ಭೂಗತ ದೊರೆಯ ಜೀವನ ಕತೆಯಲ್ಲಿ ಉಪೇಂದ್ರ ನಾಯಕ: ಸ್ಟಾರ್ ನಿರ್ದೇಶಕನಿಂದ ಆಕ್ಷನ್-ಕಟ್

ಒಂದು ಕಾಲದಲ್ಲಿ ಭಾರತೀಯ ಸಿನಿಮಾದ ಭಾಷ್ಯ ಬದಲಾಯಿಸಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಕೆಲ ವರ್ಷಗಳಲ್ಲಿ ಸಿ ಗ್ರೇಡ್ ಸಿನಿಮಾಗಳನ್ನಷ್ಟೆ ಮಾಡಿದ್ದಾರೆ.

ಆದರೆ ಇದೀಗ ನಟ ಉಪೇಂದ್ರ ಜೊತೆಗೂಡಿ ಮತ್ತೆ ತಮ್ಮ ಹಳೆ ಫಾರ್ಮ್‌ಗೆ ಮರಳುವ ಸಿದ್ಧತೆ ಆರಂಭಿಸಿದ್ದಾರೆ ವರ್ಮಾ. ಉಪೇಂದ್ರ ಜೊತೆ ಹೊಸ ಸಿನಿಮಾ ಒಂದನ್ನು ಘೋಷಿಸಿರುವ ರಾಮ್ ಗೋಪಾಲ್ ವರ್ಮಾ ಸಿನಿಮಾದ ಟೈಟಲ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ.

ಉಪೇಂದ್ರ ಹಾಗೂ ರಾಮ್ ಗೋಪಾಲ್ ವರ್ಮಾ ಒಟ್ಟಾಗಿ ಬೆಂಗಳೂರಿನ ಭೂಗತ ದೊರೆಯ ಜೀವನವನ್ನು ಸಿನಿಮಾ ಮಾಡಲಿದ್ದಾರೆ. ಸಿನಿಮಾಕ್ಕೆ 'R' ಎಂದು ಹೆಸರಿಡಲಾಗಿದೆ.

Recommended Video

Upendra | Ram Gopal Varma | RRR ಮುಗಿತು ಈಗ ಉಪ್ಪಿ R ಸ್ಟಾರ್ಟ್ ಆಯ್ತು | R | R Kannada Movie

Ram Gopal To Direct Upendras New Movie, It Will Be About Muttappa Rai

2020ರಲ್ಲಿ ಮೃತಪಟ್ಟ ಮಾಜಿ ಭೂಗತ ದೊರೆ, ಜೈ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಜೀವನವನ್ನು ತೆರೆಗೆ ತರುತ್ತಿದೆ ಈ ಜೋಡಿ. ನಟ ಉಪೇಂದ್ರ, ಮುತ್ತಪ್ಪ ರೈ ಪಾತ್ರದಲ್ಲಿ ಮಿಂಚಲಿದ್ದಾರೆ.

ತಾವು ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡುವುದಾಗಿ ಕೆಲ ವರ್ಷಗಳ ಹಿಂದೆಯೇ ರಾಮ್ ಗೋಪಾಲ್ ವರ್ಮಾ ಘೋಷಿಸಿದ್ದರು. ಭೂಗತ ಲೋಕದ ಗಾಡ್‌ ಫಾದರ್ ಮುತಪ್ಪ ರೈ ಎಂದೆಲ್ಲಾ ಹೇಳಿಕೆಗಳನ್ನು ರಾಮ್ ಗೋಪಾಲ್ ವರ್ಮಾ ನೀಡಿದ್ದರು. ಮುತ್ತಪ್ಪ ರೈ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ನಟಿಸಲಿದ್ದಾರೆ ಎಂದೆಲ್ಲ ನಿಶ್ಚಯವಾಗಿತ್ತು. ಆದರೆ ಸಿನಿಮಾ ಸೆಟ್ಟೇರಲಿಲ್ಲ. ಈಗ ಮುತ್ತಪ್ಪ ರೈ ಪಾತ್ರದಲ್ಲಿ ಉಪೇಂದ್ರ ನಟಿಸಲಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಉಪೇಂದ್ರ ಜೊತೆಗೆ ಫೋಟೊ ಒಂದನ್ನು ರಾಮ್ ಗೋಪಾಲ್ ವರ್ಮಾ ಪ್ರಕಟಿಸಿದ್ದರು. ಆಗಲೇ ಈ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆಂಬ ಸುಳಿವು ದೊರಕಿತ್ತು. ಆದರೆ ಮುತ್ತಪ್ಪ ರೈ ಜೀವನವನ್ನು ಸಿನಿಮಾ ಮಾಡಲಿದ್ದಾರೆ ಎಂಬುದರ ಬಗ್ಗೆ ಅನುಮಾನಗಳಿದ್ದವು, ಅದೀಗ ಸ್ಪಷ್ಟವಾಗಿದೆ.

ಉಪೇಂದ್ರ-ವರ್ಮಾ ಸಿನಿಮಾ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡು ಬಿಡುಗಡೆ ಆಗಲಿದೆ. ಭೂಗತ ಲೋಕದ ಕತೆಗಳನ್ನು ತೆರೆ ಮೇಲೆ ತರುವುದರಲ್ಲಿ ರಾಮ್ ಗೋಪಾಲ್ ವರ್ಮಾ ನಂಬರ್ 1. ಈ ಹಿಂದೆ ಹಲವು ಕಲ್ಟ್ ಕ್ಲಾಸಿಕ್ ಅಂಡರ್‌ವರ್ಲ್ಡ್‌ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈ ಸಿನಿಮಾ ಸಹ ಅದೇ ಸಾಲಿಗೆ ಸೇರಲಿ ಎಂಬುದು ಉಪ್ಪಿ ಅಭಿಮಾನಿಗಳ ಆಶಯ.

ಉಪೇಂದ್ರ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಹಲವು ಸಿನಿಮಾಗಳಲ್ಲಿ ಉಪೇಂದ್ರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಉಪೇಂದ್ರ ನಟಿಸಿರುವ 'ತ್ರಿಶೂಲಂ', 'ಬುದ್ಧಿವಂತ 2' ಹಾಗೂ 'ಲಗಾಮ್' ಸಿನಿಮಾಗಳು ಬಿಡುಗಡೆ ಆಗಬೇಕಿವೆ. ಆರ್.ಚಂದ್ರು ನಿರ್ದೇಶನದ ದೊಡ್ಡ ಬಜೆಟ್ ಸಿನಿಮಾ 'ಕಬ್ಜ'ನಲ್ಲಿಯೂ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಸುದೀಪ್ ಸಹ ನಟಿಸಿದ್ದಾರೆ. ಇದೀಗ ತಮ್ಮದೇ ನಿರ್ದೇಶನದ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಇವುಗಳ ಜೊತೆಗೆ ಉಪ್ಪಿ ನಟನೆಯ 'ಹೋಮ್ ಮಿನಿಸ್ಟರ್' ಸಿನಿಮಾ ಏಪ್ರಿಲ್ 01 ರಂದು ತೆರೆಗೆ ಬರಲಿದೆ. ಉಪ್ಪಿ ಅಭಿನಯದ ತೆಲುಗು ಸಿನಿಮಾ 'ಗನಿ' ಏಪ್ರಿಲ್ 08 ರಂದು ತೆರೆಗೆ ಬರುತ್ತಿದೆ. ಇವುಗಳ ನಡುವೆ ಇದೀಗ ರಾಮ್ ಗೋಪಾಲ್ ವರ್ಮಾ ಜೊತೆ ಸಿನಿಮಾ ಮಾಡುತ್ತಿದ್ದಾರೆ.

More from Filmibeat

English summary
Ram Gopal Varma to direct Upendra's new movie. It will be about former underworld don Muttappa Rai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X