ಶಿವಣ್ಣನ 'ಜೋಗಯ್ಯ' ಸಿನಿಮಾ ಡೈಲಾಗ್ ಹೇಳೋಕೆ ಭಯಬಿದ್ದ 'ಪೆದ್ದಿ' ರಾಮ್‌ಚರಣ್
ಬುಚ್ಚಿಬಾಬು ನಿರ್ದೇಶನದ 'ಪೆದ್ದಿ' ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿದೆ. ಸಿನಿಮಾ ಪ್ರಚಾರ ಜೋರಾಗಿ ನಡೀತಿದೆ. ಮುಂಬೈನಲ್ಲಿ ಟ್ರೈಲರ್ ಲಾಂಚ್ ಮಾಡಿದ್ದ ಚಿತ್ರತಂಡ ಬಳಿಕ ಭೋಪಾಲ್‌ನಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮ ಮಾಡಿದ್ದರು. ದೆಹಲಿ, ಬೆಂಗಳೂರಿನಲ್ಲಿ ಕೂಡ ಈವೆಂಟ್ ಮಾಡಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ರಾಮ್‌ಚರಣ್ ಜೋಡಿಯಾಗಿ ಚಿತ್ರದಲ್ಲಿ ಜಾನ್ವಿ ಕಪೂರ್ ನಟಿಸಿದ್ದಾರೆ. ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ 'ಪೆದ್ದಿ' ಚಿತ್ರದ ಟೀಸರ್, ಸಾಂಗ್ಸ್, ಟ್ರೈಲರ್ ಹಿಟ್ ಆಗಿದೆ. ಬೆಂಗಳೂರಿಗೆ ಬಂದಿದ್ದ ವೇಳೆ ಕನ್ನಡ ಸಂದರ್ಶನದಲ್ಲಿ ಕೂಡ ರಾಮ್‌ಚರಣ್ ಹಾಗೂ ಜಾನ್ವಿ ಭಾಗವಹಿಸಿದ್ದರು. ಇಬ್ಬರಿಗೂ ಶಿವಣ್ಣ ಸಾಥ್ ಕೊಟ್ಟಿದ್ದರು. ಅನುಶ್ರೀ ನಿರೂಪಣೆಯಲ್ಲಿ ಸಂದರ್ಶನ ಮೂಡಿ ಬಂದಿದೆ.

ಸಂದರ್ಶನದಲ್ಲಿ 'ಪೆದ್ದಿ' ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಶಿವಣ್ಣ, ರಾಮ್‌ಚರಣ್, ಜಾನ್ವಿ ಹಂಚಿಕೊಂಡಿದ್ದಾರೆ. ಅಣ್ಣಾವ್ರ ಕುಟುಂಬ ಹಾಗೂ ಚಿರಂಜೀವಿ ಕುಟುಂಬದ ನಡುವಿನ ಒಡನಾಟದ ಬಗ್ಗೆ ಕೂಡ ಮಾತನಾಡಿದ್ದಾರೆ. ಇದೇ ವೇಳೆ ಡಮ್ಮಿ ಲಾಂಗ್ ಹಿಡಿದು ಜಾನ್ವಿ ಹಾಗೂ ಶಿವಣ್ಣ ಡೈಲಾಗ್ ಹೊಡೆದಿದ್ದಾರೆ. ಆದರೆ 'ಜೋಗಯ್ಯ' ಚಿತ್ರದ ಡೈಲಾಗ್ ಹೇಳೋಕೆ ನಟ ರಾಮ್‌ಚರಣ್ ಭಯಬಿದ್ದಿದ್ದಾರೆ.
ಮೊದಲಿಗೆ 'ದಿ ವಿಲನ್' ಚಿತ್ರದ ಸಣ್ಣ ಡೈಲಾಗ್ ಅನ್ನು ಜಾನ್ವಿಗೆ ಶಿವಣ್ಣ ಹೇಳಿಕೊಟ್ಟಿದ್ದಾರೆ. "ನಾನು ಸೈಲೆಂಟ್ ಆಗಿದ್ದ್ರೆ ರಾಮ, ವೈಲೆಂಟ್ ಆದ್ನೋ ರಾವಣ' ಎಂದು ಶ್ರೀದೇವಿ ಪುತ್ರಿ ಹೇಳಿದ್ದಾರೆ. ಬಳಿಕ ರಾಮ್‌ಚರಣ್ ಸರದಿ ಬಂದಿದೆ.
'ಜೋಗಯ್ಯ' ಚಿತ್ರದಲ್ಲಿ ಮಾಧ್ಯಮದ ಎದುರು ಶಿವಣ್ಣ ಹೇಳುವ ಖಡಕ್ ಡೈಲಾಗ್ ಇದೆ. "ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಬೆಂಗ್ಳೂರ್ ನಂದು.. ಇನ್ಮೇಲೆ ಕರ್ನಾಟಕ ಬಾರ್ಡರ್ಲಿ ಎಕಶ್ಚಿತ್ ಒಂದು ನಾಯಿ ಬರ್ಬೇಕು ಅಂದ್ರು, ನನ್ನ ಕೇಳ್ಕಂಡ್ ಬರ್ಬೇಕು. ಅಕಸ್ಮಾತ್ ಬಂತೋ.. ಎಂದು ಡೈಲಾಗ್ ಸಾಗುತ್ತದೆ. ಇದನ್ನೇ ರಾಮ್‌ಚರಣ್ ಅವರಿಗೆ ಹೇಳಿಕೊಡಲು ಶಿವಣ್ಣ ಮುಂದಾಗಿದ್ದಾರೆ.
ಕೂಡಲೇ ಏನು ಡೈಲಾಗ್ ಇದು, ಯಾರಿಗೆ ಎಂದು ರಾಮ್‌ಚರಣ್ ಕೇಳಿದ್ದಾರೆ. ಮಾಧ್ಯಮದವರಿಗೆ ಹೇಳುವ ಡೈಲಾಗ್ ಎಂದು ಅನುಶ್ರೀ ಹೇಳಿದ್ದಾರೆ. "ಅಯ್ಯೋ ಬೇಡವೇ ಬೇಡ.. ಮಾಧ್ಯಮದವರಿಗೆ ಈಗ ಏನು ಹೇಳುವುದು ಬೇಡ" ಎಂದು ರಾಮ್‌ಚರಣ್ ಕೈ ಮುಗಿದಿದ್ದಾರೆ. 5 ದಿನಗಳ ಬಳಿಕ ಬೇಕಿದ್ದರೆ ಹೇಳೋಣ.. ನಿಜವಾದ ಮಾಧ್ಯಮ ಅಲ್ಲ, ಸಿನ್ಮಾದಲ್ಲಿ ಮಾಧ್ಯಮದವರಿಗೆ ಹೇಳೋದು ಎಂದು ಅನುಶ್ರೀ ಹೇಳಿದ್ರು, 'ಬೇಡವೇ ಬೇಡ" ರಾಮ್‌ಚರಣ್ ಹೇಳಿರುವುದು ವೈರಲ್ ಆಗ್ತಿದೆ. ನಿಜವಾದ ಮಾಧ್ಯಮ ಅಲ್ಲ, ಸಿನ್ಮಾದಲ್ಲಿ ಮಾಧ್ಯಮದವರಿಗೆ ಹೇಳೋದು ಎಂದು ಅನುಶ್ರೀ ಹೇಳಿದ್ರು, "ಬೇಡವೇ ಬೇಡ, ನಾನು ಖುಷಿಯಾಗಿರಬೇಕು" ರಾಮ್‌ಚರಣ್ ಹೇಳಿರುವುದು ವೈರಲ್ ಆಗ್ತಿದೆ.
ಬಳಿಕ "ಏಯ್ ಡಾಲಿ.. ನಾನ್ ಸುಮ್ನೆ ಬಂದ್ರೆ ಅತಿಥಿ.. ಹುಡುಕ್ಕೊಂಡ್ ಬಂದ್ರೆ ನಿಮ್ಗಳ ತಿಥಿ" ಎಂದು ಶಿವಣ್ಣ ಹೇಳಿಕೊಟ್ಟ ಡೈಲಾಗ್ ಅನ್ನು ರಾಮ್‌ಚರಣ್ ಹೇಳಿದ್ದಾರೆ. ವೃದ್ದಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ 'ಪೆದ್ದಿ' ಸಿನಿಮಾ ನಿರ್ಮಾಣವಾಗಿದೆ. ಜಗಪತಿ ಬಾಬು, ದಿವ್ಯೇಂದು, ಬೊಮನ್ ಇರಾನಿ, ರವಿ ಕಿಶನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಎ. ಆರ್ ರಹಮಾನ್ ಸಂಗೀತ 'ಪೆದ್ದಿ' ಚಿತ್ರಕ್ಕಿದೆ. ಈಗಾಗಲೇ 4 ಹಾಡುಗಳು ರಿಲೀಸ್ ಆಗಿ ಹಿಟ್ ಆಗಿದೆ. ಚಿತ್ರದಲ್ಲಿ ಹಳ್ಳಿ ಕ್ರಿಕೆಟರ್ ಹಾಗೂ ಕುಸ್ತಿ ಪೈಲ್ವಾನ್ ಆಗಿ ರಾಮ್‌ಚರಣ್ ನಟಿಸಿದ್ದಾರೆ. ಉಸ್ತಾದ್ ಗೌರ್ನಾಯ್ಡು ಆಗಿ ಪೆದ್ದಿರಾಜುಗೆ ಗುರುವಿನ ಪಾತ್ರದಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಕನ್ನಡ ಸೇರಿ 5 ಭಾಷೆಗಳಲ್ಲಿ 'ಪೆದ್ದಿ' ಸಿನಿಮಾ ಡಬ್ ಆಗಿ ಬಿಡುಗಡೆ ಆಗ್ತಿದೆ.


Click it and Unblock the Notifications