'ಪೊನ್ನಿಯಿನ್ ಸೆಲ್ವನ್' ತಂಡ ಸೇರಿದ ರಕ್ಷಿತ್ ಶೆಟ್ಟಿ, ಸೂರ್ಯ, ಮಹೇಶ್ ಬಾಬು!

ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಮೂಡಿ ಬರಲು ಸಜ್ಜಾಗಿದೆ. ಅದು ಬೇರೆ ಯಾವ ಸಿನಿಮಾ ಅಲ್ಲ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಪೊನ್ನಿಯಿನ್ ಸೆಲ್ವನ್'. ಹೌದು ಈ ಸಿನಿಮಾ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ದೊಡ್ಡ ತಾರಾಗಣ ಹೊಂದಿರುವ ಈ ಸಿನಿಮಾ ಕಾದಂಬರಿಯನ್ನು ಆಧರಿಸಿದ ಕಥೆಯಾಗಿದೆ. ಹಾಗಾಗಿ ಚಿತ್ರದ ಮೇಲೆ ಮತ್ತು ಮಣಿರತ್ನಂ ಅವರ ನಿರ್ದೇಶನದ ಮೇಲೆ ಭರವಸೆ ಹೆಚ್ಚಾಗಿದೆ.

'ಪೊನ್ನಿಯಿನ್ ಸೆಲ್ವನ್' ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ಚಿತ್ರದಲ್ಲಿ ಹಲವು ಖ್ಯಾತ ಕಲಾವಿದರು ಇದ್ದಾರೆ. ಸೌತ್ ಜೊತೆಗೆ ಬಾಲಿವುಡ್ ಕಲಾವಿದರು ಕೂಡ ಅಭಿನಯಿಸುತ್ತಿದ್ದಾರೆ. ಈಗಾಗಲೇ ಹಲವು ಪಾತ್ರವರ್ಗದ ಪರಿಚಯವನ್ನ ಚಿತ್ರತಂಡ ಮಾಡಿಕೊಟ್ಟಿದೆ.

ಅಂದಹಾಗೆ ಈ ಸಿನಿಮಾ ಕನ್ನಡದಲ್ಲೂ ಕೂಡ ರಿಲೀಸ್ ಆಗುತ್ತದೆ. ಈ ಚಿತ್ರತಂಡದ ಜೊತೆಗೆ ಇದೀಗ ಕನ್ನಡದ ನಟ ರಕ್ಷಿತ್ ಶೆಟ್ಟಿಯ ಹೆಸರು ಕೇಳಿಬಂದಿದೆ. ಹಾಗಿದ್ರೆ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟಿಸುತ್ತಿದ್ದಾರೆ ಅಥವಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ ಎನ್ನುವ ಬಗ್ಗೆ ಮುಂದೆ ಓದಿ....

ಕನ್ನಡದ 'ಪೊನ್ನಿಯಿನ್ ಸೆಲ್ವನ್'ಗೆ ರಕ್ಷಿತಶೆಟ್ಟಿ ಸಾಥ್!

ಕನ್ನಡದ ನಟ ರಕ್ಷಿತ್ ಶೆಟ್ಟಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ತಂಡವನ್ನು ಸೇರಿಕೊಂಡಿದ್ದಾರೆ. ಹಾಗಂತ ಅವರು ಈ ಚಿತ್ರದಲ್ಲಿ ಯಾವುದೋ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಬದಲಿಗೆ ಕನ್ನಡದಲ್ಲಿ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಟೀಸರ್ ರಿಲೀಸ್ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ನಿರ್ಮಾಣ ಸಂಸ್ಥೆ ಲೈಕ ಪ್ರೊಡಕ್ಷನ್ಸ್ ಮಾಹಿತಿಯನ್ನು ಹಂಚಿಕೊಂಡಿದೆ. ಇಂದು ಸಂಜೆ ಜುಲೈ 8 'ಪೊನ್ನಿಯಿನ್ ಸೆಲ್ವನ್' ಚಿತ್ರದ ಕನ್ನಡ ಟೀಸರ್ ಅನ್ನು ರಕ್ಷಿತ್ ಶೆಟ್ಟಿ ಲಾಂಚ್ ಮಾಡಲಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಮಹೇಶ್ ಬಾಬು, ಸೂರ್ಯ, ಅಮಿತಾಬ್ ಬಚ್ಚನ್!

ಕನ್ನಡದಲ್ಲಿ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಟೀಸರನ್ನು ನಟ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಿದರೆ, ತಮಿಳಿನಲ್ಲಿ ಸೂರ್ಯ ರಿಲೀಸ್ ಮಾಡಲಿದ್ದಾರೆ. ಇನ್ನು ಹಿಂದಿಯ 'ಪೊನ್ನಿಯಿನ್ ಸೆಲ್ವನ್' ಟೀಸರ್ ಅಮಿತಾಬ್ ಬಚ್ಚನ್ ರಿಲೀಸ್ ಮಾಡುತ್ತಿದ್ದಾರೆ. ಹಾಗೆ ತೆಲುಗಿನಲ್ಲಿ ನಟ ಮಹೇಶ್ ಬಾಬು ಮತ್ತು ಮಲಯಾಳಂನಲ್ಲಿ ನಟ ಮೋಹನ್ ಲಾಲ್ ರಿಲೀಸ್ ಮಾಡುತ್ತಿದ್ದಾರೆ.

ದೊಡ್ಡ ತಾರಾಬಳಗ!

'ಪೊನ್ನಿಯಿನ್ ಸೆಲ್ವನ್' ಸಿನಿಮಾ ದೊಡ್ಡ ತಾರಾಬಳಗ ಹೊಂದಿರುವ ದೊಡ್ಡ ಸಿನಿಮಾ. ಈ ಚಿತ್ರದಲ್ಲಿ ಹಲವಾರು ಹೆಸರಾಂತ ಕಲಾವಿದರು ನಟಿಸುತ್ತಿದ್ದಾರೆ. ನಟ ವಿಕ್ರಮ್, ಜಯಂ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ, ಶರತ್ ಕುಮಾರ್, ವಿಕ್ರಂ ಪ್ರಭು, ಸೋಭಿತಾ ಧುಲಿಪಾಲ, ಪ್ರಭು, ಪ್ರಕಾಶ್ ರಾಜ್, ಪಾರ್ಥಿಬನ್, ಐಶ್ವರ್ಯ ರೈ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಇದು ಐತಿಹಾಸಿಕ ಕಾದಂಬರಿ 'ಪೊನ್ನಿಯಿನ್ ಸೆಲ್ವನ್' ಕಥೆಯನ್ನು ಆಧರಿಸಿದೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ಒದಗಿಸಿದ್ದಾರೆ.

ರಾಣಿಯ ಲುಕ್‌ನಲ್ಲಿ ಬಂದ ಐಶ್ವರ್ಯಾ ರೈ!

ಇತ್ತೀಚೆಗಷ್ಟೇ ನಟಿ ಐಶ್ವರ್ಯ ರೈ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಐಶ್ವರ್ಯ ರೈ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪೋಸ್ಟರ್ ಬಿಡುಗಡೆಯಾಗಿದೆ. ರಾಣಿಯ ಲುಕ್ ನಲ್ಲಿ ಕಾಣಿಸಿಕೊಂಡ ಐಶ್ವರ್ಯ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಐಶ್ವರ್ಯ ಈ ಲುಕ್ ಕಂಡು ಅಭಿಮಾನಿಗಳಂತೂ ಜೈಕಾರ ಹಾಕಿದ್ದಾರೆ. ಈ ಹಿಂದೆಯೂ ಐಶ್ವರ್ಯಾ ರೈ, ಮಣಿರತ್ನಂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿದ್ದಾರೆ.

ಎರಡು ಭಾಗಗಳಲ್ಲಿ ಬರಲಿದೆ 'ಪೊನ್ನಿಯಿನ್ ಸೆಲ್ವನ್'!

'ಪೊನ್ನಿಯಿನ್ ಸೆಲ್ವನ್' ದೊಡ್ಡ ಕಥೆಯಾದ ಕಾರಣಕ್ಕೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಸದ್ಯ ಮೊದಲ ಭಾಗದ ಚಿತ್ರೀಕರಣ ಮುಗಿದಿದ್ದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಚಿತ್ರ ತಮಿಳು, ಕನ್ನಡ, ತೆಲುಗು, ಹಿಂದಿ, ಮಲಯಾಳಂನಲ್ಲಿ ರಿಲೀಸ್ ಆಗುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ 'ಪೊನ್ನಿಯಿನ್ ಸೆಲ್ವನ್'.

More from Filmibeat

English summary
Rakshith Shetty, Mahesh Babu, Amitab Bachchan, Surya And Mohanlal To Be Launched Ponniyin Selvan Kannada Teaser, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X