For Quick Alerts
  ALLOW NOTIFICATIONS  
  For Daily Alerts

  ಕೇಳಲು ರೆಡಿಯಾಗಿ ಬರ್ತಿದೆ 'ಅವನೇ ಶ್ರೀಮನ್ನಾರಾಯಣ'ನ ಮೊದಲ ಹಾಡು

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ 'ಅವನೇ ಶ್ರೀಮನ್ನಾಯಣ' ಚಿತ್ರದ ಮೊದಲ ಹಾಡು ರಿಲೀಸ್ ಗೆ ಸಜ್ಜಾಗಿದೆ. ಕನ್ನಡ ಚಿತ್ರಾಭಿಮಾನಿಗಳು ಮಾತ್ರವಲ್ಲದೆ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿರುವ 'ಅವನೇ ಶ್ರೀಮನ್ನಾಯಾರಣ' ಚಿತ್ರದ ಮೊದಲ ಹಾಡು ಬರ್ತಿದೆ.

  ಇದೇ ತಿಂಗಳು 12ಕ್ಕೆ ಚಿತ್ರದ ಮೊದಲ ಹಾಡಿ ರಿಲೀಸ್ ಆಗುತ್ತಿದೆ. ವಿಶೇಷ ಅಂದರೆ ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲೂ ಹಾಡು ರಿಲೀಸ್ ಆಗುತ್ತಿದೆ. ಈಗಾಗಲೆ ಚಿತ್ರದ ಟ್ರೈಲರ್ ನೋಡಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿಕೊಂಡಿರುವ ಅಭಿಮಾನಿಗಳು ಮೊದಲ ಹಾಡು ಹೇಗಿರಲಿದೆ ಎಂದು ಕಾಯುತ್ತಿದ್ದಾರೆ. ಅಜನೀಶ್ ಲೋಕನಾಥ್ ಮತ್ತು ಚರಣ್ ರಾಜ್ ಇಬ್ಬರು ಸಂಗೀತ ಸಂಯೋಜನೆ ಮಾಡಿದ್ದಾರೆ.

  ನಟ ಪ್ರಮೋದ್ ಶೆಟ್ಟಿ ಮಗುವಿನ ನಾಮಕರಣ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿನಟ ಪ್ರಮೋದ್ ಶೆಟ್ಟಿ ಮಗುವಿನ ನಾಮಕರಣ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ

  ಈ ಬಗ್ಗೆ ನಟ ರಕ್ಷಿತೆ ಶೆಟ್ಟಿ ಟ್ವೀಟ್ ಮಾಡಿದ್ದಾರೆ. "ಅಮರಾವತಿಯಲ್ಲಿ ಅವನ ದಂತಕಥೆಯನ್ನು ಕೇಳಿದ್ದಾರೆ. ಆದರೆ ಯಾರು ಅವನನ್ನು ನೋಡಿಲ್ಲ ಮತ್ತು ಅವನು ಎಲ್ಲಿಂದ ಬಂದಿದ್ದಾರೆ ಎನ್ನುವುದನ್ನು ನೋಡಿಲ್ಲ. ಆದರೆ ಅವನಿಗೆ ಒಂದು ವಿಷಯ ತಿಳಿದಿದೆ, ಅವನು ಒಯ್ಯುವ ಗನ್ ನ ಹೆಸರು. ರೆಡಿಯಾಗಿ ಎಲ್ಲರು ಮೊದಲ ಹಾಡು ಕೇಳಲು. ಇದೇ ತಿಂಗಳು 12ಕ್ಕೆ ತೆರೆಗೆ ಬರುತ್ತಿದೆ" ಎಂದು ಹೇಳಿದ್ದಾರೆ.

  ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಇದೆ ತಿಂಗಳು 27ಕ್ಕೆ ತೆರಗೆ ಬರುತ್ತಿದೆ. ಸಚಿನ್ ನಿರ್ದೇಶ, ಪುಷ್ಕರ್ ನಿರ್ಮಾಣ ಚಿತ್ರಕ್ಕಿದೆ. ರಕ್ಷಿತ್ ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ ಕಾಣಿಸಿಕೊಂಡಿದ್ದಾರೆ. ಚಿತ್ರ ಏಕಕಾಲಕ್ಕೆ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ.

  English summary
  Kannada actor Rakshith Shetty starrer Avane Srimannarayana first song release date fix. This song will release on December 12th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X