸಂದೇಶ ಏನು ಗೊತ್ತಾ? ಮುಂದೆ ಓದಿ..

ಚಂಡಮಾರುತ ಬರುವ ಮುನ್ನ ಮೌನವಿರುತ್ತಾ?

ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಮೊದಲ ಸಂದೇಶ ಕಳುಹಿಸಿದ್ದಾರೆ. ಚಂಡಮಾರುತ ಬರುವ ಮುನ್ನ ಮೌನವಿರುತ್ತಾ? ಎಂದು ಹೇಳಿದ್ದಾರೆ. ಆದ್ರೆ ಯಾವ ಅರ್ಥದಲ್ಲಿ ಎನ್ನುವುದು ಮಾತ್ರ ಸ್ಪಷ್ಟವಾಗಿ ತಿಳಿಸಿಲ್ಲವಾದ್ರು, ಇಷ್ಟು ದಿನಗಳು ಸೈಲೆಂಟ್ ಆಗಿ ಇದ್ದು, ಈಗ ಬಿರುಗಾಳಿಯಂತೆ ಎಂಟ್ರಿ ಕೊಟ್ಟಿದ್ದೀನಿ ಎನ್ನುವ ಅರ್ಥದಲ್ಲಿ ಹೇಳಿ ಕೊಂಡಿದ್ದಾರಾ ಎನ್ನುವುದು ಅಭಿಮಾನಿಗಳ ಊಹೆಯಾಗಿದೆ.

ರಕ್ಷಿತ್ ಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

ರಕ್ಷಿತ್ ಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ. ಚಂಡಮಾರುತ ಬರುವ ಮುನ್ನ ಮೌನವಿರುತ್ತಾ? ಎಂದು ಟ್ವೀಟ್ ಮಾಡಿರುವ ರಕ್ಷಿತ್ ಗೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರುವ ಜೊತೆಗೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಕಾಣಿಸಿಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಿಂದ ದೂರಸರಿದಿದ್ದ ರಕ್ಷಿತ್

ಸಾಮಾಜಿಕ ಜಾಲತಾಣದಿಂದ ದೂರಸರಿದಿದ್ದ ರಕ್ಷಿತ್

ಕಿರಿಕ್ ಸ್ಟಾರ್ ಅನೇಕ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಿಂದ ದೂರಸರಿದ್ದಿದ್ದರು. ಯಾವುದೊ ಕಾರಣಕ್ಕೆ ದಿಢೀರನೆ ಮಾಯವಾಗಿದ್ದ ರಕ್ಷಿತ್ ಮೇಲೆ ಅಭಿಮಾನಿಗಳ ಬೇಸರವು ಇತ್ತು. ಆದ್ರೀಗ ಹುಟ್ಟುಹಬ್ಬದ ದಿನ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರಕ್ಷಿತ್ ಸಿನಿಮಾ ಕೂಡ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ. ಇಷ್ಟು ದಿನಗಳು ಸೈಸೆಂಟ್ ಆಗಿದ್ದ ಕಿರಿಕ್ ಸ್ಟಾರ್ ಈಗ ಜಜರ್ದಸ್ತ್ ಎಂಟ್ರಿ ಅಭಿಮಾನಿಗಳಿಗೆ ಸಂತಸ ನೀಡಿದೆ.

ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ರಿಲೀಸ್

ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ರಿಲೀಸ್

ಆಗಸ್ಟ್ ನಲ್ಲಿ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಗೆ ಪ್ಲಾನ್ ಮಾಡಿದ ಚಿತ್ರತಂಡ. ಈಗಾಗಲೆ ಚಿತ್ರೀಕರಣ ಮುಗಿಸಿರುವ 'ಅವನೇ ಶ್ರೀಮನ್ನಾರಾಯಣ' ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಸದ್ಯ ಪೋಸ್ಟರ್ ರಿಲೀಸ್ ಆಗಿದ್ದು ಚಿತ್ರ ಭಾರಿ ಕುತೂಹಲ ಹುಟ್ಟುಹಾಕಿದೆ.

More from Filmibeat

English summary
Kannada actor Rakshith shetty return social media and he sent a first massage from twitter. Rakshith said that Was there a silence before the storm.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X