'ಪಾಪ್ ಕಾರ್ನ್ ಮಂಕಿ ಟೈಗರ್' ಟೀಸರ್ ನೋಡಿ ರಾಮ್ ಗೋಪಾಲ್ ವರ್ಮಾ ಏನಂದ್ರು?
ಡಾಲಿ ಧನಂಜಯ್ ನಾಯಕನಾಗಿ ನಟಿಸಿರುವ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ. ದುನಿಯಾ ಸೂರಿ ನಿರ್ದೇಶನದ ಈ ಸಿನಿಮಾ ಟೀಸರ್ ನಲ್ಲೇ ಸಂಚಲನ ಸೃಷ್ಟಿಸಿದೆ.
ಪಕ್ಕಾ ರಾ ಮೇಕಿಂಗ್ ಆಗಿರುವ ಈ ಚಿತ್ರ ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಹಿಟ್ ಸಿನಿಮಾ ಆಗೋದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತಿದ್ದಾರೆ ಚಿತ್ರಪ್ರೇಮಿಗಳು.
ಟಗರು ಸಿನಿಮಾದಲ್ಲಿ ಡಾಲಿ ಆಗಿ ಕಾಣಿಸಿಕೊಂಡಿದ್ದ ಧನಂಜಯ್ ಭಯಾನಕ ಕ್ರೂರಿಯಾಗಿ ನಟಿಸಿದ್ದರು. ಪಾಪ್ ಕಾರ್ನ್ ಚಿತ್ರದಲ್ಲಿ ಅದಕ್ಕಿಂತ ಎರಡು ಪಟ್ಟು ಹೆಚ್ಚು ಕ್ರೂರಿಯಾಗಿರುವ ಸೂಚನೆ ನೀಡಿದೆ ಟೀಸರ್.

ಇದೀಗ, ಧನಂಜಯ್ ಸಿನಿಮಾದ ಟೀಸರ್ ನೋಡಿದ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಧನಂಜಯ್ ಲುಕ್, ನಟನೆ ಮತ್ತು ದುನಿಯಾ ಸೂರಿಯ ರಾ ಮೇಕಿಂಗ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ''ಖಂಡಿತವಾಗಿ ನೋಡಲೇಬೇಕಾದ ಟೀಸರ್. ವಿಭಿನ್ನವಾದ ಶೀರ್ಷಿಕೆ, ವಿಲನ್ ರೀತಿ ಕಾಣುವ ಹೀರೋ ಧನಂಜಯ್ ಹಾಗೂ ಟಗರು ಚಿತ್ರವನ್ನು ಹಿಂದಿಕ್ಕುವಂತಿದೆ ಸೂರಿ ನಿರ್ದೇಶನ'' ಎಂದು ಟ್ವೀಟ್ ಮಾಡಿದ್ದಾರೆ.
ಟಗರು ಬಳಿಕ ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸುಧೀ ನಿರ್ಮಿಸಿದ್ದು, ನಿವೇದಿತಾ (ಸ್ಮಿತಾ), ಅಮೃತಾ ಐಯಂಗರ್, ಸಪ್ತಮಿ, ಸುಧೀ, ನವೀನ್ ಸೇರಿದಂತೆ ಹಲವರು ಮುಖ್ಯಭೂಮಿಕೆಯಲ್ಲಿದ್ದಾರೆ.


Click it and Unblock the Notifications











