ಅಮಲಾ ಪೌಲ್ ನಗ್ನ ನಟನೆ: ವರ್ಮಾ ಮಾಡಿದ ಟ್ವೀಟ್ ಏನು?

ಹೆಬ್ಬುಲಿ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಹೃದಯ ಬಾಗಿಲು ತಟ್ಟಿದ ನಟಿ ಅಮಲಾ ಪೌಲ್, ತಮಿಳು ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಹೊಂದಿರುವ ಕಲಾವಿದೆ. ಗ್ಲಾಮರ್, ಕ್ಲಾಸ್, ಬೋಲ್ಡ್ ಪಾತ್ರಗಳಿಗೆ ತಕ್ಕಂತೆ ನಟಿಸುವ ಅಮಲಾ ಈಗ ಹೊಸ ಸಿನಿಮಾದಲ್ಲಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ಅಡೈ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅಮಲಾ ಪೌಲ್ ಈ ಚಿತ್ರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವುದು ಈಗ ಚಿತ್ರಜಗತ್ತಿನಲ್ಲಿ ಭಾರಿ ಸದ್ದು ಮಾಡ್ತಿದೆ. ಆರಂಭದಲ್ಲಿ ಪೋಸ್ಟರ್ ಮೂಲಕ ಸಂಚಲನ ಸೃಷ್ಟಿಸಿದ್ದ ನಟಿ ಈಗ ಟೀಸರ್ ನಲ್ಲಿ ಬೆಂಕಿ ಹಚ್ಚಿದ್ದಾರೆ.

ಹೌದು, ಅಡೈ ಟೀಸರ್ ನಲ್ಲಿ ನಗ್ನವಾಗಿ ಕಾಣಿಸಿಕೊಂಡಿರುವ ಅಮಲಾ ಪೌಲ್ ಧೈರ್ಯಕ್ಕೆ ಸಿನಿಮಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ನಟಿ ಸಮಂತಾ ಅಮಲಾ ಬಗ್ಗೆ ಟ್ವೀಟ್ ಮಾಡಿದ್ದಾರೆ. ಏನಂದ್ರು? ಮುಂದೆ ಓದಿ....

ಆಕೆಯ ನಗ್ನತೆ ಹೃದಯ ಮುಟ್ಟಿದೆ

ಆಕೆಯ ನಗ್ನತೆ ಹೃದಯ ಮುಟ್ಟಿದೆ

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಡೈ ಚಿತ್ರದ ಟೀಸರ್ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ ''ಅದ್ಭುತವಾದ ಟೀಸರ್ ನೋಡಿದೆ. ಆಕಯೆ ಪ್ರಮಾಣಿಕತೆಯ ನಗ್ನತೆ ಹೃದಯ ಮುಟ್ಟುವಂತಿದೆ'' ಎಂದು ಹೇಳಿ, ನಿರ್ದೇಶಕನ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕೌತುಕ ಮಟ್ಟ ಹೆಚ್ಚಾಗಿದೆ

ಕೌತುಕ ಮಟ್ಟ ಹೆಚ್ಚಾಗಿದೆ

ಅಮಲಾ ಪೌಲ್ ನಟನೆಯ ಅಡೈ ಟೀಸರ್ ಬಗ್ಗೆ ನಟಿ ಸಮಂತಾ ಅಕ್ಕಿನೇನಿ ಕೂಡ ಟ್ವೀಟ್ ಮಾಡಿದ್ದು, ''ಟೀಸರ್ ಅದ್ಭುತವಾಗಿ, ಕುತೂಹಲ ಮಟ್ಟ ಹೆಚ್ಚಾಗಿದೆ. ಚಿತ್ರಕ್ಕಾಗಿ ಕಾಯುತ್ತಿರುವೆ. ಆಲ್ ದಿ ಬೆಸ್ಟ್'' ಎಂದು ಶುಭ ಕೋರಿದ್ದಾರೆ.

ಕರಣ್ ಜೋಹರ್ ಮೆಚ್ಚಿದ ಟೀಸರ್

ಕರಣ್ ಜೋಹರ್ ಮೆಚ್ಚಿದ ಟೀಸರ್

ಇನ್ನು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅಡೈ ಟೀಸರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಸದ್ಯದ ಎಲ್ಲ ಸಂಕೋಲೆಗಳನ್ನ ಮುರಿಯುತ್ತೆ ಎಂದು ಆತ್ಮವಿಶ್ವಾಸ ಹಂಚಿಕೊಂಡಿದ್ದಾರೆ. ಕರಣ್ ಜೋಹರ್ ಅವರ ಟ್ವೀಟ್ ಗೆ ಅಮಲಾ ಪೌಲ್ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸಿದ್ದಾರೆ.

ತಮಿಳು ಮತ್ತು ತೆಲುಗು ಸಿನಿಮಾ

ತಮಿಳು ಮತ್ತು ತೆಲುಗು ಸಿನಿಮಾ

ತಮಿಳು ಮತ್ತು ತೆಲುಗು ಭಾಷೆಯಲ್ಲಿ ಅಡೈ ಸಿನಿಮಾ ಬರ್ತಿದ್ದು, ರತ್ನ ಕುಮಾರ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ, ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮಲಾ ಪೌಲ್ ಮೊದಲ ಸಲ ಇಷ್ಟೊಂದು ಬೋಲ್ಡ್ ಆಗಿ ನಟಿಸಿದ್ದಾರೆ.

More from Filmibeat

English summary
South actress amala paul starrer aadai teaser released. after watching aadai teaser Ram gopal varma commented on amala paul. what he told?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X