ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗಿಫ್ಟ್

Recommended Video

36ನೇ ವರ್ಷಕ್ಕೆ ಕಾಲಿಟ್ಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ | FILMIBEAT KANNADA

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಿರಿಕ್ ಸ್ಟಾರ್ ಇಂದು 36ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ರಕ್ಷಿತ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ.

ರಕ್ಷಿತ್ ಹುಟ್ಟುಹಬ್ಬದ ಪ್ರಯುಕ್ತ ರಕ್ಷಿತ್ ಅಭಿಮಾನಿಗಳಿಗೆ ಸಾಕಷ್ಟು ಗಿಫ್ಟ್ ಗಳು ಕಾದಿವೆ. ಈಗಾಗಲೆ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ಮತ್ತು '777 ಚಾರ್ಲಿ' ಚಿತ್ರದ ಎರಡು ಪೋಸ್ಟರ್ ಗಳು ರಿಲೀಸ್ ಮಾಡಲಾಗಿದೆ.

ಇಷ್ಟೆಯಲ್ಲದೆ ಬಹುನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಟೀಸರ್ ಕೂಡ ಇಂದು ಸಂಜೆ ರಿಲೀಸ್ ಮಾಡುತ್ತಿದೆ ಚಿತ್ರತಂಡ. ಇದೆಲ್ಲದರ ಜೊತೆಗೆ ರಕ್ಷಿತ್ ಸಾಮಾಜಿಕ ಜಾಲತಾಣಕ್ಕೆ ಮತ್ತೆ ಪಾವಸ್ ಆಗಿದ್ದಾರೆ. ಮುಂದೆ ಓದಿ..

ಅವನೇ ಶ್ರೀಮನ್ನಾರಾಯಣ ಪೋಸ್ಟರ್ ರಿಲೀಸ್

ಅವನೇ ಶ್ರೀಮನ್ನಾರಾಯಣ ಪೋಸ್ಟರ್ ರಿಲೀಸ್

ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಪ್ರಯುಕ್ತ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಚಿತ್ರಕ್ಕೆ ಸಚಿನ್ ರವಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಪೊಲೀಸ್ ಆಗಿ ಮಿಂಚಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ರಕ್ಷಿತ್ ಗನ್ ಹಿಡಿದು ಓಡುತ್ತಿದ್ದಾರೆ. ಇಂಟ್ರಸ್ಟಿಂಗ್ ಆಗಿರುವ ಈ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಂಜೆ ಟೀಸರ್ ರಿಲೀಸ್

ಸಂಜೆ ಟೀಸರ್ ರಿಲೀಸ್

ಅವನೇ ಶ್ರೀಮನ್ನಾರಾಯಣ ಚಿತ್ರದ ಟೀಸರ್ ಸಂಜೆ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೆ ಚಿತ್ರದಿಂದ ಪುಟ್ಟ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ. ಇಂದು ಸಿಂಪಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಎರಡನೆ ಟೀಸರ್ ರಿಲೀಸ್ ಆಗುತ್ತಿದೆ. ರಿಕ್ಷಿತ್ ಅಭಿಮಾನಿಗಳ ಮುಂದೆ ಬರದೆ ಎರಡು ವರ್ಷಗಳೆ ಆಗಿವೆ. ಹಾಗಾಗಿ ರಕ್ಷಿತ್ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ ಅಭಿಮಾನಿಗಳು.

ಅವನೇ ಶ್ರೀಮನ್ನಾರಾಯಣ ಚಿತ್ರೀಕರಣ ಮುಕ್ತಾಯ

ಅವನೇ ಶ್ರೀಮನ್ನಾರಾಯಣ ಚಿತ್ರೀಕರಣ ಮುಕ್ತಾಯ

ಅವನೇ ಶ್ರೀ ಮನ್ನಾರಾಯಣ ಚಿತ್ರೀಕರಣ ಮುಗಿಸಿ ಸದ್ಯ ಪೋಸ್ಟ್ ಪ್ರೊಡಕ್ಷನ್ಕೆಸದಲ್ಲಿ ನಿರತವಾಗಿದೆ. ಬರೋಬ್ಬರಿ 600 ದಿನಗಳ ಚಿತ್ರೀಕರಣ ಮಾಡಿದ ಅವನೇ ಶ್ರೀಮನ್ನಾರಾಯಣ ಇತ್ತೀಚಿಗಷ್ಟೆ ಕುಂಬಳಕಾಯಿ ಒಡೆದಿದೆ. ಚಿತ್ರದಲ್ಲಿ ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ.

'777 ಚಾರ್ಲಿ' ಪೋಸ್ಟರ್ ರಿಲೀಸ್

'777 ಚಾರ್ಲಿ' ಪೋಸ್ಟರ್ ರಿಲೀಸ್

ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ '777 ಚಾರ್ಲಿ' ಚಿತ್ರದ ಇಂಟ್ರಸ್ಟಿಂಗ್ ಪೋಸ್ಟರ್ ರಿಲೀಸ್ ಆಗಿದೆ. ರಕ್ಷಿತ್ ವಿಶೇಷವಾದ ಬೈಕ್ ನಲ್ಲಿ ಪ್ರೀತಿಯ ನಾಯಿ ಜೊತೆ ಏಕಾಂಗಿಯಾಗಿ ಹೋಗುತ್ತಿರುವ ಪೋಸ್ಟರ್ ಇದಾಗಿದೆ. ಚಿತ್ರದಿಂದ ರಿಲೀಸ್ ಆದ ಮೂರನೆ ಪೋಸ್ಟರ್ ಇದಾಗಿದೆ. ಕಿರಣ್ ರಾಜ್ ನಿರ್ದೇಶನದ ಚಿತ್ರ. ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ '777 ಚಾರ್ಲಿ' ಚಿತ್ರ ಚಿತ್ರಾಭಿಮಾನಿಗಳ ನಿರೀಕ್ಷೆಯ ಚಿತ್ರವಾಗಿದೆ.

ಸಾಮಾಜಿಕ ಜಾಲತಾಣಕ್ಕೆ ಮರಳಿದ ರಕ್ಷಿತ್

ಸಾಮಾಜಿಕ ಜಾಲತಾಣಕ್ಕೆ ಮರಳಿದ ರಕ್ಷಿತ್

ಕಿರಿಕ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ಸಾಮಾಜಿಕ ಜಾಲತಾಣಕ್ಕೆ ಮತ್ತೆ ವಾಪಸ್ ಆಗಿದ್ದಾರೆ. ಕೆಲವು ಕಾರಣಗಳಿಂದ ಸುಮಾರು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಿಂದ ಹಿಂದೆ ಸರಿದಿದ್ದ ರಕ್ಷಿತ್ ಇಂದು ಹುಟ್ಟುಹಬ್ಬದ ಪ್ರಯುಕ್ತ ಮತ್ತೆ ವಾಪಸ್ ಆಗಿದ್ದಾರೆ. ಇನ್ಮುಂದೆ ರಕ್ಷಿತ್ ಅಭಿನಯದ ಸಿನಿಮಾಗಳ ಸಂಪೂರ್ಣ ಮಾಹಿತಿ ರಕ್ಷಿತ್ ಪೇಜ್ ನಲ್ಲಿ ಸಿಗಲಿದೆ.

More from Filmibeat

English summary
Kannada actor Rakshith shetty is celebrate his 36th birthday. rakshith shetty starrer avane srimannarayana and 777 charlie movies posters released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X