ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಡಬ್ಬಿಂಗ್ ಸಿನಿಮಾ : ತೆರೆಗೆ ಬರುತ್ತಿದೆ 'ರಂಗಸ್ಥಳ'
ಟಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'ರಂಗಸ್ಥಲಂ' ಈಗ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ತೆಲುಗು ಚಿತ್ರಪ್ರೇಕ್ಷರನ್ನು ರಂಜಿಸಿದ್ದ 'ರಂಗಸ್ಥಲಂ' ಕನ್ನಡ ಪ್ರೇಕ್ಷಕರ ಮನ ಕದಿಯಲು ಸಜ್ಜಾಗಿದೆ. ವಿಶೇಷ ಅಂದ್ರೆ ಮೊದಲ ಬಾರಿಗೆ ತೆಲುಗು ಚಿತ್ರವೊಂದು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿರುವುದು.
ಈಗಾಗಲೆ ತಮಿಳು ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ತೆರೆಗೆ ಬಂದಿವೆ. ಆದ್ರೀಗ 'ರಂಗಸ್ಥಲಂ' ಮೂಲಕ ತೆಲುಗು ಚಿತ್ರ ಕೂಡ ಕನ್ನಡಕ್ಕೆ ಕಾಲಿಟ್ಟಿದೆ. ಅಂದ್ಹಾಗೆ ತೆಲುಗಿನ 'ರಂಗಸ್ಥಲಂ' ಕನ್ನಡದಲ್ಲಿ 'ರಂಗಸ್ಥಳ' ಹೆಸರಿನಲ್ಲಿ ತೆರೆಗೆ ಬರುತ್ತಿದೆ. ರಾಮ್ ಚರಣ್ ಮತ್ತು ಸಮಂತಾ ಅಭಿನಯದ ಸಿನಿಮಾ.
ಇದೆ ತಿಂಗಳು 12ಕ್ಕ 'ರಂಗಸ್ಥಳ' ಅದ್ದೂರಿಯಾಗಿ ಕರ್ನಾಟಕದಲ್ಲಿ ತೆರೆಗೆ ಬರಲಿದೆ. ಈಗಾಗಲೆ 'ರಂಗಸ್ಥಳ'ದ ಹಾಡುಗಳು ರಿಲೀಸ್ ಆಗಿ ಚಿತ್ರಾಭಿಮಾನಿಗಳನ್ನು ಮೋಡಿ ಮಾಡಿವೆ. 'ರಂಗಸ್ಥಲಂ' ಸುಕುಮಾರ್ ನಿರ್ದೇಶನದ ಚಿತ್ರ. ವಿಶೇಷ ಅಂದ್ರೆ ಈ ಸಿನಿಮಾ ರಾಮ್ ಚರಣ್, ಸಮಂತಾ ಸೇರಿದಂತೆ ಪ್ರಕಾಶ್ ಮುಂತಾದ ಕಲಾವಿದರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾವಾಗಿದೆ.

ಅಂದ್ಹಾಗೆ ಕನ್ನಡದ 'ರಂಗಸ್ಥಳ' ಜೆ ಮೂವೀಸ್ ಬ್ಯಾನರ್ ನಡೆಯಲ್ಲಿ ರಾಜ್ಯದಾದ್ಯಂತ ವಿತರಣೆ ಆಗುತ್ತಿದೆ. ಇದೆ ತಿಂಗಳು 12ಕ್ಕೆ ತೆರೆಗೆ ಬರುತ್ತಿರುವ 'ರಂಗಸ್ಥಳ' ಚಿತ್ರ ತೆಲುಗು 'ರಂಗಸ್ಥಲಂ' ಅಷ್ಟೆ ದೊಡ್ಡ ಮಟ್ಟಕ್ಕೆ ಹಿಟ್ ಆಗಲಿದೆಯಾ ಎಂದು ಕಾದು ನೋಡಬೇಕು.


Click it and Unblock the Notifications











