twitter
    For Quick Alerts
    ALLOW NOTIFICATIONS  
    For Daily Alerts

    ಇವರನ್ನ ಹುಡುಕಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡ್ತಾರೆ ರಾಮ್ ಗೋಪಾಲ್ ವರ್ಮಾ.!

    |

    ಹೇಳಿ ಕೇಳಿ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ನಿರ್ದೇಶಕ... ಸತ್ಯ ಘಟನೆಗಳನ್ನ ಆಧಾರಿಸಿ ಸಿನಿಮಾ ಮಾಡುವುದರಲ್ಲಿ ಆರ್.ಜಿ.ವಿ ಎತ್ತಿದ ಕೈ... 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಮಾಡುವಾಗ, ವೀರಪ್ಪನ್ ನನ್ನೇ ಹೋಲುವ ವ್ಯಕ್ತಿಯನ್ನ ತಲಾಶ್ ಮಾಡಿ ಕರೆತಂದಿದ್ದವರು ಇದೇ ರಾಮ್ ಗೋಪಾಲ್ ವರ್ಮಾ.

    ಈಗ ಚಂದ್ರಬಾಬು ನಾಯ್ಡು ರನ್ನ ಹೋಲುವ ವ್ಯಕ್ತಿಗಾಗಿ ಡೈರೆಕ್ಟರ್ ಆರ್.ಜಿ.ವಿ ಹುಡುಕಾಟ ನಡೆಸುತ್ತಿದ್ದಾರೆ. ಹೀಗೆ ಹುಡುಕಾಡುತ್ತಿರುವಾಗಲೇ ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಒಂದು ವಿಡಿಯೋ ಬಿದ್ದಿದೆ.

    'NTR' ಕುರಿತು ಸಿನಿಮಾ: ಫಸ್ಟ್ ಲುಕ್ ನಲ್ಲೇ ವಿವಾದದ ಸುಳಿವು ಕೊಟ್ಟ ವರ್ಮ'NTR' ಕುರಿತು ಸಿನಿಮಾ: ಫಸ್ಟ್ ಲುಕ್ ನಲ್ಲೇ ವಿವಾದದ ಸುಳಿವು ಕೊಟ್ಟ ವರ್ಮ

    ಆ ವಿಡಿಯೋದಲ್ಲಿ ಓರ್ವ ವ್ಯಕ್ತಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ನೋಡಲು ಆ ವ್ಯಕ್ತಿ ಥೇಟ್ ಚಂದ್ರಬಾಬು ನಾಯ್ಡು ತರಹವೇ ಕಾಣುತ್ತಾರೆ. ಹೀಗಾಗಿ, ಆ ವ್ಯಕ್ತಿಯನ್ನ ಕಾಂಟ್ಯಾಕ್ಟ್ ಡೀಟೇಲ್ಸ್ ತಿಳಿಸಿ ಎಂದು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.

    ಹೋಟೆಲ್ ನಲ್ಲಿ ಕೆಲಸ ಮಾಡಿದ ವ್ಯಕ್ತಿಯ ಬಗ್ಗೆ ಮೊದಲು ಸರಿಯಾದ ಮಾಹಿತಿ ಕೊಟ್ಟವರಿಗೆ ರಾಮ್ ಗೋಪಾಲ್ ವರ್ಮಾ ಒಂದು ಲಕ್ಷ ರೂಪಾಯಿ ಬಹುಮಾನ ಕೊಡ್ತಾರಂತೆ.

    Ram Gopal Varma announces 1 Lakh cash prize to trace a person who looks like Chandrababu Naidu

    ಅಷ್ಟಕ್ಕೂ, ರಾಮ್ ಗೋಪಾಲ್ ವರ್ಮಾಗೆ ಯಾಕೆ ಈ ವ್ಯಕ್ತಿಯ ಉಸಾಬರಿ ಅಂದ್ರಾ.? ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್.ಟಿ.ಆರ್ ಜೀವನಚರಿತ್ರೆಯನ್ನ ಆಧರಿಸಿ 'ಎನ್.ಟಿ.ಆರ್.ಟ್ರೂ ಸ್ಟೋರಿ' ಎಂಬ ಸಿನಿಮಾ ಮಾಡಲು ಆರ್.ಜಿ.ವಿ ಮುಂದಾಗಿದ್ದಾರೆ.

    ರಾಜಮೌಳಿ, ಎನ್.ಟಿ.ಆರ್ ಪೋಸ್ಟ್ ಗೆ ಅತಿ ಕೆಟ್ಟ ಕಾಮೆಂಟ್ ಮಾಡಿದ ವರ್ಮ.! ರಾಜಮೌಳಿ, ಎನ್.ಟಿ.ಆರ್ ಪೋಸ್ಟ್ ಗೆ ಅತಿ ಕೆಟ್ಟ ಕಾಮೆಂಟ್ ಮಾಡಿದ ವರ್ಮ.!

    'ಎನ್.ಟಿ.ಆರ್.ಟ್ರೂ ಸ್ಟೋರಿ' ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಪಾತ್ರವೂ ಬರುವುದರಿಂದ ಅವರನ್ನೇ ಹೋಲುವ ವ್ಯಕ್ತಿಗಾಗಿ ರಾಮ್ ಗೋಪಾಲ್ ವರ್ಮಾ ಹುಡುಕುತ್ತಿದ್ದಾರೆ.

    English summary
    Ram Gopal Varma announces Rs.1 Lakh cash prize to trace a person who looks like Chandrababu Naidu.
    Saturday, October 13, 2018, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X