ಸಮುದ್ರ ತೀರದಲ್ಲಿ ಬಳ್ಳಿಯಂತೆ ನಿಂತ ರಕುಲ್ ಪ್ರೀತ್ ಸಿಂಗ್
ನಟಿ, ಸೌತ್ ಸುಂದರಿ ರಕುಲ್ ಪ್ರೀತ್ ಸಿಂಗ್ ಅವರ ಒಂದು ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಕುಲ್ ಇನ್ಸ್ಟಾಗ್ರಾಮ್ ಖಾತೆಯ ಹೊಸ ಫೋಟೋ ಟಾಕ್ ಸೃಷ್ಟಿ ಮಾಡಿದೆ.
ಸಮುದ್ರ ತೀರದಲ್ಲಿ ಬಳ್ಳಿಯಂತೆ ರಕುಲ್ ನಿಂತಿದ್ದಾರೆ. ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಕ್ವೀನ್ ನಂತೆ ಪೋಸ್ ನೀಡಿದ್ದಾರೆ. ರಕುಲ್ ಹೇರ್ ಸ್ಟೈಲ್ ಕೂಡ ಸ್ಟೈಲಿಷ್ ಆಗಿದೆ.
ನಟಿ ಲಕ್ಷ್ಮಿ ಮಂಚು ಈ ಫೋಟೋಗೆ ಹಾಟ್ ಎಂದು ಕಾಮೆಂಟ್ ಮಾಡಿದ್ದಾರೆ. ರಕುಲ್ ಫೋಟೋದಿಂದ ಚಳಿಗಾಲ ಕೂಡ ಬೇಸಿಗೆಯಾಗಿದೆ ಎಂದು ಕೆಲ ಅಭಿಮಾನಿಗಳು ಹೊಗಳಿದ್ದಾರೆ. ಅಂದಹಾಗೆ, ರಕುಲ್ ಹಳೆಯ ವಿದೇಶ ಪ್ರವಾಸದ ಫೋಟೋ ಇದಾಗಿದೆ.

ರಕುಲ್ ಪ್ರೀತ್ ಸಿಂಗ್ ಸದ್ಯ 'ಶಿಮ್ಲ ಮಿರ್ಚಿ' ಎಂಬ ಹಿಂದಿ ಸಿನಿಮಾ ಮಾಡುತ್ತಿದ್ದಾರೆ. ಕಮಲ್ ಹಾಸನ್ ಅವರ 'ಇಂಡಿಯಾನ್ 2' ಚಿತ್ರದಲ್ಲಿಯೂ ಅಭಿಯಿಸುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ತಮಿಳು ಸಿನಿಮಾ ಅವರ ಕೈನಲ್ಲಿ ಇದೆ.
ಅಂದಹಾಗೆ, ರಕುಲ್ ಕನ್ನಡ ಚಿತ್ರದ ಮೂಲಕ ತಮ್ಮ ಕೆರಿಯರ್ ಶುರು ಮಾಡಿದರು. 2009 ರಲ್ಲಿ ಬಿಡುಗಡೆಯಾದ 'ಗಿಲ್ಲಿ' ಅವರ ಮೊದಲ ಸಿನಿಮಾವಾಗಿದೆ. ಇಲ್ಲಿ ಗುರುರಾಜ್ ಜಗ್ಗೇಶ್ ಜೊತೆಗೆ ರಕುಲ್ ಕಾಣಿಸಿಕೊಂಡಿದ್ದರು.


Click it and Unblock the Notifications











