ನಿಮ್ಮದು ದೇಶನಾ? 3 ಮದ್ವೆ ಆಗಿರೋ ನೀನು ಚರ್ಚೆ ಬಗ್ಗೆ ಮಾತಾಡ್ತೀಯಾ? ವರ್ಮಾ ಗರಂ.!

Recommended Video

3 ಮದ್ವೆ ಆಗಿರೋ ನೀನು ಚರ್ಚೆ ಬಗ್ಗೆ ಮಾತಾಡ್ತೀಯಾ?

ಪುಲ್ವಾಮಾ ದಾಳಿ ಖಂಡಿಸಿ ಇಡೀ ವಿಶ್ವವೇ ಭಾರತದ ಪರ ನಿಂತಿದೆ. ಆದ್ರೆ, ಪಾಕಿಸ್ತಾನ ಮಾತ್ರ ಇದಕ್ಕೆ ಹೊಣೆ ನಾವಲ್ಲ ಎಂದು ಹೇಳುತ್ತಿದೆ. ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರ ಬೇಕು, ಪಾಕಿಸ್ತಾನಕ್ಕೆ ನುಗ್ಗಿ ಉಗ್ರರ ಹತ್ಯೆ ಮಾಡಬೇಕು, ಪಾಕಿಸ್ತಾನದ ಜೊತೆ ನೇರ ಯುದ್ಧ ಘೋಷಣೆ ಮಾಡಿ ಎಂದು ಭಾರತೀಯರು ಪ್ರಧಾನಿ ಮೋದಿಗೆ ಒತ್ತಾಯ ಮಾಡ್ತಿದ್ದಾರೆ.

ಆ ಕಡೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಎಲ್ಲದಕ್ಕೂ ಯುದ್ಧ ಒಂದೆ ಪರಿಹಾರವಲ್ಲ, ಮಾತುಕತೆಗೆ ನಾವು ಸಿದ್ಧ ಎಂದು ಹೇಳಿಕೆಯೊಂದನ್ನ ನೀಡಿದ್ದಾರೆ.

ಈ ಹೇಳಿಕೆಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತನ್ನದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ದಾರೆ. ''ಡಿಯರ್ ಪ್ರಧಾನಿ ಇಮ್ರಾನ್ ಖಾನ್, ಸಮಸ್ಯೆಯನ್ನ ಮಾತುಕತೆಯ ಮೂಲಕ ಬಗೆಹರಿಸುವಾಗಿದ್ದರೇ ನೀನು ಮೂರು ಮದುವೆ ಆಗುತ್ತಿರಲಿಲ್ಲ'' ಎಂದು ಆರ್.ಜಿ.ವಿ ಕಾಲೆಳೆದಿದ್ದಾರೆ. ಮುಂದೆ ಓದಿ....

ಆರ್.ಡಿ.ಎಕ್ಸ್ ವ್ಯಕ್ತಿ ಜೊತೆಗೆ ಹೇಗಪ್ಪಾ ಮಾತುಕತೆ

''ಡಿಯರ್ ಪ್ರೈಮ್ ಮಿನಿಸ್ಟರ್ ಟನ್ ಲೆಕ್ಕದಲ್ಲಿ ಆರ್.ಡಿ.ಎಕ್ಸ್ ಇಟ್ಕೊಂಡು ಬರ್ತಿರುವ ವ್ಯಕ್ತಿಯ ಜೊತೆ ಮಾತುಕತೆ ಮಾಡ್ಬೇಕು ನಮಗೆ ಗೊತ್ತಾಗ್ತಿಲ್ಲ. ಈ ರೀತಿ ವಿಷ್ಯವನ್ನ ನೀವು ನಮಗೆ ಹೇಳಿಕೊಡಬೇಕು. ನಾವು ಭಾರತೀಯರು ನಿಮ್ಮ ಟ್ಯೂಷನ್ ಶುಲ್ಕ ಬೇಕಾದ್ರೂ ಕೊಡ್ತೀವಿ'' ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಅಮೇರಿಕಾ ಗೆ ಗೊತ್ತಾಗುತ್ತೆ, ನಿಮಗೆ ಗೊತ್ತಾಗಲ್ಲ

''ಅಮೇರಿಕಾ ಅಂತಹ ದೇಶದವರು ನಿಮ್ಮ ದೇಶದಲ್ಲಿ ಒಬ್ಬನನ್ನು (ಒಸಮಾ ಬನ್ ಲಾಡನ್) ಹುಡುಕಿ ಕೊಲ್ತಾರೆ. ಆದ್ರೆ, ನಿಮ್ಮ ದೇಶದಲ್ಲಿರೋ ಆ ವ್ಯಕ್ತಿ ಬಗ್ಗೆ ನಿಮಗೆ ಗೊತ್ತಿಲ್ಲ. ನಿಮ್ಮದು ಒಂದು ದೇಶನಾ. ನನಗೆ ಗೊತ್ತಿಲ್ಲದೇ ಕೇಳ್ತಿದ್ದೀನಿ. ನಮಗೂ ಸ್ವಲ್ಪ ಹೇಳಿಕೊಡಿ ಇಮ್ರಾನ್ ಖಾನ್'' ಎಂದು ಟಾಂಗ್ ನೀಡಿದ್ದಾರೆ.

ನಿಮ್ಮ ಆಟದ ಸ್ಟೇಷನ್

''ಜೈಶ್ ಎ ಮೊಹ್ಮದ್, ಲಷ್ಕರ್ ತೈಯಬಾ, ತಾಲಿಬಾನ್, ಆಲ್ ಖೈದಾ ನಿಮ್ಮ ಆಟದ ಸ್ಟೇಷನ್ ಅಲ್ಲ ಅಂತ ಯಾರೊಬ್ಬರು ಹೇಳುತ್ತಿಲ್ಲ. ಆದ್ರೆ, ಅದನ್ನ ನೀವು ಖಂಡಿಸಿರುವುದನ್ನ ನಾನೆಲ್ಲೂ ಕೇಳಿಲ್ಲ'' ಎಂದು ಪ್ರಶ್ನಿಸಿದ್ದಾರೆ.

ಬಾಲುಗಳನ್ನ ಬಾಂಬ್ ಎಂದುಕೊಂಡಿದ್ದೀರಾ?

''ಜೈಶ್ ಎ ಮೊಹ್ಮದ್, ಲಷ್ಕರ್ ತೈಯಬಾ, ತಾಲಿಬಾನ್, ಆಲ್ ಖೈದಾ ಎಂಬ ಬಾಲುಗಳನ್ನ ನಿಮ್ಮ ಕೈಯಲಿಟ್ಟುಕೊಂಡು, ನಿಮ್ಮ ಬ್ಯಾಟ್ ನಿಂದ ಅದನ್ನ ಪಾಕಿಸ್ತಾನ ಬಾರ್ಡರ್ ದಾಟಿಸಿ ಭಾರತದ ಪೆವಿಲಿಯನ್ ಕಡೆ ಹೊಡೆಯುತ್ತಿದ್ದೀರಾ....ಸರ್ ದಯವಿಟ್ಟು ಹೇಳಿ, ಬಾಲ್ ಗಳನ್ನ ನೀವು ಬಾಂಬುಗಳು ಎಂದು ಪರಿಗಣಿಸುತ್ತಿದ್ದೀರಾ'' ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮೇಲೆ ರಾಮ್ ಗೋಪಾಲ್ ವರ್ಮಾ ದಾಳಿ ಮಾಡಿದ್ದಾರೆ.

More from Filmibeat

English summary
Indian filmmaker Ram Gopal Varma mocked Pakistan Prime Minister Imran Khan, saying if Kashmir issue can be resolved through dialogues, he wouldn't have needed to marry 3 times.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X