TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
'ಬಾಹುಬಲಿ' ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ
ರಾಜಮೌಳಿ ನಿರ್ದೇಶನದಲ್ಲಿ ತಯಾರಾಗಿದ್ದ ಮೆಗಾಸಿನಿಮಾ ಬಾಹುಬಲಿ ಎರಡು ಕಂತು ಮುಗಿದರೂ, ಆ ಚಿತ್ರದ ಕುರಿತು ಕೆಲವು ವಿಚಾರಗಳು ಮಾತ್ರ ಇನ್ನು ನಿಗೂಢವಾಗಿಯೇ ಉಳಿದಿದೆ. ಅವುಗಳಲ್ಲಿ ನಟಿ ಶ್ರೀದೇವಿಯ ಕೂಡ ಒಬ್ಬರು.
ಹೌದು, ಎಲ್ಲ ಅಂದುಕೊಂಡಂತೆ ಆಗಿದ್ದರೇ ಶ್ರೀದೇವಿ 'ಬಾಹುಬಲಿ' ಚಿತ್ರದಲ್ಲಿ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಈ ದೊಡ್ಡ ಸಿನಿಮಾವನ್ನ ಕೈಬಿಟ್ಟರು. ಇಂತಹ ಚಿತ್ರವನ್ನ ಶ್ರೀದೇವಿ ಬಿಟ್ಟಿದ್ದು ಯಾಕೆ ಎಂಬ ಪ್ರಶ್ನೆ ಚಿತ್ರಪ್ರೇಮಿಗಳನ್ನ ಕಾಡುತ್ತಿತ್ತು. ಈಗಲೂ ಕಾಡುತ್ತಿದೆ.
ಬೋನಿಯನ್ನ ನಷ್ಟದ ಕೂಪಕ್ಕೆ ತಳ್ಳಿದ್ದು ಶ್ರೀದೇವಿ ಅಭಿನಯದ 'ಈ' ಚಿತ್ರ.!
ಈ ಬಗ್ಗೆ ರಾಜಮೌಳಿ ಕಾರಣ ಬಹಿರಂಗಪಡಿಸಿಲ್ಲ, ಅತ್ತ ಕಾರಣ ಹೇಳಲು ಶ್ರೀದೇವಿಯೇ ಇಲ್ಲ. ಇಂತಹ ಸಂದರ್ಭದಲ್ಲಿ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷ್ಯದ ಬಗ್ಗೆ ಮಾತನಾಡಿದ್ದಾರೆ. 'ಬಾಹುಬಲಿ' ಚಿತ್ರದಿಂದ ಹಿಂದೆ ಸರಿಯಲು ಕಾರಣ ಬೋನಿ ಕಪೂರ್ ಎಂದು ಅಚ್ಚರಿ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ವರ್ಮಾ ಬಾಹುಬಲಿ ಚಿತ್ರವನ್ನ ಮಾಡದಿರುವ ಬಗ್ಗೆ ಶ್ರೀದೇವಿ ಬಳಿ ಚರ್ಚೆ ನಡೆಸಿದ್ದರಂತೆ. ಆರ್.ಜಿ.ವಿ ಹೇಳುವ ಪ್ರಕಾರ ಶ್ರೀದೇವಿಗೆ ಈ ಚಿತ್ರದಲ್ಲಿ ನಟಿಸುವ ಆಸೆಯಿತ್ತಂತೆ. ಇಂತಹ ದೊಡ್ಡ ಚಿತ್ರದಲ್ಲಿ ಅಭಿನಯಿಸಲು ಕಾತುರದಿಂದ ಇದ್ದರಂತೆ. ಆದ್ರೆ, ಬೋನಿ ಕಪೂರ್ ಸಂಭಾವನೆ ವಿಚಾರದಲ್ಲಿ ಇಟ್ಟಿದ್ದ ಬೇಡಿಕೆಯಿಂದ ಈ ಪ್ರಾಜೆಕ್ಟ್ ಕಳೆದುಕೊಳ್ಳಬೇಕಾಯಿತು'' ಎಂದು ವರ್ಮಾ ತಿಳಿಸಿದ್ದಾರೆ.
ಶ್ರೀದೇವಿ ಹಠಾತ್ ನಿಧನದ ಬಗ್ಗೆ ಸಹೋದರಿ ಶ್ರೀಲತಾ ಮೌನವಾಗಿರೋದು ಯಾಕೆ.?
ಆ ನಂತರವೇ ಶ್ರೀದೇವಿ ಜಾಗಕ್ಕೆ ಬಹುಭಾಷೆ ನಟಿ ರಮ್ಯಾಕೃಷ್ಣ ಎಂಟ್ರಿ ಕೊಟ್ಟರು. ಬಾಹುಬಲಿ ಚಿತ್ರದಲ್ಲಿ ಶಿವಗಾಮಿ ಪಾತ್ರದಲ್ಲಿ ಕಾಣಿಸಿಕೊಂಡ್ರು, ಬಾಹುಬಲಿ ಮತ್ತು ಬಲ್ಲಾಳದೇವ ಪಾತ್ರಗಳ ನಂತರ ಶಿವಗಾಮಿ ಪಾತ್ರವೇ ಹೆಚ್ಚು ಖ್ಯಾತಿ ಗಳಿಸಿಕೊಂಡಿತ್ತು.
ಶ್ರೀದೇವಿ ಒಪ್ಪಿದ್ದರೂ ಬೋನಿ ಕಪೂರ್ ಒಪ್ಪದೇ ಹೋಗಿದ್ದು ಬಾಹುಬಲಿ ಚಿತ್ರವನ್ನ ಕೈಬಿಡುವಂತೆ ಮಾಡಿತು. ಬೋನಿ ಕಪೂರ್ ಅವರಿಂದ ಕೇವಲ 'ಬಾಹುಬಲಿ' ಚಿತ್ರ ಮಾತ್ರವಲ್ಲ, ಅನೇಕ ಚಿತ್ರಗಳನ್ನ ಶ್ರೀದೇವಿ ಬಿಟ್ಟಿದ್ದಾರೆ.