'ಕಿರಿಕ್ ಪಾರ್ಟಿ 2'ಗೆ ಭರ್ಜರಿ ತಯಾರಿ: ರಶ್ಮಿಕಾ ಮಂದಣ್ಣ ಕಮ್‌ಬ್ಯಾಕ್?

ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಒಂದು. 'ಕಿರಿಕ್ ಪಾರ್ಟಿ' ಸಿನಿಮಾ ಹಿಟ್ ಸಿನಿಮಾ ಮಾತ್ರ ಅಲ್ಲ, ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುವ ಒಂದು ದಾಖಲೆ. ಈ ಸಿನಿಮಾ ಎಷ್ಟೋ ಕಲಾವಿದರು, ತಂತ್ರಜ್ಞರನ್ನು ಹುಟ್ಟು ಹಾಕಿದೆ.

ಈಗ 'ಕಿರಿಕ್ ಪಾರ್ಟಿ' ಚಿತ್ರದ ಬಗ್ಗೆ ಮಾತನಾಡಲು ಕಾರಣ 'ಕಿರಿಕ್ ಪಾರ್ಟಿ 2'. 'ಕಿರಿಕ್ ಪಾರ್ಟಿ' ಸಿನಿಮಾ ಬಂದಾಗಿನಿಂದಲೂ 'ಕಿರಿಕ್ ಪಾರ್ಟಿ 2' ಯಾವಾಗ ಎನ್ನುವ ಪ್ರಶ್ನೆ ಇದ್ದೇ ಇದೆ. 'ಕಿರಿಕ್ ಪಾರ್ಟಿ 2' ಚಿತ್ರಕ್ಕೆ ಈಗ ಸಮಯ ಬಂದಿದೆ.

'ಕಿರಿಕ್ ಪಾರ್ಟಿ 2' ಸಿನಿಮಾದ ತಯಾರಿಯಲ್ಲಿದೆ ಸಿನಿಮಾ ತಂಡ. ಈ ಬಗ್ಗೆ ನಿರ್ದೇಶಕ ರಿಷಬ್ ಶೆಟ್ಟಿ ಫಿಲ್ಮೀ ಬೀಟ್‌ ಜೊತೆಗೆ ಮಾತನಡಿದ್ದಾರೆ. ಸಿನಿಮಾ ಯಾವಾಗ ಸೆಟ್ಟೇರಲಿದೆ?, ಚಿತ್ರದಲ್ಲಿ ಏನೆಲ್ಲಾ ಇರಲಿದೆ?, ರಕ್ಷಿತ್ ಲುಕ್ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ....

Recommended Video

ಕಿರಿಕ್ ಪಾರ್ಟಿ ಸೀಕ್ವೆಲ್ ಬಗ್ಗೆ ರಿಷಬ್ ಶೆಟ್ಟಿ ಮಾತು | kirik party sequel #rakshitshetty

5 ವರ್ಷದ ನಂತರ 'ಕಿರಿಕ್ ಪಾರ್ಟಿ 2'!

5 ವರ್ಷದ ನಂತರ 'ಕಿರಿಕ್ ಪಾರ್ಟಿ 2'!

2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಬಂದ 'ಕಿರಿಕ್‌ ಪಾರ್ಟಿ'ಗೆ 5 ವರ್ಷ ಆಗಿದೆ. ಈಗ 'ಕಿರಿಕ್ ಪಾರ್ಟಿ 2'. ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಈಗಾಗಲೇ ಸಿನಿಮಾದ ಕೆಲಸಗಳನ್ನು ಶುರು ಮಾಡಿದ್ದಾರೆ.

 2023ರಲ್ಲಿ 'ಕಿರಿಕ್ ಪಾರ್ಟಿ 2' ಶುರು: ರಿಷಬ್ ಶೆಟ್ಟಿ

2023ರಲ್ಲಿ 'ಕಿರಿಕ್ ಪಾರ್ಟಿ 2' ಶುರು: ರಿಷಬ್ ಶೆಟ್ಟಿ

'ಕಿರಿಕ್ ಪಾರ್ಟಿ' ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ 2 ಚಿತ್ರದ ಬಗ್ಗೆ ಮಾತನಾಡಿ "ಕಿರಿಕ್ ಪಾರ್ಟಿ ಸಿನಿಮಾಗೆ ತಯಾರಿ ನಡೆಯುತ್ತಿದೆ. ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಶುರುವಾಗಿವೆ. ಕಥೆಯ ತಯಾರಿ ನಡೆಯುತ್ತಿದೆ. ಈಗಲೇ ಕಥೆಯ ಬಗ್ಗೆ ಹೆಚ್ಚಿನದಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮುಂದಿನ ವರ್ಷ 'ಕಿರಿಕ್ ಪಾರ್ಟಿ 2' ಸೆಟ್ಟೇರಲಿದೆ." ಎಂದಿದ್ದಾರೆ.

ರಕ್ಷಿತ್ ಶೆಟ್ಟಿ 3 ಲುಕ್‌ನಲ್ಲಿ ಕಾಣಿಕೊಳ್ಳಲಿದ್ದಾರೆ!

ರಕ್ಷಿತ್ ಶೆಟ್ಟಿ 3 ಲುಕ್‌ನಲ್ಲಿ ಕಾಣಿಕೊಳ್ಳಲಿದ್ದಾರೆ!

ಇನ್ನು ರಕ್ಷಿತ್ ಶೆಟ್ಟಿ ಪಾತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ, "ಈಗ ಇರುವ ರಕ್ಷಿತ್ ಶೆಟ್ಟಿ ಲುಕ್ ಸಂಪೂರ್ಣವಾಗಿ ಬದಲಾಗಲಿದೆ. ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಎರಡು, ಮೂರು ಲುಕ್‌ನಲ್ಲಿ ಕಾಣಿಕೊಳ್ಳಲಿದ್ದಾರೆ. ಈ ಸಿನಿಮಾ ಕೂಡ ಕಿರಿಕ್ ಪಾರ್ಟಿ ರೀತಿಯಲ್ಲಿ ಸಿಕ್ಕಾಪಟ್ಟೆ ಮಜಾ ಕೊಡಲಿದೆ. ಇದನ್ನು ಕೇವಲ ಲವ್ ಸ್ಟೋರಿ ಎಂದು ಹೇಳೋಕೆ ಸಾಧ್ಯವಿಲ್ಲ.

'ಕಿರಿಕ್ ಪಾರ್ಟಿ 2' ಗಾಗಿ ಬರ್ತಾರಾ ರಶ್ಮಿಕಾ ಮಂದಣ್ಣ!

'ಕಿರಿಕ್ ಪಾರ್ಟಿ 2' ಗಾಗಿ ಬರ್ತಾರಾ ರಶ್ಮಿಕಾ ಮಂದಣ್ಣ!

'ಕಿರಿಕ್ ಪಾರ್ಟಿ' ಅಂದರೆ ರಕ್ಷಿತ್, ರಿಷಬ್, ಸಂಯುಕ್ತ ಹೆಗ್ಡೆ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಹೆಸರು ತುಂಬಾನೇ ಮುಖ್ಯ. ಕಿರಿಕ್ ಪಾರ್ಟಿ ಮೂಲಕವೆ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದು. ಇನ್ನು ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕನ್ನಡದ ಯಾವ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿಲ್ಲ. ಪರಭಾಷೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಆದರೆ ಕಿರಿಕ್ ಪಾರ್ಟಿ 2 ಚಿತ್ರಕ್ಕಾಗಿ ನಟಿ ರಶ್ಮಿಕಾ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಾರ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಚಿತ್ರತಂಡ ಉತ್ತರ ನೀಡಲಿದೆ.

More from Filmibeat

English summary
Rakshith Shetty's Kirik Party 2 Will Be Launch In 2023 In Rishab Shetty Direction, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X