777 Charlie : ಅಂತೂ ರಕ್ಷಿತ್ ಶೆಟ್ಟಿ '777 ಚಾರ್ಲಿ' ರಿಲೀಸ್‌ಗೆ ರೆಡಿ!

ಕನ್ನಡದಲ್ಲಿ ಸದಭಿರುಚಿ ಸಿನಿಮಾಗಳು ಹೆಚ್ಚಾಗಿ ಬರ್ತಿವೆ. ಮಾಸ್, ಕ್ಲಾಸ್ ಅನ್ನೋ ಹಳೆ ಸೂತ್ರವನ್ನು ಬಿಟ್ಟು ಹೊಸ ಪ್ರಯೋಗಕ್ಕೆ ಸ್ಯಾಂಡಲ್‌ವುಡ್ ಹೆಚ್ಚಾಗಿ ತೆರೆದು ಕೊಳ್ಳುತ್ತಿದೆ. ಹೊಸ ಪ್ರಯೋಗ ಮಾಡುವುದರಲ್ಲಿ ನಟ ರಕ್ಷಿತ್ ಶೆಟ್ಟಿ ಸದಾ ಮುಂದು. ಸದ್ಯಕ್ಕೆ ರಕ್ಷಿತ್ ಶೆಟ್ಟಿಯ 777 ಚಾರ್ಲಿ ಕೂಡ ಇದಕ್ಕೆ ಸಾಕ್ಷಿ ಆಗುತ್ತಿದೆ.

ಈಗ ಚಾರ್ಲಿ ಬಗ್ಗೆ ಮಾತನಾಡುವುದಕ್ಕೆ ಕಾರಣ ಚಿತ್ರದ ರಿಲೀಸ್ ಡೇಟ್. ಈಗಾಗಲೇ ಚಿತ್ರದ ರಿಲೀಸ್ ದಿನಾಂಕ ನಿಗದಿ ಆಗಿತ್ತು. ಇನ್ನೇನು ಒಂದು ತಿಂಗಳಲ್ಲಿ ತೆರೆಗೆ ಬರುತ್ತದೆ. ಚಿತ್ರವನ್ನು ಕಣ್ತುಂಬಿ ಕೊಳ್ಳಬಹುದು ಎನ್ನುವ ನಿರೀಕ್ಷೆ ಪ್ರೇಕ್ಷಕರು ಕಾಯುತ್ತಾ ಇದ್ದರು. ಆದರೆ ಕಾರಣಾಂತರಗಳಿಂದ ಚಿತ್ರದ ರಿಲೀಸ್ ಡೇಟ್‌ ಅನ್ನು ಪೋಸ್ಟ್ ಪೋನ್ ಮಾಡಲಾಯಿತು. ಈಗ ಸಿನಿಮಾ ಬಿಡುಗಡೆಯಾಗುತ್ತಿರುವ ಹೊಸ ದಿನಾಂಕವನ್ನು ಪ್ರಕಟ ಮಾಡಲು ಚಿತ್ರತಂಡ ಸಜ್ಜಾಗಿದೆ.

'777 ಚಾರ್ಲಿ' ಈ ವರ್ಷ ತೆರೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗಿತ್ತು. ಸದ್ಯ ಚಾರ್ಲಿಯ ವಿತರಣೆ ವಿಚಾರದಲ್ಲಿ ಒಂದಷ್ಟು ಬದಲಾವಣೆಗಳು ನಡೆಯುತ್ತಿವೆ. ಬಹುಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿರುವ ಕಾರಣ ಚಿತ್ರದ ರಿಲೀಸ್ ಮುಂದೂಡಲಾಗಿತ್ತು ಈಗ ಚಿತ್ರದ ರಿಲೀಸ್ ಡೇಟ್ ನಿಗದಿಯಾಗಿದೆ. ಸಿನಿಮಾ ರಿಲೀಸ್ ಯಾವಾಗ ಬಿಡುಗಡೆ ಆಗುತ್ತೆ ಎನ್ನುವುದನ್ನು ಇದೇ ಏಪ್ರಿಲ್ 10ರಂದು ಚಿತ್ರತಂಡ ಅಧಿಕೃತವಾಗಿ ಪ್ರಕಟ ಮಾಡಲಿದೆ.

 Rakshith Shetty Starrer 777 Charlie Movie Release Date Will Be Announce On 10th

ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' 2021ರ ಅಂತ್ಯಕ್ಕೆ ರಿಲೀಸ್ ದಿನಾಂಕವನ್ನು ಈ ಮೊದಲು ಫಿಕ್ಸ್ ಮಾಡಿತ್ತು. 2021ರ ಡಿಸೆಂಬರ್ 31ಕ್ಕೆ ಚಾರ್ಲಿ ರಿಲೀಸ್ ಮಾಡುವುದಾಗಿ ಚಿತ್ರ ತಂಡ ದಿನಾಂಕವನ್ನು ಪ್ರಕಟ ಮಾಡಿತ್ತು. ಆದರೆ ಈಗ ಅದು ಸಾಧ್ಯವಾಗಿಲ್ಲ. ಈಗ '777 ಚಾರ್ಲಿ' ತೆರೆಗೆ ಬರಲು ಸಂಪೂರ್ಣ ರೆಡಿಯಾಗಿದ್ದಾನೆ.

ಚಾರ್ಲಿ ಸಿನಿಮಾ ಕನ್ನಡದಲ್ಲಿ ಮಾತ್ರ ತೆರೆಗೆ ಬರುತ್ತಿಲ್ಲ. ಇದು ಪ್ಯಾನ್‌ ಇಂಡಿಯಾ ಸಿನಿಮಾ. ಹಾಗಾಗಿ ಬಹುಭಾಷೆಗಳಲ್ಲಿ ಚಾರ್ಲಿ ತೆರೆಗೆ ಬರುತ್ತಿದೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗಿನಲ್ಲೂ ಚಾರ್ಲಿ ಛಾಪು ಮೂಡಿಸಲಿದ್ದಾನೆ. ಹಾಗಾಗಿ ಕೇವಲ ಕನ್ನಡ ಚಿತ್ರಗಳ ಜೊತೆಗೆ ಮಾತ್ರ ರಿಲೀಸ್ ದಿನಾಂಕವನ್ನು ಹೊಂದಾಣಿಕೆ ಮಾಡಿಕೊಂಡರೆ ಸಾಲದು. ಬದಲಿಗೆ ಪ್ಯಾನ್ ಇಂಡಿಯಾ ಯಾವೆಲ್ಲಾ ಚಿತ್ರಗಳು ತೆರೆಗೆ ಬರುತ್ತಿವೆ ಎನ್ನುವುದನ್ನು ಲೆಕ್ಕ ಹಾಕಬೇಕಾಗುತ್ತದೆ.

 Rakshith Shetty Starrer 777 Charlie Movie Release Date Will Be Announce On 10th

ಇದೀಗ ಚಾರ್ಲಿ ವಿತರಣೆ ಹಕ್ಕು ಬಾಲಿವುಡ್ ಮತ್ತು ತೆಲುಗಿನ ಪ್ರತಿಷ್ಟಿತ ನಿರ್ಮಾಣ ಸಂಸ್ಥೆಗಳ ಕೈ ಸೇರಿದೆ. ಹಾಗಾಗಿ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಲ್ಲು ಅರ್ಜುನ್ ಅಭಿನಯದ 'ಪುಷ್ಪ' ಸಿನಿಮಾದ ಜೊತೆಗೆ ರಿಲೀಸ್ ಆಗಬೇಕಿತ್ತು. ಆದರೆ 'ಪುಷ್ಪ' ಈ ಚಿತ್ರ ರಿಲೀಸ್ ಆದ ಎರಡು ವಾರದ ಬಳಿಕ ಚಾರ್ಲಿ ರಿಲೀಸ್ ಆದರೂ ಜನವರಿ 7ಕ್ಕೆ RRR ಚಿತ್ರ ರಿಲೀಸ್ ಆಯ್ತು. ಹಾಗಾಗಿ ಚಾರ್ಲಿಗೆ ಸಿಗುವುದು ಕೇವಲ ಒಂದು ವಾರದ ಗ್ಯಾಪ್ ಮಾತ್ರ. ಇದು ಚಾರ್ಲಿಯ ಹಿಂದಿ, ತೆಲುಗು, ತಮಿಳು ಅವತರಣಿಕೆಗೆ ಹಾನಿ ಆಗಬಹುದು ಎಂದು ಚಿತ್ರವನ್ನು ರಿಲೀಸ್ ಮಾಡಲಿಲ್ಲ.

ಲೋಕದ ಜಂಜಾಟದೊಂದಿಗೆ ಬದುಕು ಸಾಗಿಸುತ್ತಿರೋ ನಾಯಕನ ಬದುಕಿನಲ್ಲಿ ಚಾರ್ಲಿ ಅನ್ನೋ ಶ್ವಾನ ಬಂದ ಮೇಲೆ ಏನೆಲ್ಲಾ ಆಗುತ್ತದೆ ಅನ್ನುವುದು ಸಿನಿಮಾ. ಈ ಸುಳಿವನ್ನು ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಬಿಟ್ಟು ಕೊಟ್ಟಿವೆ. 777 ಚಾರ್ಲಿಗೆ ಕಿರಣ್ ರಾಜ್‌ ನಿರ್ದೇಶನವಿದೆ. ಪರಂವಃ ಸ್ಟೂಡಿಯೋ ನಿರ್ಮಾಣದಲ್ಲಿ ಸಿನಿಮಾ ತಯಾರಾಗುತ್ತಿದೆ. ನಟ ರಕ್ಷಿತ್‌ ಶೆಟ್ಟಿ ಜೊತೆಗೆ ಸಂಗೀತಾ ಶೃಂಗೇರಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಾರ್ಲಿ ಜೊತೆಗೆ ಶಾರ್ವರಿ, ಪ್ರಾಣ್ಯ ಅನ್ನೋ ಪುಟ್ಟ ಮಕ್ಕಳು ತೆರೆ ಹಂಚಿಕೊಂಡಿದ್ದಾರೆ.

Recommended Video

KGF 2 | Yash | ಸಿನಿಮಾ ಕಾಂಪಿಟೇಷನ್ ಹೇಗಿರಬೇಕು ಎಂದು ಹೇಳಿದ ಯಶ್ | Watch with Kannada Subtitles

More from Filmibeat

English summary
Rakshith Shetty Starrer 777 Charlie Movie Release Date Will Be Announce On 10th, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X