777 ಚಾರ್ಲಿ ಚಿತ್ರೀಕರಣ ಮುಗಿಸಿದ ರಕ್ಷಿತ್ ಶೆಟ್ಟಿ!

ಕನ್ನಡದಲ್ಲಿ ಸದಭಿರುಚಿ ಸಿನಿಮಾಗಳು ಹೆಚ್ಚಾಗಿ ಬರ್ತಿವೆ. ಮಾಸ್, ಕ್ಲಾಸ್ ಅನ್ನೋ ಹಳೆ ಸೂತ್ರವನ್ನು ಬಿಟ್ಟು ಹೊಸ ಪ್ರಯೋಗಕ್ಕೆ ಸ್ಯಾಂಡಲ್‌ವುಡ್ ಹೆಚ್ಚಾಗಿ ತೆರೆದು ಕೊಳ್ಳುತ್ತಿದೆ. ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ನಟ ರಕ್ಷಿತ್ ಶೆಟ್ಟಿ ಸದಾ ಮುಂದು. ಸದ್ಯಕ್ಕೆ ರಕ್ಷಿತ್‌ ಶೆಟ್ಟಿ 777 ಚಾರ್ಲಿ ಮೂಲಕ ಹೊಸ ಕತೆಯನ್ನ ಹೇಳೋಕೆ ಬರ್ತಿದ್ದಾರೆ. ಈಗಾಗ್ಲೇ ಸಿನಿಮಾದ ರಿಲೀಸ್ ಡೇಟ್ ಕೂಡ ಪ್ರಕಟವಾಗಿದೆ. ಡಿಸೆಂಬರ್ 31 ರಂದು ಸಿನಿಮಾ ತೆರೆಗೆ ಬರುತ್ತೆ ಅನ್ನೋ ಸುದ್ದಿಯನ್ನು ಚಿತ್ರತಂಡ ಪ್ರಕಟಿಸಿದೆ.

ಹೀಗಾಗಿ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿರೋ ಚಿತ್ರತಂಡ ಸಿಂಪಲ್ ಆಗಿ ನಗರದ ದೇವಸ್ಥಾನದಲ್ಲಿ ಕುಂಬಳಕಾಯಿ ಹೊಡೆದಿದೆ. ಹಾಗೆ ಸಿನಿಮಾದ ಪೋಸ್ಟ್ ಪ್ರೋಡಕ್ಷನ್‌ನ ಒಂದಷ್ಟು ಕೆಲಸಗಳು ಬಾಕಿ ಇದ್ದು ಅದನ್ನು ಮುಗಿಸುತ್ತಿದೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಚಾರ್ಲಿ ಹೆಸರಿನ ಶ್ವಾನ ಕೂಡ ಇದ್ದು, ಟ್ರೈಲರ್ ಮತ್ತು ಹಾಡುಗಳಲ್ಲಿ ಶ್ವಾನದ ಪಾತ್ರ ಎಲ್ಲರನ್ನು ಆಕರ್ಷಿಸುತ್ತಿದೆ. ಇನ್ನು ಪ್ರಾಣಿ ಸಂರಕ್ಷಣಾಲಯದಲ್ಲಿ ಚಿತ್ರದ ಕಡೆಯ ದೃಶ್ಯ ಚಿತ್ರೀಕರಿಸಲಾಗಿದೆ. ಹಾಗೇ ಸಿನಿಮಾವನ್ನು ಕರ್ನಾಟಕದ ಹಲವು ಭಾಗಗಳಲ್ಲಿ ಅಂದ್ರೆ ಮೈಸೂರು, ಮಂಗಳೂರು, ಉತ್ತರ ಭಾರತದಲ್ಲಿ ಚಿತ್ರೀಕರಿಸಲಾಗಿದೆ.

ಲೋಕದ ಜಂಜಾಟದೊಂದಿಗೆ ಬದುಕು ಸಾಗಿಸುತ್ತಿರೋ ನಾಯಕನ ಬದುಕಿನಲ್ಲಿ ಚಾರ್ಲಿ ಅನ್ನೋ ಶ್ವಾನ ಬಂದ ಮೇಲೆ ಏನೆಲ್ಲಾ ಆಗುತ್ತೇ ಅನ್ನೋದನ್ನು 777 ಚಾರ್ಲಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ . ಈ ಸುಳಿವನ್ನ ಚಿತ್ರದ ಟ್ರೇಲರ್, ಹಾಡುಗಳು ಬಿಟ್ಟು ಕೊಟ್ಟಿವೆ. 777 ಚಾರ್ಲಿಗೆ ಕಿರಣ್ ರಾಜ್‌ ನಿರ್ದೇಶನ ಮಾಡಿದ್ದು, ಪರಂವ ಸ್ಟೂಡಿಯೋ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ನಟ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿ ಸಂಗೀತ ಶೃಂಗೇರಿ ಅಭಿನಯಿಸಿದ್ದು, ಚಾರ್ಲಿ ಜೊತೆಗ ಶಾರ್ವರಿ, ಪ್ರಾಣ್ಯ ಅನ್ನೋ ಪುಟ್ಟ ಮಕ್ಕಳು ತೆರೆ ಹಂಚಿಕೊಂಡಿದ್ದಾರೆ.

 Rakshith shetty starrer 777 charlie movie shooting completed

ಕೊರೋನಾ ಲಾಕ್‌ಡೌನ್ ನಂತರದಲ್ಲಿ ರಾಜ್ಯ ಸರ್ಕಾರ ೧೦೦% ಆಸನ ಭರ್ತಿಗೆ ಅವಕಾಶ ನೀಡಿದ ಮೇಲೆ ಒಂದೊಂದೆ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿವೆ. ಅಲ್ಲದೇ ಜನ ಮೆಚ್ಚುಗೆಯನ್ನು ಪಡೆದುಕೊಳ್ತಿದೆ. ಇದರ ಬೆನ್ನಲ್ಲೆ 777 ಚಾರ್ಲಿ ಸಿನಿಮಾ ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು,ಜನರಿಂದ ಯಾವ ರೀತಿ ರೆಸ್ಪಾನ್ಸ್ ಪಡೆದುಕೊಳ್ಳುತ್ತೆ ಅನ್ನೋದನ್ನು ನೋಡಲು ವರ್ಷಾಂತ್ಯ ಅಂದ್ರೆ ಡಿಸೆಂಬರ್ 31ರ ವರೆಗು ಕಾಯಲೇ ಬೇಕು.

More from Filmibeat

English summary
Rakshith shetty starrer 777 charlie update: 777 charlie movie shooting completed. Movie releasing soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X