For Quick Alerts
  ALLOW NOTIFICATIONS  
  For Daily Alerts

  ರಾಮ್ ಗೋಪಾಲ್ ವರ್ಮಾ ಮಗಳ ಮದುವೆ ಚಿತ್ರಗಳು

  By ಅನಂತರಾಮು, ಹೈದರಾಬಾದ್
  |

  ಬಾಲಿವುಡ್ ಚಿತ್ರಗಳ ವಿವಾದಾತ್ಮಕ ನಿರ್ದೇಶಕ ಎಂದೇ ಜನಜನಿತರಾಗಿರುವ ರಾಮ್ ಗೋಪಾಲ್ ವರ್ಮಾ ಅವರಿಗೆ ಮದುವೆಯಾಗಿದೆ ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲದ ಸಂಗತಿ. ಏಕೆಂದರೆ ಅವರ ಖಾಸಗಿ ವಿಚಾರಗಳು ಅವರ ಚಿತ್ರಗಳಷ್ಟೇ ನಿಗೂಢ ಹಾಗೂ ವಿಸ್ಮಯ.

  ಇತ್ತೀಚೆಗೆ ಅವರ ಮಗಳು ರೇವತಿ ವಿವಾಹ ನಡೆಯಿತು. ಸಾಮಾನ್ಯವಾಗಿ ಸಿನಿಮಾ ತಾರೆಗಳ ಮದುವೆ ಎಂದರೆ ಅದ್ದೂರಿಯಾಗಿಯೇ ಇರುತ್ತದೆ. ಆದರೆ ವರ್ಮಾ ಮಗಳ ಮದುವೆ ಸರಳವಾಗಿ ನೆರವೇರಿತು. ಆರು ತಿಂಗಳ ಹಿಂದೆಯೇ ರೇವತಿ ಮದುವೆ ನಿಶ್ಚಯವಾಗಿತ್ತು. ಈ ಬಗ್ಗೆ ಟ್ವಿಟ್ಟರ್ ನಲ್ಲಿ ವರ್ಮಾ ಬಹಿರಂಗಪಡಿಸಿದ್ದರು.

  ಸ್ವಾತಂತ್ರ್ಯ ದಿನಾಚರಣೆ ದಿನ ಅಂದರೆ ಆಗಸ್ಟ್ 15ರಂದು ಹೈದರಾಬಾದಿನ ಪಂಚತಾರಾ ಹೋಟೆಲ್ ನಲ್ಲಿ ಬಂಧುಮಿತ್ರರ ಸಮ್ಮುಖದಲ್ಲಿ ಮದುವೆ ನೆರವೇರಿತು. ದಕ್ಷಿಣ ಭಾರತದ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭದಲ್ಲಿ ರೇವತಿ ವರನಾದ ಪ್ರಣವ್ ಕೈಹಿಡಿದರು.

  ಈ ಮದುವೆ ಆದಷ್ಟು ಸರಳವಾಗಿ ನಡೆಯಬೇಕು ಎಂದು ಸ್ವತಃ ರೇವತಿ ಅವರೇ ಬಯಸಿದ್ದರಂತೆ. ಹಾಗಾಗಿ ಮದುವೆಯನ್ನು ಸರಳವಾಗಿ ಮುಗಿಸಿದ್ದಾರೆ ವರ್ಮಾ. ರೇವತಿಗೆ ಗೊತ್ತಿರುವ ಸ್ನೇಹಿತರು ಹಾಗೂ ತಮ್ಮ ಬಂಧು ಮಿತ್ರರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.

  ಮದುವೆಗೆ ಆಗಮಿಸಿದ್ದ ಅತಿಥಿಗಳು ಹೆಚ್ಚೆಂದರೆ 250 ಮಂದಿ ಮಾತ್ರ. ಮಾಧ್ಯಮಗಳನ್ನು ಈ ಮದುವೆಯನ್ನು ಮುಗಿಬಿದ್ದು ಪ್ರಚಾರ ನೀಡಲಿಲ್ಲ ಬಿಡಿ. ಟಾಲಿವುಡ್ ಚಿತ್ರರಂಗದ ಕೆಲವು ಬೆರಳೆಣಿಕೆ ತಾರೆಗಳು ಆಗಮಿಸಿದ್ದರು. ಚಿತ್ರಗಳಲ್ಲಿ ನೋಡಿ ರೇವತಿ ಮದುವೆ ಸಂಭ್ರಮ.

  ಕಡಿಮೆ ಬಜೆಟ್ ನಲ್ಲಿ ಮುಗಿದ ಮದುವೆ

  ಕಡಿಮೆ ಬಜೆಟ್ ನಲ್ಲಿ ಮುಗಿದ ಮದುವೆ

  "Simple living and high thinking" ಎಂಬುದು ರಾಮ್ ಗೋಪಾಲ್ ವರ್ಮಾ ಅವರ ಧೋರಣೆ. ಇದಕ್ಕೆ ತಕ್ಕಂತೆ ತಮ್ಮ ಮಗಳು ರೇವತಿ ಮದುವೆಯೂ ನಡೆಯಿತು. ಅವರ ಚಿತ್ರಗಳಿಗೂ ಅಷ್ಟೇ ಹೆಚ್ಚು ಬಜೆಟ್ ಇರುವುದಿಲ್ಲ. ಆದರೆ ತಾಂತ್ರಿಕವಾಗಿ ಮಾತ್ರ ಪ್ರೌಢವಾಗಿರುತ್ತವೆ.

  ಅನಗತ್ಯ ಹಣದ ಪೋಲು ತಡೆದ ವರ್ಮಾ

  ಅನಗತ್ಯ ಹಣದ ಪೋಲು ತಡೆದ ವರ್ಮಾ

  ರಾಮ್ ಗೋಪಾಲ್ ವರ್ಮಾ ಮಗಳ ಮದುವೆ ಎಂದರೆ ಇನ್ನೇಗಿರುತ್ತದೋ ಏನೋ ಎಂದು ಎಲ್ಲರೂ ಭಾವಿಸಿದ್ದರು. ಅವರ ಚಿತ್ರಗಳಂತೆ ಇಲ್ಲೂ ಲೋ ಬಜೆಟ್ ನಲ್ಲೇ ಮುಗಿದು ಹೋಗಿದೆ. ಅನಗತ್ಯವಾಗಿ ಹಣ ಪೋಲು ಮಾಡಬಾರದು ಎಂಬ ಲಾಜಿಕ್ ಅವರದು.

  ಅಪ್ಪನಂತೆ ಮಗಳು ಯಾವುದರಲ್ಲೂ ಕಮ್ಮಿ ಇಲ್ಲ

  ಅಪ್ಪನಂತೆ ಮಗಳು ಯಾವುದರಲ್ಲೂ ಕಮ್ಮಿ ಇಲ್ಲ

  ಅಪ್ಪನಂತೆ ಮಗಳು ಯಾವುದರಲ್ಲೂ ಕಡಿಮೆ ಇಲ್ಲ. ಅಪ್ಪನ ಧೋರಣೆ ಮಗಳಿಗೂ ಓಕೆಯಾಗಿದೆ. ಇಬ್ಬರೂ ಓಕೆ ಎಂದ ಮೇಲೆ ದುಂದು ವೆಚ್ಚ ಎಲ್ಲಿಂದ ಬಂತು. ಮದುವೆಗೆ ಕಂಡಕಂಡವರನ್ನೆಲ್ಲಾ ಕರೆಯದೆ ತುಂಬಾ ಆಪ್ತರಾದವನ್ನು ಮಾತ್ರ ಆಹ್ವಾನಿಸಿದ್ದಾರೆ.

  ಎಸ್ಎಂಎಸ್ ಮೂಲಕ ಮದುವೆಗೆ ಆಹ್ವಾನ

  ಎಸ್ಎಂಎಸ್ ಮೂಲಕ ಮದುವೆಗೆ ಆಹ್ವಾನ

  ಇನ್ನೂ ವಿಶೇಷ ಎಂದರೆ ಬಂಧು ಮಿತ್ರರನ್ನು ವರ್ಮಾ ಆಹ್ವಾನಿಸಿರುವ ರೀತಿ. ಕೇವಲ ಎಸ್ಎಂಎಸ್ ಕಳುಹಿಸಿ ತಮ್ಮ ಆಪ್ತರನ್ನು ವರ್ಮಾ ಮದುವೆಗೆ ಕರೆದಿದ್ದಾರೆ. ಇನ್ನು ಮದುವೆ ಆಮಂತ್ರಣ ಪತ್ರಿಕೆ ಮಾತೇ ಇಲ್ಲ.

  ವರ್ಮಾ ಮದುವೆ ಆಮಂತ್ರಣ ಎಸ್ಎಂಎಸ್

  ವರ್ಮಾ ಮದುವೆ ಆಮಂತ್ರಣ ಎಸ್ಎಂಎಸ್

  ರಾಮ್ ಗೋಪಾಲ್ ವರ್ಮಾ ಕಳುಹಿಸಿದ ಮದುವೆ ಎಸ್ಎಂಎಸ್ ಹೀಗಿದೆ, "Hey, finally even I couldn't escape this...my daughter's getting married on 15th... at 8.45 pm. Please come if you feel like. Not to bless the couple, but to check what kind of a joker I will be looking."

  ಸರಳವಾಗಿ ಡ್ರೆಸ್ ಮಾಡಿಕೊಂಡಿದ್ದ ವರ್ಮಾ

  ಸರಳವಾಗಿ ಡ್ರೆಸ್ ಮಾಡಿಕೊಂಡಿದ್ದ ವರ್ಮಾ

  ಇನ್ನು ಮದುವೆ ಎಂದರೆ ಎಲ್ಲರೂ ಟಿಪ್ ಟಾಪ್ ಆಗಿ ಸೂಟು ಬೂಟು ಧರಿಸಿ ಮಿಂಚುತ್ತಿರುತ್ತಾರೆ. ಮದುವೆ ಹೆಣ್ಣಿನ ತಂದೆ ಹೇಗಿರಬೇಡ. ಇಲ್ಲೂ ಎಲ್ಲರ ನಿರೀಕ್ಷೆಗಳೂ ತೆಲಕೆಳಗು. ಏಕೆಂದರೆ ವರ್ಮಾ ಎಲ್ಲರಿಗಿಂತಲೂ ಸರಳವಾಗಿ ಡ್ರೆಸ್ ಮಾಡಿಕೊಂಡಿದ್ದರು.

  ಮದುವೆ ಮಂಟಪದಿಂದ ದೂರ ಉಳಿದ ವರ್ಮಾ

  ಮದುವೆ ಮಂಟಪದಿಂದ ದೂರ ಉಳಿದ ವರ್ಮಾ

  ಇನ್ನು ಮದುವೆ ಮಂಟಪದಿಂದಲೂ ವರ್ಮಾ ದೂರ ಉಳಿದಿದ್ದರು. ಅವರು ಮಂಟಪಕ್ಕೆ ಅಡಿಯಿಟ್ಟಿದ್ದು ಇಬ್ಬರನ್ನೂ ಹರಸಲು ಮಾತ್ರ. ಅಲ್ಲಿಯವರೆಗೂ ಅವರು ಎಲ್ಲೂ ದೂರ ನಿಂತು ಮದುವೆಗೆ ಅಕ್ಷತೆ ಕಾಳು ಹಾಕಿ ಹರಸಿದರು. ಎಲ್ಲರೊಂದಿಗೆ ಫೋಟೋ ತೆಗೆದುಕೊಳ್ಳಲು ಅವರು ನಿರಾಕರಿಸಿದ್ದು ಇನ್ನೊಂದು ವಿಶೇಷ.

  ಮದುವೆಗೆ ಮಾಜಿ ಪತ್ನಿ ಆಗಮನ

  ಮದುವೆಗೆ ಮಾಜಿ ಪತ್ನಿ ಆಗಮನ

  ಈ ಮದುವೆ ಸಮಾರಂಭಕ್ಕೆ ವರ್ಮಾ ಅವರ ಮಾಜಿ ಪತ್ನಿಯೂ ಆಗಮಿಸಿದ್ದರು. ಸುಮಾರು 8.45ಕ್ಕೆ ಆರಂಭವಾದ ಮದುವೆ 9.30ಕ್ಕೆಲ್ಲಾ ಮುಗಿಯಿತು. ಮದುವೆಗೆ ಬಂದ ಅತಿಥಿಗಳನ್ನು ವರ್ಮಾ ಮಾಜಿ ಪತ್ನಿ ರತ್ನಾ ಅವರೇ ಸ್ವತಃ ಎಲ್ಲರನ್ನೂ ಆಹ್ವಾನಿಸುತ್ತಿದ್ದದ್ದು ಎದ್ದು ಕಾಣುತ್ತಿತ್ತು.

  English summary
  Bollywood filmmaker Ram Gopal Varma's daughter Revathi tied the nuptial knot with her beau Pranav at a traditional South Indian ceremony held at a star hotel in Hyderabad on Thursday evening (August 15). Revathi's marriage was a simple and low key-profile ceremony, which was attended by only family members and close friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X