ಈ ವರ್ಷ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ರಿಲೀಸ್ ಇಲ್ಲ: ಮತ್ಯಾವಾಗ ಚಾರ್ಲಿ?

ಕನ್ನಡದಲ್ಲಿ ಸದಭಿರುಚಿ ಸಿನಿಮಾಗಳು ಹೆಚ್ಚಾಗಿ ಬರ್ತಿವೆ. ಮಾಸ್, ಕ್ಲಾಸ್ ಅನ್ನೋ ಹಳೆ ಸೂತ್ರವನ್ನ ಬಿಟ್ಟು ಹೊಸ ಪ್ರಯೋಗಕ್ಕೆ ಸ್ಯಾಂಡಲ್‌ವುಡ್ ಹೆಚ್ಚಾಗಿ ತೆರೆದು ಕೊಳ್ಳುತ್ತಿದೆ. ಹೊಸ ಪ್ರಯೋಗ ಮಾಡುವುದರಲ್ಲಿ ನಟ ರಕ್ಷಿತ್ ಶೆಟ್ಟಿ ಸದಾ ಮುಂದು. ಸದ್ಯಕ್ಕೆ ರಕ್ಷಿತ್‌ ಶೆಟ್ಟಿಯ 777 ಚಾರ್ಲಿ ಕೂಡ ಇದಕ್ಕೆ ಸಾಕ್ಷಿ ಆಗುತ್ತಿದೆ.

ಈಗ ಚಾರ್ಲಿ ಬಗ್ಗೆ ಮಾತನಾಡುವುದಕ್ಕೆ ಕಾರಣ ಚಿತ್ರದ ರಿಲೀಸ್‌ ಡೇಟ್. ಈಗಾಗಲೇ ಚಿತ್ರದ ರಿಲೀಸ್‌ ದಿನಾಂಕ ನಿಗದಿ ಆಗಿದೆ ಅಲ್ಲವಾ ಎನ್ನುವ ಪ್ರಶ್ನೆ ಮೂಡ ಬಹುದು. ಆದರೆ ಅದೆ ಇಲ್ಲಿರುವ ವಿಚಾರ. ಇನ್ನೇನು ಒಂದು ತಿಂಗಳಲ್ಲಿ ತೆರೆಗೆ ಬರುತ್ತದೆ. ಅದನ್ನು ನೋಡಿ ಕಣ್ತುಂಬಿ ಕೊಳ್ಳಬಹುದು ಎನ್ನುವ ನಿರೀಕ್ಷೆ ಇದ್ದರೆ ಅದನ್ನು ಈಗಲೇ ಬದಲಾಯಿಸಿಕೊಳ್ಳಿ.

ಯಾಕೆಂದರೆ 777 ಚಾರ್ಲಿ ಈ ವರ್ಷ ತೆರೆಗೆ ಬರುವುದು ಬಹುತೇಕ ಅನುಮಾನ. ಸದ್ಯ ಚಾರ್ಲಿಯ ವಿತರಣೆ ವಿಚಾರದಲ್ಲಿ ಒಂದಷ್ಟು ಬದಲಾವಣೆಗಳು ನಡೆಯುತ್ತಿವೆ. ಬಹುಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿರುವ ಕಾರಣ ಚಿತ್ರದ ರಿಲೀಸ್ ಮುಂದೆ ಹೋಗಲಿದೆ.

31-12-2021 ರಿಲೀಸ್ ಆಗೋದಿಲ್ಲವಂತೆ ಚಾರ್ಲಿ!

31-12-2021 ರಿಲೀಸ್ ಆಗೋದಿಲ್ಲವಂತೆ ಚಾರ್ಲಿ!

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಇದೇ ವರ್ಷದ ಅಂತ್ಯಕ್ಕೆ ರಿಲೀಸ್ ದಿನಾಂಕವನ್ನು ಫಿಕ್ಸ್‌ ಮಾಡಿಕೊಂಡಿದೆ. 2021ರ ಡಿಸೆಂಬರ್ 31ಕ್ಕೆ ಚಾರ್ಲಿ ರಿಲೀಸ್ ಮಾಡುವುದಾಗಿ ಚಿತ್ರ ತಂಡ ದಿನಾಂಕವನ್ನು ಪ್ರಕಟ ಮಾಡಿದೆ. ಆದರೆ ಈಗ ಅದು ಸಾಧ್ಯ ಆಗುತ್ತಿಲ್ಲ. ಯಾಕೆಂದರೆ ಚಿತ್ರದ ರಿಲೀಸ್‌ ದಿನಾಂಕ ಮುಂದೂಡುವ ಯೋಜನೆಗಳು ನಡೆಯುತ್ತಿವೆ. ಹಾಗಾಗಿ ಈ ವರ್ಷ ಚಾರ್ಲಿ ತೆರೆಗೆ ಬರುವುದಿಲ್ಲ.

ಬಾಲಿವುಡ್ ನಿರ್ಮಾಣ ಸಂಸ್ಥೆ ಕೈಯಲ್ಲಿ ಚಾರ್ಲಿ ರೈಟ್ಸ್!

ಬಾಲಿವುಡ್ ನಿರ್ಮಾಣ ಸಂಸ್ಥೆ ಕೈಯಲ್ಲಿ ಚಾರ್ಲಿ ರೈಟ್ಸ್!

ಚಾರ್ಲಿ ಸಿನಿಮಾ ಕನ್ನಡದಲ್ಲಿ ಮಾತ್ರ ತೆರೆಗೆ ಬರುತ್ತಿಲ್ಲ. ಇದು ಪ್ಯಾನ್‌ ಇಂಡಿಯಾ ಸಿನಿಮಾ. ಹಾಗಾಗಿ ಬಹುಭಾಷೆಗಳಲ್ಲಿ ಚಾರ್ಲಿ ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗಿನಲ್ಲೂ ಚಾರ್ಲಿ ಛಾಪು ಮೂಡಿಸಲಿದ್ದಾನೆ. ಹಾಗಾಗಿ ಕೇವಲ ಕನ್ನಡ ಚಿತ್ರಗಳ ಜೊತೆಗೆ ಮಾತ್ರ ರಿಲೀಸ್ ದಿನಾಂಕವನ್ನು ಹೊಂದಾಣಿಕೆ ಮಾಡಿಕೊಂಡರೆ ಸಾಲದು. ಬದಲಿಗೆ ಪ್ಯಾನ್ ಇಂಡಿಯಾ ಯಾವೆಲ್ಲಾ ಚಿತ್ರಗಳು ತೆರೆಗೆ ಬರುತ್ತಿವೆ ಎನ್ನುವುದನ್ನು ಲೆಕ್ಕ ಹಾಕ ಬೇಕಾಗುತ್ತದೆ.

ಇದೀಗ ಚಾರ್ಲಿ ವಿತರಣೆ ಹಕ್ಕು ಬಾಲಿವುಡ್ ಮತ್ತು ತೆಲುಗಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳ ಕೈ ಸೇರಿದೆ. ಹಾಗಾಗಿ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡುವ ಮಾತುಕಥೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಚಿತ್ರ ತಂಡ ಬಿಟ್ಟುಕೊಟ್ಟಿದೆ.

ಡಿಸೆಂಬರ್‌ನಲ್ಲಿ ರಿಲೀಸ್ ಆಗುವುದು ಚಾರ್ಲಿಗೆ ಸೇಫ್ ಅಲ್ಲ!

ಡಿಸೆಂಬರ್‌ನಲ್ಲಿ ರಿಲೀಸ್ ಆಗುವುದು ಚಾರ್ಲಿಗೆ ಸೇಫ್ ಅಲ್ಲ!

ಇನ್ನು ತ್ರಿಬಲ್ 7 ಚಾರ್ಲಿ ಸಿನಿಮಾ ಈ ಡಿಸೆಂಬರ್‌ನಲ್ಲಿ ತೆರೆಗೆ ಬರುವುದು ಅಷ್ಟು ಸೇಫ್ ಅಲ್ಲ ಎನ್ನುವ ಸಲುವಾಗಿ, ರಿಲೀಸ್ ಮುಂದೂಡಲು ಚಿತ್ರ ತಂಡ ನಿರ್ಧರಿಸಿದೆ. ಡಿಸೆಂಬರ್‌ನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರ ರಿಲೀಸ್ ಆದ ಎರಡು ವಾರದ ಬಳಿಕ ಚಾರ್ಲಿ ರಿಲೀಸ್ ಆದರೂ ಜನವರಿ 7ಕ್ಕೆ RRR ಚಿತ್ರ ರಿಲೀಸ್ ಆಗಲಿದೆ. ಹಾಗಾಗಿ ಚಾರ್ಲಿಗೆ ಸಿಗುವುದು ಕೇವಲ ಒಂದು ವಾರದ ಗ್ಯಾಪ್ ಮಾತ್ರ. ಇದು ಚಾರ್ಲಿಯ ಹಿಂದಿ, ತೆಲುಗು, ತಮಿಳು ಅವತರಣಿಕೆಗೆ ಹಾನಿ ಆಗಬಹುದು.

ಟೀಸರ್, ಮೇಕಿಂಗ್, ಹಾಡುಗಳಿಂದ ಕುತೂಹಲ ಹುಟ್ಟಿಸಿರುವ ಚಾರ್ಲಿ!

ಟೀಸರ್, ಮೇಕಿಂಗ್, ಹಾಡುಗಳಿಂದ ಕುತೂಹಲ ಹುಟ್ಟಿಸಿರುವ ಚಾರ್ಲಿ!

ಲೋಕದ ಜಂಜಾಟದೊಂದಿಗೆ ಬದುಕು ಸಾಗಿಸುತ್ತಿರೋ ನಾಯಕನ ಬದುಕಿನಲ್ಲಿ ಚಾರ್ಲಿ ಅನ್ನೋ ಶ್ವಾನ ಬಂದ ಮೇಲೆ ಏನೆಲ್ಲಾ ಆಗುತ್ತದೆ ಅನ್ನುವುದು ಸಿನಿಮಾ. ಈ ಸುಳಿವನ್ನು ಚಿತ್ರದ ಟ್ರೇಲರ್, ಹಾಡುಗಳು ಬಿಟ್ಟು ಕೊಟ್ಟಿವೆ. 777 ಚಾರ್ಲಿಗೆ ಕಿರಣ್ ರಾಜ್‌ ನಿರ್ದೇಶನವಿದೆ. ಪರಂವಃ ಸ್ಟೂಡಿಯೋ ನಿರ್ಮಾಣದಲ್ಲಿ ಸಿನಿಮಾ ತಯಾರಾಗುತ್ತಿದೆ. ನಟ ರಕ್ಷಿತ್‌ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ ನಾಯಕಿ ಅಭಿನಯಿಸುತ್ತಿದ್ದಾರೆ. ಚಾರ್ಲಿ ಜೊತೆಗೆ ಶಾರ್ವರಿ, ಪ್ರಾಣ್ಯ ಅನ್ನೋ ಪುಟ್ಟ ಮಕ್ಕಳು ತೆರೆಹಂಚಿಕೊಂಡಿದ್ದಾರೆ.

More from Filmibeat

English summary
Rakshith Shetty Starrer 777 Charlie Movie Likly To Be Postepone To NeXt Year
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X