Raanna Wedding ; ರಕ್ಷಿತಾ ಪ್ರೇಮ್ ಸಹೋದರ ರಾಣಾ ಮದುವೆ ಸಂಭ್ರಮ, ಯಾರೆಲ್ಲ ಬಂದಿದ್ದರು ?

ಕನ್ನಡ ಚಿತ್ರರಂಗದಲ್ಲಿಂದು ಮದುವೆ ಸಂಭ್ರಮ. ಒಂದು ಕಡೆ ಜಯಮಾಲಾ ಅವರ ಮಗಳು ಸೌಂದರ್ಯ, ರುಷಬ್ ಜೊತೆ ಸಪ್ತಪದಿಯನ್ನು ತುಳಿದರೆ ಮತ್ತೊಂದು ಕಡೆ ರಕ್ಷಿತಾ ಅವರ ಸಹೋದರ ರಾಣಾ, ರಕ್ಷಿತಾ ಅವರ ಜೊತೆ ಮದುವೆಯಾಗಿದ್ದಾರೆ. ಕನ್ನಡ ಚಿತ್ರರಂಗದ ಅನೇಕರು ಈ ಎರಡು ಮದುವೆ ಸಮಾರಂಭಕ್ಕೆ ತೆರಳಿ ನವ ಜೋಡಿಗಳಿಗೆ ಶುಭಾಶಯವನ್ನು ಕೋರಿದರು.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ರಾಣಾ ಅವರ ಮದುವೆ ನಡೆದಿದೆ. ಬಹುಕಾಲದ ಸ್ನೇಹಿತೆ ರಕ್ಷಿತಾ ಜೊತೆ ಸಪ್ತಪದಿಯನ್ನು ತುಳಿದ ರಾಣಾ ಗುರು ಹಿರಿಯರ ಆಶೀರ್ವಾದ ಪಡೆದರು. ಸ್ಯಾಂಡಲ್‌ವುಡ್ ನ ನಟ ನಟಿಯರು ಹರಸಿ ಹಾರೈಸಿದರು. ರಾಣಾ ಮತ್ತು ರಕ್ಷಿತಾ ಮದುವೆಗೆ ಪತ್ನಿ ಪ್ರಿಯಾ ಜೊತೆ ಸುದೀಪ್ ಬಂದರೆ ಪ್ರಿಯಾಂಕ ಜೊತೆ ಉಪೇಂದ್ರ ಬಂದಿದ್ದರು.

Rakshitha Prem s brother Raana got hitched on Friday in Bengaluru with celebs gracing the wedding

ಇನ್ನು ಸೌಂದರ್ಯ ಜಯಮಾಲ ಅವರ ಮದುವೆಯಲ್ಲಿ ಕಾಣಿಸಿಕೊಂಡ ಯಶ್ ಮತ್ತು ರಾಧಿಕಾ ಪಂಡಿತ್, ರಾಣಾ ಮತ್ತು ರಕ್ಷಿತಾ ಅವರ ಮದುವೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಇನ್ನು ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್, ಶ್ರುತಿ, ವಿನಯಾ ಪ್ರಸಾದ್, ಅಂಬಿಕಾ, ಅಂಜಲಿ, ತಾರಾ, ಭಾರತಿ ವಿಷ್ಣುವರ್ಧನ್, ಭಾವನಾ ರಾಮಣ್ಣ, ಅನು ಪ್ರಭಾಕರ್ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್, ರವಿಶಂಕರ್, ರಘು ಮುಖರ್ಜಿ, ಅನಿರುದ್ದ್, ಶ್ರೀಮುರಳಿ, ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ. ಅಮೃತಾ ಅಯ್ಯಂಗಾರ್, ರೋಶಿನಿ ಪ್ರಕಾಶ್, ಧನ್ಯಾ ರಾಮ್ ಕುಮಾರ್, ಅನುಪಮಾ ಗೌಡ, ಕೃಷಿ ತಾಪಂಡ, ಶ್ರುತಿ ಹರಿಹರನ್, ನಿಧಿ ಸುಬ್ಬಯ್ಯ, ಶರ್ಮಿಳಾ ಮಾಂಡ್ರೆ ಬಂದು ರಾಣಾ ಮತ್ತು ರಕ್ಷಿತಾಗೆ ಶುಭ ಹಾರೈಸಿದರು. ಧನ್ಯಾ ಅವರ ತಾಯಿ ಪೂರ್ಣಿಮಾ ರಾಮ್ ಕುಮಾರ್ ಕೂಡ ಬಂದಿದ್ದರು.

ಇವರಲ್ಲದೇ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್, ನಿರ್ದೇಶಕ ಮಹೇಶ್ ಬಾಬು, ಹಿರಿಯ ನಿರ್ಮಾಪಕ ಎನ್ ಕುಮಾರ್, ಹಿರಿಯ ನಟ ದತ್ತಣ್ಣ, ನಿರ್ದೇಶಕಿ ಕವಿತಾ ಲಂಕೇಶ್, ನಿರ್ಮಾಪಕ ಸಂದೇಶ್ ನಾಗರಾಜ್ ಕೂಡ ರಾಣಾ ರಕ್ಷಿತಾ ಮದುವೆ ಸಮಾರಂಭಕ್ಕೆ ಬಂದಿದ್ದರು.

ಇನ್ನು, ತನ್ನ ಸಹೋದರನ ಮದುವೆಗೆ ದರ್ಶನ್ ಬರುವ ವಿಶ್ವಾಸ ರಕ್ಷಿತಾಗೆ ಇತ್ತು. ಖುದ್ದು ರಕ್ಷಿತಾ ಈ ಮಾತನ್ನು ಹೇಳಿದ್ದರು. ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರನ್ನು ಕರೆದಿದ್ದೇನೆ ದರ್ಶನ್ ಬರ್ತಿನಿ ಎಂದು ಹೇಳಿದಾನೆ ಎಂದು ಹೇಳಿದ್ದರು. ಆದರೆ ಈ ನಿರೀಕ್ಷೆ ಇಂದು ಹುಸಿಯಾಯ್ತು. ದರ್ಶನ್ ಬರಲಿಲ್ಲ. ನಾಳೆ ನಡೆಯಲಿರುವ ಆರತಕ್ಷತೆಯ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗುವ ನಿರೀಕ್ಷೆ ಇದೆ.

ಇನ್ನುಳಿದಂತೆ ಮದುವೆ ಮುನ್ನ ರಕ್ಷಿತಾ ಕುರಿತು ಮಾತನಾಡಿದ್ದ ರಕ್ಷಿತಾ, ರಕ್ಷಿತಾ ತುಂಬಾ ಒಳ್ಳೆಯ ಹುಡುಗಿ, ಪ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ, ಇಬ್ಬರದ್ದು 07 ವರ್ಷಗಳ ಪ್ರೀತಿ ಎಂದು ಹೇಳಿದ್ದರು. ರಾಣಾ ತನ್ನ ವೃತ್ತಿ ಬದುಕಿನಲ್ಲಿ ಸೆಟಲ್ ಆಗಲಿ ಎಂದು ರಕ್ಷಿತಾ ಕಾಯುತ್ತಿದ್ದರು ಈಗ ಎರಡನೇ ಕೆಲಸ ಸಿನಿಮಾ ಶುರುವಾಗಿದೆ ಎಂದು ಹೇಳಿದ್ದ ರಕ್ಷಿತಾ ಹುಡುಗಿ ಹೆಸರು ರಕ್ಷಿತಾ ಅನ್ನುವುದು ಸಮಸ್ಯೆಯಾಗಲ್ಲ ನನ್ನ ಮೊದಲ ಹೆಸರು ಶ್ವೇತಾ ಎಂದಿತ್ತು ಎಂದು ಹೇಳಿದ್ದರು. ಹೇಗೋ ಮನೆಯಲ್ಲಿ ಮ್ಯಾನೇಜ್ ಮಾಡ್ತೀವಿ ಎಂದಿದ್ದರು. ತುಂಬಾ ಸರಳವಾದ ಹುಡುಗಿ ತುಂಬಾ ವರ್ಷಗಳ ಬಳಿಕ ನಮ್ಮ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ ಎಂದು ಹೇಳಿದ್ದರು

More from Filmibeat

Read more about: marriage rakshita filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X