For Quick Alerts
  ALLOW NOTIFICATIONS  
  For Daily Alerts

  ಷಷ್ಠಿ ಪೂಜೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನಟ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾನುವಾರ (ಡಿಸೆಂಬರ್ 20) ಅಲೆವೂರು ಗ್ರಾಮದ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಷಷ್ಠಿ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು. ಪ್ರತಿವರ್ಷ ಷಷ್ಠಿಗೆ ರಕ್ಷಿತ್ ಶೆಟ್ಟಿ ನಾಗದೇವತೆಗೆ ವಿಶೇಷ ಪೂಜೆ ನೆರವೇರಿಸುತ್ತಾರೆ.

  ರಕ್ಷಿತ್ ಶೆಟ್ಟಿ ಸ್ಥಳಿಯರ ಜೊತೆ ನಾಗಬನದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ಫೋಟೋ ಎಲ್ಲಾ ಕಡೆ ಹರಿದಾಡುತ್ತಿದೆ. ಕುಟುಂಬ ಸಮೇತರಾಗಿ ಬಂದು ನಾಗಬನದಲ್ಲಿ ಕುಳಿತು ರಕ್ಷಿತ್ ಶೆಟ್ಟಿ ಬೋಜನ ಸವಿದಿದ್ದಾರೆ.

  ಕೆಟಿಎಂ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದ ರಕ್ಷಿತ್ ಶೆಟ್ಟಿ

  ಇದೇ ಸಮಯದಲ್ಲಿ ಊರಿನ ಮಕ್ಕಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಇನ್ನು ತುಳುವಿನ 'ಬೋಡ ಶೀರಾ' ಸಿನಿಮಾದ ಪೋಸ್ಟರ್ ಅನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಮತ್ತು ನಿರ್ಮಾಪಕ ಡಿಕ್ಸನ್ ಜೆಡಿ, ನಟಿ ರೊಲೆಂಡ್ ಅಲಿಶಾ, ಶಮಿತಾ ಸಾಲಿಯಾನ್ ಸಹ ಜೊತೆಯಲ್ಲಿದ್ದರು.

  ಪ್ರತಿವರ್ಷ ತಪ್ಪದೆ ಷಷ್ಠಿಯಲ್ಲಿ ರಕ್ಷಿತ್ ಭಾಗಿಯಾಗುತ್ತಾರೆ. ಈ ಬಾರಿ ಸಹ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ರಕ್ಷಿತ್ ಭಾನುವಾರ ಸಂಪೂರ್ಣ ದಿನ ಕುಟುಂಬ ಸದಸ್ಯರ ಜೊತೆ ಕಾಲಕಳೆದಿದ್ದಾರೆ. ಸಿಂಪಲ್ ಸ್ಟಾರ್ ಸದ್ಯ 777 ಚಾರ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ದೊಡ್ಡದಾಗಿ ಸಿಗ್ನಲ್ ಕೊಟ್ಟ ರಾಕಿ ಭಾಯ್ | Filmibeat Kannada

  777 ಚಾರ್ಲಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚಿಗಷ್ಟೆ ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿಸಿ ಸಿನಿಮಾತಂಡ ವಾಪಸ್ ಆಗಿದ್ದಾರೆ. ಡಿಸೆಂಬರ್ ನಲ್ಲಿ 777ಚಾರ್ಲಿ ಚಿತ್ರೀಕರಣ ಮುಗಿಸಿ ರಕ್ಷಿತ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಲಿದ್ದಾರೆ.

  English summary
  Sandalwood Actor Rakshith Shetty visits his native place at Udupi for Shashti Pooja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X