For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಮುಂದಿನ ಚಿತ್ರಕ್ಕೆ ಪ್ರೇಮ್ ನಿರ್ದೇಶನ: ವೈರಲ್ ಟ್ವೀಟ್ ಹಿಂದಿನ ಅಸಲಿಯತ್ತೇನು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ 'ರಾಬರ್ಟ್' ಸಿನಿಮಾ ಬಳಿಕ ಯಾವ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ನಿರ್ಮಾಪಕ ರಾಕ್ ಲೈಕ್ ವೆಂಕಟೇಶ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಯಾವಾಗ? ನಿರ್ದೇಶಕ ಯಾರು? ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ.

  ದರ್ಶನ್ ಮುಂದಿನ ಸಿನಿಮಾ ಯಾವುದು, ಯಾರ ಜೊತೆ ಎಂದು ಕುತೂಹಲ ಮೂಡಿಸಿರುವ ಬೆನ್ನಲ್ಲೇ ನಿರ್ದೇಶಕ ಪ್ರೇಮ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಬಂದ ಟ್ವೀಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಟ್ವೀಟ್ ನಲ್ಲಿ ದರ್ಶನ್ ಜೊತೆ ಮುಂದಿನ ಸಿನಿಮಾ ಮಾಡುವುದಾಗಿ ಪ್ರೇಮ್ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ ದರ್ಶನ್ ಗೆ ಪ್ರೇಮ್ ನಿರ್ದೇಶನ ಮಾಡ್ತಾರೆ ಎನ್ನುವ ಸುದ್ದಿ ಹೊಸದಲ್ಲ. ಕಳೆದ ಎರಡು ವರ್ಷಗಳಿಂದ ಈ ಸುದ್ದಿ ಕೇಳಿಬರುತ್ತಿದೆ. ಆದರೀಗ ಪ್ರೇಮ್ ಹೆಸರಿನ ಖಾತೆಯಿಂದ ಬಂದಿರುವ ಟ್ವೀಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಮುಂದೆ ಓದಿ..

  ಪ್ರೇಮ್ ಹೆಸರಿನ ಖಾತೆಯಿಂದ ಬಂದ ಟ್ವೀಟ್

  ಪ್ರೇಮ್ ಹೆಸರಿನ ಖಾತೆಯಿಂದ ಬಂದ ಟ್ವೀಟ್

  'ಪ್ರತಿಯೊಬ್ಬರು ಮುಂದಿನ ಸಿನಿಮಾ ಯಾವುದು ಎಂದು ಕೇಳುತ್ತಿದ್ದೀರಿ. ಏಕ್ ಲವ್ ಯಾ ಬಳಿಕ ನಾನು ನನ್ನ ಗೆಳೆಯ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ. ಇವತ್ತು ಸಿನಿಮಾ ಘೋಷಣೆ ಮಾಡುತ್ತೇೆನೆ. ದರ್ಶನ್ ಅವರ 55ನೇ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಮತ್ತು ಟೈಟಲ್ ಸದ್ಯದಲ್ಲೇ ಅನೌನ್ಸ್ ಮಾಡುತ್ತೆ' ಎಂದು ಟ್ವೀಟ್ ಮಾಡಿ, ರಾಕ್ ಲೈನ್ ವೆಂಕಟೇಶ್ ಹೆಸರಿಗೆ ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

  ಸ್ಪಷ್ಟನೆ ನೀಡಿದ ರಕ್ಷಿತಾ

  ಸ್ಪಷ್ಟನೆ ನೀಡಿದ ರಕ್ಷಿತಾ

  ನಿರ್ದೇಶಕ ಪ್ರೇಮ್ ಖಾತೆಯಿಂದ ಟ್ವೀಟ್ ಎಂದು ಅಭಿಮಾನಿಗಳ ಕುತೂಹಲ ದುಪ್ಪಟ್ಟಾಗಿತ್ತು. ಈ ವೈರಲ್ ಆಗುತ್ತಿದ್ದಂತೆ ನಟಿ ರಕ್ಷಿತಾ ಈ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಚರ್ಚೆಗೆ ಬ್ರೇಕ್ ಹಾಕಿದ್ರು. ಇದು ಪ್ರೇಮ್ ಅವರ ನಕಲಿ ಟ್ವಿಟ್ಟರ್ ಖಾತೆ, ಈ ಟ್ವೀಟ್ ಮಾಡಿದ್ದು ಪ್ರೇಮ್ ಅಲ್ಲ ಎಂದು ರಕ್ಷಿತಾ ಸ್ಪಷ್ಟಪಡಿಸಿದ್ದಾರೆ.

  ಈ ಸುದ್ದಿ ನಿಜವಲ್ಲ ಎಂದ ಕ್ರೇಜಿ ಕ್ವೀನ್

  ಈ ಸುದ್ದಿ ನಿಜವಲ್ಲ ಎಂದ ಕ್ರೇಜಿ ಕ್ವೀನ್

  ಟ್ವೀಟ್ ನ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ರಕ್ಷಿತಾ, 'ಇದು ಪ್ರೇಮ್ ಖಾತೆಯಲ್ಲ. ಯಾರು ಇದನ್ನೆಲ್ಲ ಹೇಳಿದ್ದಾರೋ ಅವರಿಗೆ ದೇವರು ಒಳ್ಳೆಯದು ಮಾಡಲಿ. ಸದ್ಯದಲ್ಲೇ ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಇದು ನಿಜವಲ್ಲ' ಎಂದು ಹೇಳಿದ್ದಾರೆ.

  ಏಕ್ ಲವ್ ಯಾ ಸಿನಿಮಾದಲ್ಲಿ ಪ್ರೇಮ್ ಬ್ಯುಸಿ

  ಏಕ್ ಲವ್ ಯಾ ಸಿನಿಮಾದಲ್ಲಿ ಪ್ರೇಮ್ ಬ್ಯುಸಿ

  ಅಂದಹಾಗೆ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಏಕ್ ಲವ್ ಯಾ ಸಿನಿಮಾಗೆ ರಕ್ಷಿತಾ ನಿರ್ಮಾಪಕಿಯಾಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

  ಸಿಎಂ ಸಾಹೇಬ್ರು ರಾಜೀನಾಮೆ ಕೊಡಬೇಕಂತೆ-ಮಠ ಡೈರೆಕ್ಟರ್ ರಿಂದ ಬಿಎಸ್ ವೈಗೆ ಫುಲ್ ಕ್ಲಾಸ್ | Guru prasad | Filmibeat Kannada
  ಈ ಹಿಂದೆಯೂ ಕಿಡಿಗೇಡಿಗಳು ಇಂಥ ಕೆಲಸ ಮಾಡಿದ್ದರು

  ಈ ಹಿಂದೆಯೂ ಕಿಡಿಗೇಡಿಗಳು ಇಂಥ ಕೆಲಸ ಮಾಡಿದ್ದರು

  ಅಂದಹಾಗೆ ಪ್ರೇಮ್ ಹೆಸರಿನ ನಕಲಿ ಖಾತೆಯಿಂದ ಟ್ವೀಟ್ ಮಾಡಿ ಅಭಮಾನಿಗಳನ್ನು ಗೊಂದಲಕ್ಕೀಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಸಹ ಸುದೀಪ್ ಜೊತೆ ಇಂಡಿಯಾದಲ್ಲೇ ಯಾರು ಮಾಡದ ಸಿನಿಮಾವನ್ನು ಮಾಡಲು ಹೊರಟಿದ್ದೇನೆ, ದಯವಿಟ್ಟು ನಿಮ್ಮ ಪ್ರೀತಿ ಇರಲಿ ಎಂದು ಪ್ರೇಮ್ ಹೆಸರಿನ ನಕಲಿ ಖಾತೆಯಿಂದ ಯಾರೋ ಕಿಡಿಗೇಡಿಗಳು ಮಾಡಿರುವ ಟ್ವೀಟ್ ವೈರಲ್ ಆಗಿತ್ತು. ಬಳಿಕ ನಕಲಿ ಎನ್ನುವ ಸತ್ಯ ಬಹಿರಂಗವಾಗಿತ್ತು.

  English summary
  Actress Rakshitha clarifies about Prem's next movie Darshan viral tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X