ಅಯ್ಯೋ ಪಾಪ.....ಅನುಷ್ಕಾ ಶೆಟ್ಟಿಗೆ ಹೀಗೆ ಆಗಬಾರದಿತ್ತು.!
ಎಲ್ಲ ಅಂದುಕೊಂಡಂತೆ ಆಗಿದ್ದರೇ, ಪ್ರಭಾಸ್ ಅಭಿನಯಿಸುತ್ತಿರುವ 'ಸಾಹೋ' ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಜೋಡಿಯಾಗಬೇಕಿತ್ತು. ಆದ್ರೆ, ಆ ಅವಕಾಶ ಈಗ ಬೇರೆ ನಟಿಯ ಪಾಲಾಗಿದೆ.
'ಸಾಹೋ' ಚಿತ್ರಕ್ಕಾಗಿ ಅನುಷ್ಕಾಗೆ ಅಡ್ವಾನ್ಸ್ ಕೊಟ್ಟು, ಕಾಲ್ ಶೀಟ್ ಕೂಡ ಪಡೆದುಕೊಂಡಿದ್ದರು. ಬಟ್, ಪಾತ್ರಕ್ಕಾಗಿ ತಯಾರಾಗದ ಕಾರಣ ಚಿತ್ರದಿಂದ ಕೈಬಿಡಲು 'ಸಾಹೋ' ಚಿತ್ರತಂಡ ನಿರ್ಧರಿಸಿತ್ತು. ಆದ್ರೆ, ಡೇಟ್ ಹೊಂದಾಣಿಕೆ ಆಗುತ್ತಿಲ್ಲ ಎಂಬ ಕಾರಣವನ್ನ 'ಸಾಹೋ' ಟೀಮ್ ನೀಡುತ್ತಿದೆ.

ಹಾಗಿದ್ರೆ, 'ಸಾಹೋ' ಚಿತ್ರಕ್ಕೆ ನಾಯಕಿ ಯಾರು ಎಂಬ ಹುಡುಕಾಟ ನಡೆಯುತ್ತಲೇ ಇತ್ತು. ಕೊನೆಗೂ ಪ್ರಭಾಸ್ ಗೆ ನಾಯಕಿ ಸಿಕ್ಕಿದ್ದಾರೆ. ಸೌತ್ ಸುಂದರಿ ರಕುಲ್ ಪ್ರೀತ್ ಸಿಂಗ್ 'ಸಾಹೋ' ಚಿತ್ರದ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ.

ಇದಕ್ಕು ಮುಂಚೆ 'ಮಿಸ್ಟರ್ ಪರ್ಫೆಕ್ಟ್' ಚಿತ್ರದಲ್ಲಿ ಪ್ರಭಾಸ್ ಜೊತೆ ರಕುಲ್ ಅಭಿನಯಿಸಬೇಕಿತ್ತು. ಎರಡು ದಿನಗಳ ಚಿತ್ರೀಕರಣದಲ್ಲಿ ಕೂಡ ರಕುಲ್ ಭಾಗವಹಿಸಿದ್ದರು. ಆದ್ರೆ, ಕಾರಣವಿಲ್ಲದೆ ರಕುಲ್ ಜಾಗಕ್ಕೆ ನಟಿ ತಾಪ್ಸಿ ಯನ್ನ ಬದಲಿಸಲಾಗಿತ್ತು. ಈಗ, ಪ್ರಭಾಸ್ ಜೊತೆ ಎರಡನೇ ಬಾರಿ ಅವಕಾಶ ಸಿಕ್ಕಿದ್ದು, ಈ ಸಲ ಅಭಿನಯಿಸುವುದು ಪಕ್ಕಾ ಎನ್ನಲಾಗುತ್ತಿದೆ.


Click it and Unblock the Notifications











