ಮಚ್ಚು ಹಿಡಿದು ವರ್ಮ ಎಚ್ಚರಿಕೆ ನೀಡಿದ್ದು ಯಾರಿಗೆ?

ರಾಮ್ ಗೋಪಾಲ್ ವರ್ಮ ಏನೇ ಮಾಡಿದ್ರು ಡಿಫರೆಂಟ್ ಆಗಿ ಮಾಡುತ್ತಾರೆ. ಅದು ಸಿನಿಮಾ ಆಗಿರಬಹುದು ಸಿನಿಮಾದ ಆಚೆಗಿನ ತಮ್ಮ ನಡವಳಿಕೆ ಆಗಿರಬಹುದು. ಇದೀಗ ವರ್ಮ ಮಚ್ಚು ಹಿಡಿದು ಸುದ್ದಿ ಮಾಡಿದ್ದಾರೆ.

ಸದ್ಯ, ರಾಮ್ ಗೋಪಾಲ್ ವರ್ಮ ತೆಲುಗು ನಟ ಎನ್ ಟಿ ಆರ್ ಬಗ್ಗೆ 'ಲಕ್ಷ್ಮಿ ಎನ್ ಟಿ ಆರ್' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ದೊಡ್ಡ ವಿರೋಧ ವ್ಯಕ್ತವಾಗಿದೆ. ಆದರೆ, ಇದ್ಯಾವುದಕ್ಕೂ ಜಗ್ಗದ ವರ್ಮ ಸಿನಿಮಾಗೆ ವಿರೋಧ ಮಾಡುವವರಿಗೆ ಮಚ್ಚು ಹಿಡಿದು ಎಚ್ಚರಿಕೆ ನೀಡಿದ್ದಾರೆ.

''ಎನ್ ಟಿ ಆರ್ ಕಥಾನಾಯಕುಡು ಅಲ್ಲ... ಎನ್ ಟಿ ಆರ್ ಮಹಾ ನಾಯಕುಡು ಅಲ್ಲ... ಎನ್ ಟಿ ಆರ್ ಬಗ್ಗೆಯ ನಿಜವನ್ನು ಲಕ್ಷ್ಮಿ ಎನ್ ಟಿ ಆರ್ ಮೂಲಕ ತೆಲುಗು ಪ್ರೇಕ್ಷಕರಿಗೆ ತೋರಿಸುತ್ತಿದ್ದೇನೆ. ಈ ಚಿತ್ರ ರಿಲೀಸ್ ಗೆ ಯಾರಾದರೂ ಅಡ್ಡ ಬಂದರೇ..'' ಎಂದು ಡೈಲಾಗ್ ಹೊಡೆದಿದ್ದಾರೆ.

ram gopal varma gave warning about lakshmis ntr movie

ಇತ್ತೀಚಿಗೆ ಎನ್ ಟಿ ಆರ್ ಬಯೋಪಿಕ್ ಮೊದಲ ಭಾಗ ಕಥಾನಾಯಕುಡು ಬಿಡುಗಡೆಯಾಗಿತ್ತು. ಎರಡನೇ ಭಾಗ ಮಹಾನಾಯಕುಡು ಇದೇ ತಿಂಗಳು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಎನ್ ಟಿ ಆರ್ ಪುತ್ರ ಬಾಲಕೃಷ್ಣ ನಟಿಸಿದ್ದರು.

ರಾಮ್ ಗೋಪಾಲ್ ವರ್ಮ ಅವರ 'ಲಕ್ಷ್ಮಿ ಎನ್ ಟಿ ಆರ್' ಟಾಲಿವುಡ್ ನಲ್ಲಿ ದೊಡ್ಡ ವಿವಾದ ಹುಟ್ಟು ಹಾಕಿದೆ. ಕನ್ನಡದ ನಟಿ ಯಜ್ಞ ಶೆಟ್ಟಿ ಇಲ್ಲಿ ಎನ್ ಟಿ ಆರ್ ಪತ್ನಿ ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Director Ram Gopal Varma gave warning about his Lakshmi's NTR movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X