ಬೆಳ್ಳಿತೆರೆಗೆ ಆರ್.ಜಿ.ವಿ ಎಂಟ್ರಿ: ಸ್ವಾಗತಿಸಿದ ಸುದೀಪ್, ಅಮಿತಾಬ್

30ಕ್ಕೂ ಹೆಚ್ಚು ವರ್ಷದಿಂದ ಸಿನಿಮಾ ಜಗತ್ತಿನಲ್ಲಿರುವ ರಾಮ್ ಗೋಪಾಲ್ ವರ್ಮಾ, ನೈಜಕಥೆಯಾಧರಿತ ಚಿತ್ರಗಳನ್ನ ಮಾಡೋದ್ರಲ್ಲಿ ಎತ್ತಿದ ಕೈ. ಅಂಡರ್ ವರ್ಲ್ಡ್ ಸಿನಿಮಾ, ಬಯೋಪಿಕ್ ಸಿನಿಮಾಗಳಿಗೆ ಆರ್.ಜಿ.ವಿ ಬ್ರಾಂಡ್. ಹಲವು ಸ್ಟಾರ್ ನಟರಿಗೆ ಲೈಪ್ ಕೊಟ್ಟ ಸೂಪರ್ ಡೈರೆಕ್ಟರ್.

ಇಷ್ಟು ದಿನ ತೆರೆಹಿಂದೆ ನಿಂತು ಸ್ಟಾರ್ ಗಳನ್ನ ಹುಟ್ಟುಹಾಕುತ್ತಿದ್ದ ವರ್ಮಾ, ಈಗ ಮೊದಲ ಸಲ ತೆರೆಮೇಲೆ ಬರ್ತಿದ್ದಾರೆ. ಹೌದು, 30 ವರ್ಷದ ಜರ್ನಿಯಲ್ಲಿ ಇದೇ ಮೊದಲ ಬಾರಿಗೆ ನಟನಾಗಿ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾರೆ ಆರ್.ಜಿ.ವಿ.

ನಿನ್ನೆ (ಏಪ್ರಿಲ್ 7) ಆರ್.ಜಿ.ವಿ ಹುಟ್ಟಹಬ್ಬ. ಈ ವಿಶೇಷ ದಿನದಲ್ಲಿ ವರ್ಮಾ ಭರ್ಜರಿ ಸುದ್ದಿ ಕೊಟ್ಟ ವರ್ಮಾ 'ಮೊದಲ ಸಿನಿಮಾ ಚಿತ್ರದಲ್ಲಿ ನಟಿಸುತ್ತಿದ್ದೇನೆ' ಎಂದು ಸರ್ಪ್ರೈಸ್ ನೀಡಿದ್ದಾರೆ. ಜೊತೆಗೆ ಫಸ್ಟ್ ಲುಕ್ ಕೂಡ ಹಂಚಿಕೊಂಡಿದ್ದಾರೆ.

ಹೌದು, 'ಕೋಬ್ರಾ' ಎಂಬ ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ರಾಮ್ ಗೋಪಾಲ್ ವರ್ಮಾ ಅಭಿನಯಿಸುತ್ತಿದ್ದಾರಂತೆ. ಇದು ಅತಿ ಭಯಾನಕ ಕ್ರಿಮಿನಲ್ ಒಬ್ಬನ ಕಥೆಯಾಗಿದ್ದು, ಈ ಕ್ರಿಮಿನಲ್ ಬಂಧನವಾದ್ರೆ, ಇಡೀ ಪೊಲೀಸ್ ಇಲಾಖೆಯಲ್ಲಿ ಅರ್ಧದಷ್ಟು ಅಧಿಕಾರಿಗಳು ಜೈಲಿಗೆ ಹೋಗ್ತಾರೆಂದು ವರ್ಮಾ ತಿಳಿಸಿದ್ದಾರೆ.

Ram gopal varma debut to big screen

ಕೋಬ್ರಾ ಚಿತ್ರದಲ್ಲಿ ವರ್ಮಾ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕನ್ನಡ ನಟ ಕಿಚ್ಚ ಸುದೀಪ್ ಸ್ವಾಗತ ಕೋರಿದ್ದಾರೆ. ಸುದೀಪ್ ಅವರಷ್ಟೇ ಅಲ್ಲದೇ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ವರ್ಮಾ ಅವರ ಡೆಬ್ಯೂಗೆ ಶುಭಾಶಯ ಕೋರಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಲಕ್ಷ್ಮೀಸ್ ಎನ್.ಟಿ.ಆರ್' ಇತ್ತೀಚಿಗಷ್ಟೆ ಬಿಡುಗಡೆಯಾಗಿತ್ತು. ಅಷ್ಟರಲ್ಲೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Director ram gopal varma making his acting debut in the cobra movie. now, rgv's first look is revealed for his birthday special.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X