For Quick Alerts
  ALLOW NOTIFICATIONS  
  For Daily Alerts

  'ಚಾರ್ಲಿ' ಜೊತೆ ಕಾಶ್ಮೀರಕ್ಕೆ ಹೊರಟ ನಟ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸದ್ಯ '777 ಚಾರ್ಲಿ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕೊನೆಯ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ.

  ಲಾಕ್ ಡೌನ್ ಬಳಿಕ ಅಕ್ಟೋಬರ್ ನಿಂದ ಚಿತ್ರೀಕರಣ ಪ್ರಾರಂಭ ಮಾಡಿರುವ ಸಿನಿಮಾತಂಡ ಈಗಾಗಲೇ ಬೆಂಗಳೂರು, ಕೊಡೈಕೆನಾಲ್ ಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆ. ಇದೀಗ ರಕ್ಷಿತ್ ಮತ್ತು ತಂಡ ಚಾರ್ಲಿ ಜೊತೆ ಕಾಶ್ಮೀರಕ್ಕೆ ಹೊರಟಿದ್ದಾರೆ.

  ರಕ್ಷಿತ್ ಶೆಟ್ಟಿಯಿಂದ ಬಿಗ್ ಅನೌನ್ಸ್ ಮೆಂಟ್; '777 ಚಾರ್ಲಿ'ಗೆ ಎಂಟ್ರಿ ಕೊಟ್ಟ ತಮಿಳು ಸಿಂಹರಕ್ಷಿತ್ ಶೆಟ್ಟಿಯಿಂದ ಬಿಗ್ ಅನೌನ್ಸ್ ಮೆಂಟ್; '777 ಚಾರ್ಲಿ'ಗೆ ಎಂಟ್ರಿ ಕೊಟ್ಟ ತಮಿಳು ಸಿಂಹ

  ಹೌದು, '777 ಚಾರ್ಲಿ' ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯಲಿದೆ. ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿರುವ ಸಿನಿಮಾತಂಡ ಸದ್ಯ ಕಾಶ್ಮೀರಕ್ಕೆ ಪಯಣ ಬೆಳೆಸಿದೆ. ನವೆಂಬರ್ 26ರಿಂದ ಕಾಶ್ಮೀರದಲ್ಲಿ ಚಿತ್ರೀಕರಣ ಶುರು ಮಾಡಲಿದೆ ಚಾರ್ಲಿತಂಡ. ಈ ಬಗ್ಗೆ ಸಿನಿಮಾತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ.

  ಇತ್ತೀಚಿಗಷ್ಟೆ ಸಿನಿಮಾತಂಡ ಚಿತ್ರಕ್ಕೆ ತಮಿಳಿನ ಖ್ಯಾತ ನಟ ಬಾಬಿ ಸಿಂಹ ಎಂಟ್ರಿ ಕೊಟ್ಟಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಾರ್ಲಿಯಲ್ಲಿ ಬಾಬಿ ಸಿಂಹ ನಟಿಸುತ್ತಿರುವ ಬಗ್ಗೆ ರಿವೀಲ್ ಮಾಡಿದ್ದಾರೆ.

  ಅಂದಹಾಗೆ '777 ಚಾರ್ಲಿ' ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಬಗ್ಗೆ ಇರುವ ಸಿನಿಮಾವಾಗಿದೆ. ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಚಿತ್ರಗಳಲ್ಲಿ ಒಂದಾಗಿರುವ '777 ಚಾರ್ಲಿ' ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ. ನಟ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಬಳಿಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

  ರಕ್ಷಿತ್ ಬಳಿ '777 ಚಾರ್ಲಿ' ಸಿನಿಮಾ ಜೊತೆಗೆ 'ಪುಣ್ಯಕೋಟಿ', 'ಸಪ್ತ ಸಾಗರದಾಚೆ', 'ಕಿರಿಕ್ ಪಾರ್ಟಿ-2' ಮತ್ತು ಇನ್ನು ಹೆಸರಿಡದ ಒಂದು ಸಿನಿಮಾವಿದೆ. ಈ ಸಿನಿಮಾ ಬಳಿಕ ರಕ್ಷಿತ್ ಯಾವ ಸಿನಿಮಾದಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಕುತೂಹಲ ಮೂಡಿಸಿದೆ.

  English summary
  Actor Rakshith Shetty starrer 777 Charlie makers to start the finel leg of Shooting In Kashmir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X