ಶ್ರೀ ದೇವಿ ಪಾತ್ರಕ್ಕೆ ರಕುಲ್ ಪಡೆದ ಸಂಭಾವನೆ ಇಷ್ಟೊಂದ!
Recommended Video

ನಟಿ ರಕುಲ್ ಪ್ರೀತ್ ಸಿಂಗ್ ಈಗ ಶ್ರೀದೇವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟಾಲಿವುಡ್ ನಲ್ಲಿ ಬರುತ್ತಿರುವ ಎನ್ ಟಿ ಆರ್ ಬಯೋಪಿಕ್ ಚಿತ್ರದಲ್ಲಿ ಶ್ರೀದೇವಿ ಪಾತ್ರ ಇರಲಿದ್ದು, ಇದಕ್ಕೆ ರಕುಲ್ ಜೀವ ತುಂಬಿದ್ದಾರೆ.
ಇತ್ತೀಚಿಗಷ್ಟೆ ರಕುಲ್ ಅವರ ಜನ್ಮದಿನದಂದು ಸಿನಿಮಾದ ಅವರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದೀಗ ಅವರು ಆ ಪಾತ್ರಕ್ಕೆ ತೆಗೆದುಕೊಂಡ ಸಂಭಾವನೆ ಬಗ್ಗೆ ಸುದ್ದಿ ಹೊರಬಂದಿದೆ. ಶ್ರೀ ದೇವಿ ಪಾತ್ರ ಮಾಡಲು ರಕುಲ್ ಬರೋಬ್ಬರಿ 1 ಕೋಟಿ ಹಣ ಪಡೆದರಂತೆ.
1 ಕೋಟಿ ಸಂಭಾವನೆ ರಕುಲ್ ಪ್ರೀತ್ ಸಿಂಗ್ ಗೆ ಹೊಸತೇನು ಅಲ್ಲ. ಆದರೆ, ಈ ಸಿನಿಮಾದಲ್ಲಿ ಅವರ ಪಾತ್ರ ಇರುವುದು ಕೇವಲ 20 ನಿಮಿಷ. ಪಾತ್ರದ ಅವಧಿ ಕಡಿಮೆ ಇದ್ದರೂ ಅವರ ಸಂಭಾವನೆ ಕೋಟಿಯಾಗಿದೆ ಎನ್ನುವುದು ಅಚ್ಚರಿಯ ಸಂಗತಿ.

ನಟ ಎನ್ ಟಿ ಆರ್ ಬಗ್ಗೆಯ ಈ ಸಿನಿಮಾ 'ಕಥಾ ನಾಯಕಡು' ಹಾಗೂ 'ಮಹಾ ನಾಯಕುಡು' ಎರಡು ಪಾರ್ಟ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ರಕುಲ್ ಪ್ರೀತ್ ಸಿಂಗ್ ಶ್ರೀದೇವಿ ಅವತಾರದಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ. 1970 -80ರಲ್ಲಿ ಇದ್ದ ಶ್ರೀದೇವಿ ರೀತಿ ರಕುಲ್ ಕಾಣಿಸಿಕೊಂಡಿದ್ದಾರೆ. ಶ್ರೀ ದೇವಿ ಪಾತ್ರಕ್ಕೆ ಜೀವ ತುಂಬುವುದು ಎಂದರೆ ತಮಾಷೆ ಮಾತಲ್ಲ ಈ ಕಾರಣದಿಂದ ಅವರ ನಟನೆ ಮೇಲೆ ದೊಡ್ಡ ನಿರೀಕ್ಷೆ ಇದೆ.
ಅಂದಹಾಗೆ, ಬಾಲಕೃಷ್ಣ ಎನ್ ಟಿ ಆರ್ ಪಾತ್ರ ಮಾಡುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರುತ್ತಿದೆ.


Click it and Unblock the Notifications











