ನಭಾ ನಟೇಶ್ ಮೈಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ ವರ್ಮಾ
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪಾಸಿಟೀವ್ ಗಿಂತ ನೆಗಿಟೀವ್ ವಿಷ್ಯಗಳಿಗೆ ಹೆಚ್ಚು ಸುದ್ದಿಯಾಗ್ತಾರೆ. ಅವರು ಯಾವುದೇ ಸಿನಿಮಾ ಮಾಡಿದ್ರು ಅಲ್ಲೊಂದು ವಿವಾದ ಹುಟ್ಟಿಕೊಳ್ಳುವುದು ಸಹಜ.
ಹೀಗಾಗಿ, ಇಂತಹ ವಿವಾದಗಳಿಗೆ ಸ್ಪಷ್ಟನೆ ನೀಡುವುದು ಅಥವಾ ಗಂಭೀರವಾಗಿ ಟೀಕೆ ಮಾಡುವುದು ಆರ್.ಜಿ.ವಿ ಸ್ಟೈಲ್. ಬಹುಶಃ ರಾಮ್ ಗೋಪಾಲ್ ವರ್ಮಾ ಸಂಭ್ರಮ ಪಡುವುದನ್ನ ಅನೇಕ ಮಂದಿ ನೋಡಿರುವುದಿಲ್ಲ ಬಿಡಿ.
ಇದೀಗ, ಅಂತಹ ಅಪರೂಪದ ವಿಡಿಯೋವೊಂದು ಸಿಕ್ಕಿದೆ. ವಿವಾದಾತ್ಮಕ ನಿರ್ದೇಶಕ ವರ್ಮಾ ಬಿಯರ್ ಬಾಟಲ್ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಕನ್ನಡ ನಟಿ ನಭಾ ನಟೇಶ್ ಅವರ ಮೈಮೇಲೆಯಲ್ಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನ ಸ್ವತಃ ಆರ್.ಜಿ.ವಿ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ.

ಅಷ್ಟಕ್ಕೂ ಈ ಸಂಭ್ರಮ ಯಾಕೆ ಎಂದು ಕುತೂಹಲನಾ...? ಪೂರಿ ಜಗನ್ನಾಥ್ ನಿರ್ದೇಶನದ ಇಸ್ಮಾರ್ಟ್ ಶಂಕರ್ ಸಿನಿಮಾ ಸಕ್ಸಸ್ ಆಗಿದ್ದಕ್ಕೆ ಆರ್.ಜಿ.ವಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಚಿತ್ರದಲ್ಲಿ ನಭಾ ನಟೇಶ್ ಇಬ್ಬರು ನಾಯಕಿಯರ ಪೈಕಿ ಒಬ್ಬರು. ಹೀಗಾಗಿ, ವರ್ಮಾ ಆಯೋಜನೆ ಮಾಡಿದ್ದ ಸಕ್ಸಸ್ ಪಾರ್ಟಿಯಲ್ಲಿ ಪೂರಿ ಜಗನ್ನಾಥ್, ಚಾರ್ಮಿ ಕೌರ್, ನಭಾ ನಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇಸ್ಮಾರ್ಟ್ ಶಂಕರ್ ಚಿತ್ರಕ್ಕೆ ವರ್ಮಾ ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದಾರೆ. ಸಿನಿಮಾ ನೋಡುವುದಕ್ಕೆ ಸ್ನೇಹಿತರ ಜೊತೆ ಒಂದೇ ಬೈಕಿನಲ್ಲಿ ಮೂರು ಜನರ, ಹೆಲ್ಮೆಟ್ ಇಲ್ಲದೇ ಹೋಗುತ್ತಿದ್ದೇವೆ ಎಂದು ಫೋಟೋ ಹಾಕಿಕೊಂಡಿದ್ದಾರೆ.
ಪೂರಿ ಜಗನ್ನಾಥ್ ನಿರ್ದೇಶನ ಮಾಡಿ, ಚಾರ್ಮಿ ಕೌರ್ ಜೊತೆ ಸೇರಿ ಬಂಡವಾಳ ಕೂಡ ಹಾಕಿದ್ದಾರೆ. ರಾಮ್ ನಾಯಕನಾಗಿ ನಟಿಸಿದ್ದು, ನಿಧಿ ಅಗರ್ವಾಲ್ ಮತ್ತು ನಭಾ ನಟೇಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.


Click it and Unblock the Notifications











