For Quick Alerts
  ALLOW NOTIFICATIONS  
  For Daily Alerts

  ಮುನಿಸು ಬಿಟ್ಟು ಗೆಳೆತನ ಮುಂದುವರೆಸಿದ ರಕ್ಷಿತಾ-ದರ್ಶನ್

  |

  ಚಿತ್ರರಂಗದ ಒಳ್ಳೆಯ ಗೆಳೆತನಗಳಲ್ಲಿ ದರ್ಶನ್ ಹಾಗೂ ರಕ್ಷಿತಾ ಅವರದ್ದು ಸಹ ಒಂದು. ಇಬ್ಬರು ಬಹಳ ವರ್ಷಗಳಿಂದಲೂ ಆತ್ಮೀಯ ಗೆಳೆಯರು. ಆದರೆ ದರ್ಶನ್ ಹೇಳಿದ್ದ ಒಂದು ಮಾತಿನಿಂದ ಈ ಗೆಳೆತನಕ್ಕೆ ಪೆಟ್ಟು ಬಿದ್ದಿತ್ತು. ಆದರೆ ಮುನಿಸು ಬಿಟ್ಟು ಇಬ್ಬರೂ ಮತ್ತೆ ಗೆಳೆತನ ಮುಂದುವರೆಸಿದ್ದಾರೆ ಎನ್ನುತ್ತಿದೆ ರಕ್ಷಿತಾ ಹಂಚಿಕೊಂಡಿರುವ ಫೋಟೊ.

  ನನ್ನ ಜೀವನದಲ್ಲಿ ಇರುವುದಕ್ಕೆ ಧನ್ಯವಾದಗಳು ದರ್ಶನ್

  ರಕ್ಷಿತಾ, ದರ್ಶನ್ ಜೊತೆಗಿರುವ ಚಿತ್ರವೊಂದನ್ನು ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ''ಕೆಲವು ಸಂಬಂಧಗಳು ಜೀವನ ಪರ್ಯಂತ ಇರುತ್ತವೆ. ನನಗೆ ಗೊತ್ತಿದೆ ನೀನು (ದರ್ಶನ್) ನನ್ನ ಜೊತೆ ಇರುತ್ತೀಯೆಂದು. ನನ್ನ ಜೀವನದಲ್ಲಿರುವುದಕ್ಕೆ ಧನ್ಯವಾದ'' ಎಂದು ಒಕ್ಕಣೆಯನ್ನೂ ಬರೆದಿದ್ದಾರೆ ರಕ್ಷಿತಾ.

  ಇಂದ್ರಜಿತ್ ಲಂಕೇಶ್ ಎಬ್ಬಿಸಿದ್ದ ವಿವಾದದ ಬಗ್ಗೆ ಮಾಧ್ಯಮಗಳೊಟ್ಟಿಗೆ ಸುದೀರ್ಘವಾಗಿ ಮಾತನಾಡಿದ್ದ ನಟ ದರ್ಶನ್, ಮಾತಿನ ನಡುವೆ ರಕ್ಷಿತಾ ಪತಿ ಪ್ರೇಮ್ ವಿಷಯವನ್ನು ಅನವಶ್ಯಕವಾಗಿ ಪ್ರಸ್ತಾಪಿಸಿದ್ದರು. 'ಪ್ರೇಮ್ ಏನು ಪುಡುಂಗಾ' ಎಂದು ಕಟುವಾಗಿಯೇ ಪ್ರಶ್ನೆ ಮಾಡಿದ್ದರು.

  ದರ್ಶನ್‌ರ ಈ ಮಾತಿಗೆ ನಟ ಪ್ರೇಮ್ ತೀವ್ರ ಬೇಸರ ವ್ಯಕ್ತಪಡಿಸಿ, 'ನಿರ್ದೇಶಕರು ಸಿನಿಮಾ ಮಾಡಿದರೇನೆ ನಟರು ಸ್ಟಾರ್‌ಗಳಾಗುವುದು. ನಿರ್ದೇಶಕರ ಸಮುದಾಯವನ್ನು ದರ್ಶನ್ ಅಪಮಾನಿಸಿದ್ದಾರೆ' ಎಂದಿದ್ದರು. ನಟಿ ರಕ್ಷಿತಾ ಸಹ ದರ್ಶನ್ ಮಾತಿನಿಂದ ಮನನೊಂದು ಕೆಲವು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಪ್ರೇಮ್ ಅಂತೂ ಇನ್ನು ಮುಂದೆ ದರ್ಶನ್‌ ಜೊತೆ ಸಿನಿಮಾ ಮಾಡುವುದಿಲ್ಲ ಎಂದು ಸಹ ಘೋಷಿಸಿದ್ದರು.

  ಆದರೆ ಅದೆಲ್ಲದರ ಬಳಿಕ ಈಗ ನಟಿ ರಕ್ಷಿತಾ, ದರ್ಶನ್‌ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ದರ್ಶನ್‌ ಬಗ್ಗೆ ಒಳ್ಳೆಯ ಮಾತನ್ನಾಡಿರುವುದು ಇಬ್ಬರ ಅಭಿಮಾನಿಗಳಿಗೆ ಸಂತಸ ತಂದಿದೆ. ಇಬ್ಬರೂ ಮತ್ತೆ ತಮ್ಮ ಗೆಳೆತನ ಮುಂದುವರೆಸಿರುವುದು ಖುಷಿ ಕೊಟ್ಟಿದೆ.

  English summary
  Actress Rakshitha Prem posted photo with Darshan. Few days back Rakshita upset with Darshan because of his comments about her husband director Prem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X