twitter
    For Quick Alerts
    ALLOW NOTIFICATIONS  
    For Daily Alerts

    ಉತ್ತರ ಭಾರತದಲ್ಲಿ '777 ಚಾರ್ಲಿ' ಕ್ರೇಜ್: ಅಬ್ಬಬ್ಬಾ ಇಂದಿಗೂ ಥಿಯೇಟರ್‌ನಲ್ಲಿ ಸಿನಿಮಾ ಯಶಸ್ವಿ ಪ್ರದರ್ಶನ!

    |

    ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಗೊತ್ತೇಯಿದೆ. ಶ್ವಾನ ಹಾಗೂ ಮನುಷ್ಯನ ಭಾವನಾತ್ಮಕ ಬಾಂಧವ್ಯದ ಕಥಾಹಂದರ ಹೊಂದಿರುವ ಚಿತ್ರ ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಆರಂಭದಲ್ಲಿ ಚಾರ್ಲಿ ತುಂಟಾಟಕ್ಕೆ ನಕ್ಕು ಕೊನೆಕೊನೆಗೆ ಭಾವುಕರಾಗಿದ್ದರು. ಈ ಸಿನಿಮಾ ರಿಲೀಸ್ ಆಗಿ 100 ದಿನ ಕಳೆದಿದೆ. ಆದರೆ ಇವತ್ತಿಗೂ ಸಿನಿಮಾ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದು ಅಚ್ಚರಿ ಮೂಡಿಸುತ್ತಿದೆ.

    ಜೂನ್ 10ರಂದು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ '777 ಚಾರ್ಲಿ' ಸಿನಿಮಾ ರಿಲೀಸ್ ಆಗಿತ್ತು. ಅದಕ್ಕಿಂತ ಮೊದಲು ರಕ್ಷಿತ್ ಶೆಟ್ಟಿ ದೇಶದ ವಿವಿಧ ನಗರಗಳಲ್ಲಿ ಸ್ಪೆಷಲ್ ಪ್ರೀಮಿಯರ್ ಶೋಗಳನ್ನು ಏರ್ಪಡಿಸಿದ್ದರು. ದೇಶದ ಮೂಲೆ ಮೂಲೆಗೆ ಚಾರ್ಲಿ ಕಥೆಯನ್ನು ಕೊಂಡೊಯ್ದಿದ್ದರು. ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗಿತ್ತು. ಸಿನಿಮಾ ನೋಡಲು ಫ್ಯಾಮಿಲಿ ಆಡಿಯನ್ಸ್ ಮುಗಿಬಿದ್ದಿದ್ದರು. ಸಿನಿಮಾ ಒಟ್ಟು 150 ಕೋಟಿ ರೂ. ಬ್ಯುಸಿನೆಸ್ ಮಾಡಿ ದಾಖಲೆ ಬರೆದಿತ್ತು.

    '777 ಚಾರ್ಲಿ' ನಾಯಿಗೆ ನಾಯಿಗಳ ಅಭಿಮಾನಿ ಸಂಘ: ಸದಸ್ಯ ನಾಯಿಗಳ ಪಟ್ಟಿ ಇಲ್ಲಿದೆ ನೋಡಿ!'777 ಚಾರ್ಲಿ' ನಾಯಿಗೆ ನಾಯಿಗಳ ಅಭಿಮಾನಿ ಸಂಘ: ಸದಸ್ಯ ನಾಯಿಗಳ ಪಟ್ಟಿ ಇಲ್ಲಿದೆ ನೋಡಿ!

    ಚಾರ್ಲಿಯಾಗಿ ನಟಿಸಿದ್ದ ಲ್ಯಾಬ್ರಡಾರ್ ನಾಯಿ ಸ್ಟಾರ್ ಆಗಿಬಿಟ್ಟಿತ್ತು. ಕಿರಣ್ ರಾಜ್ ಅಂಡ್ ಟೀಂ ಒಂದು ಫೀಲ್ ಗುಡ್ ಸಿನಿಮಾ ಮಾಡಿ ಸಕ್ಸಸ್ ಕಂಡಿತ್ತು. ರಕ್ಷಿತ್ ಶೆಟ್ಟಿ ಧರ್ಮನ ಪಾತ್ರದಲ್ಲಿ ಮಿಂಚಿ ಸೈ ಅನ್ನಿಸಿಕೊಂಡಿದ್ದರು. ಅಷ್ಟೇ ಅಲ್ಲ ನಿರ್ಮಾಪಕರಾಗಿಯೂ ಗೆಲುವಿನ ಸಿಹಿ ಉಂಡಿದ್ದರು. ಈಗಾಗಲೇ '777 ಚಾರ್ಲಿ' ಕನ್ನಡ ವರ್ಷನ್ ಓಟಿಟಿಗೂ ಬಂದು ವೀಕ್ಷಕರನ್ನು ರಂಜಿಸಿದೆ.

    ಹರ್ಯಾಣದಲ್ಲಿ '777 ಚಾರ್ಲಿ' ಪ್ರದರ್ಶನ

    ಹರ್ಯಾಣದಲ್ಲಿ '777 ಚಾರ್ಲಿ' ಪ್ರದರ್ಶನ

    ಅಚ್ಚರಿ ಅನ್ನಿಸಿದರೂ ಇದು ನಿಜ. '777 ಚಾರ್ಲಿ' ಸಿನಿಮಾ ಹರ್ಯಾಣದ ಗುರುಗ್ರಾಮ್‌ನಲ್ಲಿರುವ ಥಿಯೇಟರ್‌ನಲ್ಲಿ ಈ ವಾರವೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿಮಾವೊಂದು ರಿಲೀಸ್ ಆಗಿ 100 ದಿನಗಳ ನಂತರ ಕೂಡ ದೂರದ ಹರ್ಯಾಣದಲ್ಲಿ ಪ್ರದರ್ಶನ ಕಾಣುತ್ತಿರುವುದು ಅಚ್ಚರಿ ಮೂಡಿಸಿದೆ. ಗುರುಗ್ರಾಮ್‌ ಧಿಶೂಂ ಸಿನಿಮಾಸ್‌ನಲ್ಲಿ ಇಂದು ಮತ್ತು ನಾಳೆ '777 ಚಾರ್ಲಿ' ಚಿತ್ರದ ಎರಡು ಶೋ ಪ್ರದರ್ಶನ ಕಾಣ್ತಿದೆ. ಸಂಜೆ 4 ಗಂಟೆ ಹಾಗೂ ರಾತ್ರಿ 10 ಗಂಟೆ ಶೋಗಳಿಗೆ ಪ್ರೇಕ್ಷಕರು ಟಿಕೆಟ್ ಬುಕ್‌ ಮಾಡ್ತಿದ್ದಾರೆ.

    ಸಾಯಿ ಪಲ್ಲವಿ ಅಲ್ಲ, 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಸಿಕ್ಕ ಹೊಸ ನಾಯಕಿ ಯಾರು?ಸಾಯಿ ಪಲ್ಲವಿ ಅಲ್ಲ, 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಸಿಕ್ಕ ಹೊಸ ನಾಯಕಿ ಯಾರು?

    ಶುಕ್ರವಾರ ಓಟಿಟಿಗೆ ಬರ್ತಿದೆ '777 ಚಾರ್ಲಿ'

    ಶುಕ್ರವಾರ ಓಟಿಟಿಗೆ ಬರ್ತಿದೆ '777 ಚಾರ್ಲಿ'

    '777 ಚಾರ್ಲಿ' ಸಿನಿಮಾ ಸೂಪರ್ ಹಿಟ್ ಆದ್ಮೇಲೆ ವೂಟ್‌ನಲ್ಲಿ ಕನ್ನಡ ವರ್ಷನ್ ಸ್ಟ್ರೀಮಿಂಗ್ ಆಗಿತ್ತು. ಆದರೆ ಕನ್ನಡ ಬಿಟ್ಟು ಉಳಿದ ಭಾಷೆಗಳಲ್ಲಿ ಸಿನಿಮಾ ಸ್ಮಾಲ್‌ ಸ್ಕ್ರೀನ್‌ಗೆ ಬಂದಿರಲಿಲ್ಲ. ಇದೇ ಶುಕ್ರವಾರ ಅಮೇಜಾನ್‌ ಪ್ರೈಮ್‌ನಲ್ಲಿ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಚಾರ್ಲಿ ಹಾಗೂ ಧರ್ಮನ ಕಥೆಯನ್ನು ನೋಡಬಹುದು. ಸಿನಿಮಾ ರಿಲೀಸ್ ಆಗಿ 100 ದಿನ ಕಳೆದರೂ ಓಟಿಟಿಗೆ ಬರದೇ ಇರುವುದು ವಿಶೇಷ.

    ಮೋಡಿ ಮಾಡುವ '777 ಚಾರ್ಲಿ' ಕಥೆ

    ಮೋಡಿ ಮಾಡುವ '777 ಚಾರ್ಲಿ' ಕಥೆ

    ತಾನಾಯ್ತು ತನ್ನ ಪಾಡಾಯ್ತು ಎಂದು ಬದುಕುವ ಧರ್ಮ. ಅವನಿಗೆ ಸಿಕ್ಕಾಪಟ್ಟೆ ಕೋಪ. ಕಾಲೋನಿಯ ಯಾರೊಟ್ಟಿಗೂ ಸೇರದ ಅವನ ಮನೆಗೆ ಒಂದು ಶ್ವಾನ ಬಂದು ಸೇರುತ್ತದೆ. ಅದರಿಂದ ಬಿಡಿಸಿಕೊಳ್ಳಬೇಕು ಎಂದು ಧರ್ಮ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ. ನಿಧಾನವಾಗಿ ಆ ಶ್ವಾನ ಅವನ ಮನಸ್ಸಿನಲ್ಲಿ ಜಾಗ ಸಂಪಾದಿಸುತ್ತದೆ. ಅದಕ್ಕೆ ಚಾರ್ಲಿ ಎಂದು ನಾಮಕರಣ ಕೂಡ ಮಾಡ್ತಾನೆ. ಎಲ್ಲವೂ ಸರಿ ಹೋಯ್ತು ಎನ್ನುವ ಸಮಯದಲ್ಲೇ ಚಾರ್ಲಿ ಧರ್ಮನಿಂದ ದೂರಾಗುವ ದಿನ ಹತ್ತಿರ ಬರೋಕೆ ಶುರುವಾಗುತ್ತದೆ. ತನ್ನ ಜೀವನಕ್ಕೆ ಬಣ್ಣ ತುಂಬಿದ ಚಾರ್ಲಿಯ ಮಹದಾಸೆಯನ್ನು ಈಡೇರಿಸಲು ಮೈಸೂರಿನಿಂದ ಕಾಶ್ಮೀರದವರೆಗೆ ಇಬ್ಬರ ಪಯಣ ಸಾಗುತ್ತದೆ.

    ಸಿನಿಮಾ ನೋಡಿ ಪ್ರಾಣಿ ಪ್ರಿಯರು ಭಾವುಕ

    ಸಿನಿಮಾ ನೋಡಿ ಪ್ರಾಣಿ ಪ್ರಿಯರು ಭಾವುಕ

    '777 ಚಾರ್ಲಿ' ಕಮರ್ಷಿಯಲ್ ಹಿಟ್ ಸಿನಿಮಾ ಅಷ್ಟೇಅಲ್ಲ, ಎಮೋಷನಲಿ ಸೂಪರ್ ಹಿಟ್ ಆದಂತಹ ಸಿನಿಮಾ. ಪ್ರಾಣಿಪ್ರಿಯರು ಸಿನಿಮಾ ನೋಡಿ ಕಣ್ಣೀರು ಸುರಿಸಿದ್ದರು. ಸಿಂಎಂ ಬಸವರಾಜ ಬೊಮ್ಮಾಯಿ, ನಟಿ ರಮ್ಯಾ ಸೇರಿದಂತೆ ಸಾಕಷ್ಟು ಗಣ್ಯರು ಸಿನಿಮಾ ನೋಡಿ ಮೆಚ್ಚುಕೊಂಡಿದ್ದರು. ಭಾವುಕರಾಗಿ ಚಿತ್ರತಂಡದ ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದರು. ಎಲ್ಲಾ ವಿಭಾಗಳಲ್ಲೂ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದ ಸಿನಿಮಾ ಇವತ್ತಿಗೂ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.

    English summary
    Rakshith Shetty Starrer 777 Charlie Successfully running now in Gurugram Dishoom Cinemas. Know More.
    Wednesday, September 28, 2022, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X