ರಾಮ್ ಗೋಪಾಲ್ ವರ್ಮಾ ಹೇಳಿದ ಕೆಲಸ ಮಾಡಿದ್ರೆ 10 ಲಕ್ಷ ಸಿಗುತ್ತೆ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಏನೇ ಮಾಡಿದ್ರು ಅದರಿಂದ ಪ್ರಚಾರ ಮಾತ್ರ ಸಖತ್ ಆಗಿ ತಗೊಳ್ತಾರೆ. ಸಂಬಂಧವಿಲ್ಲದಿದ್ದರೂ ಆ ವಿಷ್ಯದಲ್ಲಿ ತಲೆ ಹಾಕಿ, ವಿವಾದ ಮೈಮೇಲೆ ಎಳೆದುಕೊಳ್ಳುವುದು ವರ್ಮಾ ಸ್ಟೈಲ್.

ಇತ್ತೀಚಿಗಷ್ಟೆ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಂತೆ ಕಾಣುವ ವ್ಯಕ್ತಿಯನ್ನ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡ್ತೀನಿ ಅಂತ ಘೋಷಣೆ ಮಾಡಿದ್ರು.

ಅದರಂತೆ ಅಂತಹ ವ್ಯಕ್ತಿಯನ್ನ ಟಿವಿ ಸಿಬ್ಬಂದಿ ಅವರು ಆರ್.ಜಿ.ವಿ ಗೆ ಹುಡುಕಿಕೊಟ್ಟರು. ವರ್ಮಾ ಹೇಳಿದಂತೆ ಆ ವ್ಯಕ್ತಿಗೆ ಒಂದು ಲಕ್ಷ ಬಹುಮಾನ ಕೊಟ್ಟರು. ಇದೀಗ, ಮತ್ತೊಬ್ಬ ವ್ಯಕ್ತಿಯ ಬಗ್ಗೆ ಪ್ರಕಟಣೆ ನೀಡಿದ್ದು, ಈ ಬಾರಿ 10 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅಷ್ಟಕ್ಕೂ, ಈ ಸಲ ಯಾರಂತೆ ಹೋಲುವ ವ್ಯಕ್ತಿಯನ್ನ ಹುಡುಕಬೇಕು.? ಮುಂದೆ ಓದಿ....

ಎನ್.ಟಿ.ಆರ್ ಬೇಕಂತೆ

ಎನ್.ಟಿ.ಆರ್ ಬೇಕಂತೆ

ರಾಮ್ ಗೋಪಾಲ್ ವರ್ಮಾ ತೆಲುಗು ಸೂಪರ್ ಸ್ಟಾರ್ ಎನ್.ಟಿ.ಆರ್ ಕುರಿತು 'ಲಕ್ಷ್ಮೀಸ್ ಎನ್.ಟಿ.ಆರ್' ಎಂಬ ಬಯೋಪಿಕ್ ಸಿನಿಮಾ ನಿರ್ದೇಶನ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ಅಭಿನಯಿಸಲು ಎನ್.ಟಿ.ಆರ್ ಅವರಂತೆ ಕಾಣುವ ಕಲಾವಿದನಿಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಬಗ್ಗೆ ವರ್ಮಾ ಸಾರ್ವಜನಿಕವಾಗಿ ಆಫರ್ ನೀಡಿದ್ದಾರೆ.

ಯಂಗ್ ವಯಸ್ಸಿನ ಎನ್.ಟಿ.ಆರ್

ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮಿ ಅವರ ಕಥೆಯಂತೆ ಈ ಚಿತ್ರ ತಯಾರಿಸಲಾಗುತ್ತಿದೆ. ಹೀಗಾಗಿ, ಲಕ್ಷ್ಮಿ ಅವರನ್ನ ಭೇಟಿ ಮಾಡುವ ವೇಳೆ ಎನ್.ಟಿ.ಆರ್ ಹೇಗೆ ಇದ್ದರೋ ಆ ರೀತಿ ಹೋಲಿಕೆ ಇರುವಂತಹ ವ್ಯಕ್ತಿಯನ್ನ ರಾಮ್ ಗೋಪಾಲ್ ವರ್ಮಾ ಹುಡುಕುತ್ತಿದ್ದಾರೆ. ಇಂತಹ ವ್ಯಕ್ತಿಯನ್ನ ಹುಡುಕಿಕೊಟ್ಟವರಿಗೆ 10 ಲಕ್ಷ ಬಹುಮಾನ ನೀಡಲಿದ್ದಾರೆ ಎಂದು ಸ್ವತಃ ಆರ್.ಜಿ.ವಿ ಹೇಳಿದ್ದಾರೆ.

ಮೂರು ನಟರು ಆಯ್ಕೆಯಾಗಿದ್ದಾರೆ

ಮೂರು ನಟರು ಆಯ್ಕೆಯಾಗಿದ್ದಾರೆ

ಈಗಾಗಲೇ ಎನ್.ಟಿ.ಆರ್ ಪಾತ್ರಕ್ಕಾಗಿ ಮೂರು ಜನ ಕಲಾವಿದರು ಆಯ್ಕೆಯಾಗಿದ್ದಾರಂತೆ. ಆದ್ರೆ, ದಿ ಬೆಸ್ಟ್ ಎನಿಸುವ ನಟ ಬೇಕು ಎಂದು ರಾಮ್ ಗೋಪಾಲ್ ವರ್ಮಾ ಕಾಯ್ತಿದ್ದಾರೆ. ಆದ್ರೆ, ಈ ಬಯೋಪಿಕ್ ನಲ್ಲಿ ಯಾರು ಎನ್.ಟಿ.ಆರ್ ಪಾತ್ರ ನಿಭಾಯಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ಮಾಹಿತಿ ಇಲ್ಲ.

'ಲಕ್ಷ್ಮೀಸ್ ಎನ್.ಟಿ.ಆರ್' ಕುರಿತು

'ಲಕ್ಷ್ಮೀಸ್ ಎನ್.ಟಿ.ಆರ್' ಕುರಿತು

'ಲಕ್ಷ್ಮೀಸ್ ಎನ್.ಟಿ.ಆರ್' ಚಿತ್ರದ ಫಸ್ಟ್ ಲುಕ್ ನ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಿದ್ದಾರೆ. ನಟ ಎನ್.ಟಿ.ಆರ್ ಮತ್ತು ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಅವರ ನಡುವಿನ ಸಂಬಂಧದ ಕುರಿತು ಈ ಸಿನಿಮಾ ಮೂಡಿಬರಲಿದೆ. ಮತ್ತೊಂದೆಡೆ ಎನ್.ಟಿ.ಆರ್ ಪುತ್ರ ಬಾಲಕೃಷ್ಣ ಎನ್.ಟಿ.ಆರ್ ಬಯೋಪಿಕ್ ಸಿನಿಮಾ ಮಾಡ್ತಿದ್ದಾರೆ. ಜನವರಿ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

More from Filmibeat

English summary
Open offer is to get NTR look alike at age he met Lakshmi. anyone who can send video to laksmisntrgmail.com who can look and speak like NTR will get 10 lakhs from Ram gopal varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X