»   » ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ

ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ

Posted By:
Subscribe to Filmibeat Kannada

ತೆಲುಗು ಇಂಡಸ್ಟ್ರಿಯಲ್ಲಿ ಸದ್ಯ ಕಾಸ್ಟಿಂಗ್ ಕೌಚ್ ಎಂಬ ಪೆಡಂಭೂತದ ಬಗ್ಗೆ ನಟಿ ಶ್ರೀರೆಡ್ಡಿ ಸೇರಿದಂತೆ ಹಲವರು ನಟಿಯರು ಸಮರ ಸಾರಿದ್ದಾರೆ. ನಟಿಯರಿಗೆ ಕಿರುಕುಳ ನೀಡಿರುವ ನಿರ್ದೇಶಕ, ನಿರ್ಮಾಪಕರ ಹೆಸರುಗಳನ್ನ ಶ್ರೀರೆಡ್ಡಿ ಬಹಿರಂಗಪಡಿಸಿ ಸಂಚಲನ ಸೃಷ್ಟಿಸಿದ್ದಾರೆ.

ಇದೀಗ, ಶ್ರೀರೆಡ್ಡಿಗೆ ಸಾಥ್ ನೀಡಿರುವ ರಾಮ್ ಗೋಪಾಲ್ ವರ್ಮಾ, ಇಂಡಸ್ಟ್ರಿಯ ದೊಡ್ಡ ನಿರ್ಮಾಪಕನೊಬ್ಬನ ಕರಾಳ ಮುಖವನ್ನ ಬಯಲು ಮಾಡಿದ್ದಾರೆ. ಆ ನಿರ್ಮಾಪಕ ಹೇಗೆ ಹೆಣ್ಣು ಮಕ್ಕಳನ್ನ ಬಳಸಿಕೊಳ್ಳುತ್ತಿದ್ದ ಎಂಬುದನ್ನ ಆರ್.ಜಿ.ವಿ ಹೊರಹಾಕಿದ್ದಾರೆ.

ಟಿವಿ ಸಂದರ್ಶನದಲ್ಲಿ ಕಾಸ್ಟಿಮಗ್ ಕೌಚ್ ಬಗ್ಗೆ ಮಾನಾಡಿದ ರಾಮ್ ಗೋಪಾಲ್ ವರ್ಮಾ, ನನ್ನ ಎದುರಿಗೆ ನನಗೆ ಗೊತ್ತಿರುವ ನಿರ್ಮಾಪಕನೊಬ್ಬ ಯುವತಿಗೆ ಮಂಚಕ್ಕೆ ಆಫರ್ ಮಾಡಿದ್ದ'' ಎಂದು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಆ ನಟಿ ಹಾಗೂ ನಿರ್ಮಾಪಕನ ಮಧ್ಯೆ ನಡೆದ ಸಂಭಾಷಣೆಯನ್ನ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ವರ್ಮಾ ಹೇಳುತ್ತಿರುವ ಕಥೆ ಯಾವುದು.? ಮುಂದೆ ಓದಿ......

ದೊಡ್ಡ ನಿರ್ಮಾಪಕನ ಬಳಿ ಯುವತಿ ಹೋಗಿದ್ದಾಗ....

ಇಂಡಸ್ಟ್ರಿಯ ದೊಡ್ಡ ನಿರ್ಮಾಕಪನ ಬಳಿ ಒಬ್ಬ ಯುವತಿ ಸಿನಿಮಾ ಅವಕಾಶ ಕೋರಿ ಹೋಗಿದ್ದಾಗ, ಆ ನಿರ್ಮಾಪಕ ಆಕೆಯನ್ನ ಮಂಚಕ್ಕೆ ಆಹ್ವಾನ ನೀಡಿದ್ದಾನೆ. ಈ ಘಟನೆಗೆ ನಾನೇ ಸಾಕ್ಷಿ ಎಂದು ರೋಚಕ ಕಥೆಯೊಂದನ್ನ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಿಚ್ಚಿಟ್ಟಿದ್ದಾರೆ.

ನಟಿಗೆ ಬೆಂಬಲ ನೀಡಲು ಹೋಗಿ ವಿವಾದಾತ್ಮಕ ಟ್ವೀಟ್ ಮಾಡಿದ ವರ್ಮಾ.!

ಈ ಹುಡುಗಿ ಬಂದು ನನ್ನ ಬಳಿ ಹೇಳಿದ್ಲು

''ದೊಡ್ಡ ನಿರ್ಮಾಪಕನೊಬ್ಬ ನನ್ನನ್ನು ಮಂಚಕ್ಕೆ ಕರೆದಿದ್ದಾನೆ ಎಂದು ನನ್ನ ಬಳಿ ಆ ಹುಡುಗಿ ಬಂದು ಹೇಳಿದಳು. ಆದ್ರೆ, ಅದನ್ನ ನಾನು ನಂಬಲಿಲ್ಲ. ಯಾಕಂದ್ರೆ, ಆ ನಿರ್ಮಾಪಕ ನನಗೂ ಗೊತ್ತಿತ್ತು. ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದ ಪ್ರಡ್ಯೂಸರ್. ಆದ್ರೆ, ಆ ಹುಡುಗಿ ನನ್ನ ಎದುರಲ್ಲೇ ಆ ನಿರ್ಮಾಪಕನಿಗೆ ಫೋನ್ ಮಾಡಿ ನನ್ನನ್ನೇ ಆಶ್ಚರ್ಯ ಉಂಟು ಮಾಡಿದಳು'' ಎಂದು ವರ್ಮಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಲೌಡ್ ಸ್ವೀಕರ್ ಆನ್ ಮಾಡಿ ಮಾತನಾಡಿದ್ಲು...

''ಆ ಹುಡುಗಿ ನನ್ನ ಎದುರುಗೆ ಫೋನ್ ಮಾಡಿ ಲೌಡ್ ಸ್ವೀಕರ್ ಆನ್ ಮಾಡಿ ಮಾತನಾಡಿದಳು. ಸರ್, ನಾನು ನಿಮ್ಮ ಆಫೀಸ್ ಗೆ ಬಂದಿದ್ದೆ, ಕೊನೆಯಲ್ಲಿ ಕಾಂಪ್ರುಮೈಸ್ ಆಗ್ಬೇಕು ಅಂತ ಹೇಳುದ್ರಿ. ನನಗೆ ಅರ್ಥವಾಗಿಲ್ಲ. ಏನದು ಕಾಂಪ್ರುಮೈಸ್ ಎಂದಳು. ಅದಕ್ಕೆ ಆ ನಿರ್ಮಾಪಕ ಕಾಂಪ್ರುಮೈಸ್ ಅಂದ್ರೆ ಎಲ್ಲರಿಗೆ ಗೊತ್ತಿರೋದೆ. ಮತ್ತೇಕೆ ಕೇಳ್ತಿದ್ದಿಯಾ ಅಂದ್ರು. ಆದ್ರೂ ಆ ಹುಡುಗಿ ಸರ್ ನನಗೆ ಗೊತ್ತಿಲ್ಲ, ನಿಮ್ಮ ಜೊತೆ ಮಲಗಬೇಕಾ.? ಎಂದು ಕೇಳಿದಳು. ಆಗ ನಿರ್ಮಾಪಕ, ನಿನಗೆ ಎಲ್ಲ ಗೊತ್ತಿದೆ, ಮತ್ಯಾಕೆ ಕೇಳ್ತಿಯಾ ಎಂದರು. ಆ ವಾಯ್ಸ್ ನನಗೆ ಗೊತ್ತಾಯಿತು.'' ಎಂದು ಇಬ್ಬರ ನಡುವೆ ನಡೆದ ಸಂಭಾಷಣೆಯನ್ನ ವರ್ಮಾ ಬಹಿರಂಗಪಡಿಸಿದರು.

ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!

ಆಕೆಯ ಬಳಿ ವಾಯ್ಸ್ ರೆಕಾರ್ಡ್ ಆಗಿದೆ

''ಸರ್ ನಿಮ್ಮ ಜೊತೆ ಮಲಗಿದ್ರೇ, ಆ ಹೀರೋ ಹಾಗೂ ನಿರ್ದೇಶಕರು ಅಷ್ಟು ದೊಡ್ಡ ಸಿನಿಮಾದಲ್ಲಿ ನನ್ನನ್ನು ಹೀರೋಯಿನ್ ಮಾಡೋಕೆ ಒಪ್ಪಿಕೊಳ್ತಾರ ಎಂದು ಕೇಳಿದಾಗ, ಅವರು ಒಪ್ಪಿಕೊಂಡಿಲ್ಲ ಅಂದ್ರೆ, ಅವರನ್ನ ಇಂಡಸ್ಟ್ರಿಯಿಂದ ಓಡಿಸುತ್ತೇನೆ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲ ಅಂದರು. ಇಷ್ಟೆಲ್ಲಾ ಮಾತನಾಡಿದ ಆ ಹುಡುಗಿ ಆ ಫೋನ್ ಕಾಲನ್ನ ರೆಕಾರ್ಡ್ ಮಾಡಿಕೊಂಡಳು'' - ವರ್ಮಾ

ಶ್ರೀರೆಡ್ಡಿ ಮಾಡಿದ ಕೆಲಸಕ್ಕೆ ಸಲ್ಯೂಟ್ ಹೊಡೆದ ರಾಮ್ ಗೋಪಾಲ್ ವರ್ಮಾ

ರಿಲೀಸ್ ಮಾಡಿದ್ರೆ ಅವರ ಕಥೆ ಗೋವಿಂದ.!

''ನನಗೆ ಇದು ನಂಬಲು ಕಷ್ಟವೆನಿಸಿದರೂ ಒಂದು ಕ್ಷಣ ಶಾಕ್ ಆಯಿತು. ಆ ಪ್ರಾಜೆಕ್ಟ್ ಯಾವುದು, ಆ ಚಿತ್ರದ ಹೀರೋ ಯಾರು, ಆ ನಿರ್ಮಾಪಕ ವಾಯ್ಸ್ ಎಲ್ಲವೂ ಎಲ್ಲರಿಗೂ ಗೊತ್ತಿದೆ. ಅದನ ರಿಲೀಸ್ ಮಾಡಿದ್ರೆ, ಅವರ ಕಥೆ ಅಷ್ಟೇ. ಕಾನೂನಾತ್ಮಕವಾಗಿ ದೂರು ನೀಡಿದ್ರೆ, ಅವರ ಜೀವನ ಜೈಲಿನಲ್ಲೇ ಕಳೆಯಬೇಕಾಗುತ್ತೆ ಎಂದು ಹೇಳುವ ಮೂಲಕ ಕಾಸ್ಟಿಂಗ್ ಕೌಚ್ ತೆಲುಗು ಇಂಡಸ್ಟ್ರಿಯಲ್ಲಿ ಹೇಗಿದೆ ಎಂದು ಬಹಿರಂಗಪಡಿಸಿದರು.

English summary
Controversial director ram gopal varma has opened up about tollywood casting couch. he shared about a conversation between a heroine and a popular producer in Hyderabad. now, this news goes viral on social media..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X