Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಗರುಡ ಗಮನ ವೃಷಭ ವಾಹನ' ನೋಡಿ ಮೆಚ್ಚಿದ ರಾಮ್ ಗೋಪಾಲ್ ವರ್ಮಾ
ಕಳೆದ ನವೆಂಬರ್‌ನಲ್ಲಿ ಬಿಡುಗಡೆ ಆಗಿದ್ದ ರಾಜ್ ಬಿ ಶೆಟ್ಟಿ ನಿರ್ದೇಶಿಸಿರುವ 'ಗರುಡ ಗಮನ ವೃಷಭ ವಾಹನ' ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಇದೀಗ ಇದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಅಲ್ಲಿಯೂ ಹಿಟ್ ಆಗಿದೆ.
ಒಟಿಟಿ ವೇದಿಕೆಯಲ್ಲಿ ಸಿನಿಮಾವನ್ನು ನೋಡಿದ ಅನ್ಯ ಭಾಷೆಯ ಸಿನಿ ಪ್ರೇಮಿಗಳು, ತಂತ್ರಜ್ಞರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸಾಮಾಜಿಕ ಜಾಲಾಣಗಳ ಮೂಲಕ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ, ತೆಲುಗು, ಹಿಂದಿ ಸಿನಿಮಾ ನಿರ್ದೇಶನದ ದೇವಕಟ್ಟ 'ಗರುಡ ಗಮನ ವೃಷಭ ವಾಹನ' ಸಿನಿಮಾ ನೋಡಿ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ಮತ್ತೊಬ್ಬ ಜನಪ್ರಿಯ ನಿರ್ದೇಶಕ 'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ನೋಡಿ ಹಾಡಿ ಹೊಗಳಿದ್ದಾರೆ.
ಭಾರತೀಯ ಸಿನಿಮಾದ ದಿಕ್ಕು ಬದಲಿಸಿದ ನಿರ್ದೇಶಕರಲ್ಲಿ ಒಬ್ಬರೆನಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಕನ್ನಡದ 'ಗರುಡ ಗಮನ ವೃಷಭ ವಾಹನ' ಸಿನಿಮಾ ವೀಕ್ಷಿಸಿದ್ದು, ಟ್ವಿಟ್ಟರ್ ಮೂಲಕ ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಸಿನಿಮಾವನ್ನು ಹೊಗಳಿರುವ ವರ್ಮಾ
ಭಿನ್ನ-ಭಿನ್ನ ಪದಪುಂಜಗಳನ್ನು ಬಳಸಿ ಸಿನಿಮಾವನ್ನು ಹಾಗೂ ರಾಜ್ ಬಿ ಶೆಟ್ಟಿಯನ್ನು ಹೊಗಳಿರುವ ರಾಮ್ ಗೋಪಾಲ್ ವರ್ಮಾ, ''ರಾಜ್ ಬಿ ಶೆಟ್ಟಿ, ನಿಮ್ಮ ಸಿನಿಮಾ (ಸ್ಟ್ರಾಟೋಸ್ಪ್ರಿಕ್) ಬೇರೆ ಲೆವೆಲ್‌ನಲ್ಲಿದೆ ಅಥವಾ ಬಹಳ ಎತ್ತರದಲ್ಲಿದೆ. ನಿಮ್ಮ ಸ್ಕ್ರೀನ್ ಪ್ರೆಸೆನ್ಸ್ (ಮೆಟಾಮಾರ್ಫಿಕ್) ರೂಪಾಂತರಗಳಿಂದ ಕೂಡಿದೆ. ಒಟ್ಟಾರೆ ನಿಮ್ಮ ಸಿನಿಮಾ 'ಅಲ್ಟ್ರಾಸ್ಕೋಪಿಕ್' ಆಗಿದೆ ಎಂದಿದ್ದಾರೆ ವರ್ಮಾ.

'ಟಗರು' ನೋಡಿ ಮೆಚ್ಚಿಕೊಂಡಿದ್ದ ವರ್ಮಾ
ರಾಮ್ ಗೋಪಾಲ್ ವರ್ಮಾ ಯಾವುದೇ ಸಿನಿಮಾಗಳನ್ನು ಹೊಗಳುವುದೇ ಕಡಿಮೆ. ಟೀಕೆಗಳನ್ನು ಮಾಡುವುದೇ ಹೆಚ್ಚು, ಅದರಲ್ಲಿಯೂ ಕನ್ನಡದ ಸಿನಿಮಾ ನೋಡಿ ವರ್ಮಾ ಮೆಚ್ಚಿಕೊಂಡಿರುವುದು ದೊಡ್ಡ ವಿಷಯವೇ. ಈ ಹಿಂದೆ ಕನ್ನಡದ 'ಟಗರು' ಸಿನಿಮಾ ವೀಕ್ಷಿಸಿ ಮೆಚ್ಚಿಕೊಂಡಿದ್ದರು ರಾಮ್ ಗೋಪಾಲ್ ವರ್ಮಾ. 'ಟಗರು' ಸಿನಿಮಾ ನೋಡಿ ಡಾಲಿ ಧನಂಜಯ್‌ಗೆ ತೆಲುಗಿನ ಸಿನಿಮಾ ಅವಕಾಶವೊಂದನ್ನು ನೀಡಿದ್ದರು. ಕನ್ನಡದಲ್ಲಿ ಶಿವರಾಜ್ ಕುಮಾರ್ ನಟನೆಯ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಸಹ ನಿರ್ದೇಶಿಸಿದ್ದಾರೆ ವರ್ಮಾ.

ಆಸ್ಕರ್‌ಗೆ ಕಳಿಸುತ್ತೇನೆಂದ ದೇವಕಟ್ಟ
'ಗರುಡ ಗಮನ ವೃಷಭ ವಾಹನ' ಸಿನಿಮಾ ವೀಕ್ಷಿಸಿದ ತೆಲುಗು ಸಿನಿಮಾ ನಿರ್ದೇಶಕ ದೇವಕಟ್ಟ, "2021ರಲ್ಲಿ ತೆರೆಕಂಡ ಭಾರತೀಯ ಸಿನಿಮಾಗಳ ಪೈಕಿ ಅತ್ಯುತ್ತಮ ಚಲನಚಿತ್ರ 'ಗರುಡ ಗಮನ ವೃಷಭ ವಾಹನ'. ನನಗೆ ಪವರ್ ಇದ್ದಿದ್ದರೆ ಆಸ್ಕರ್‌ಗೆ ಈ ಸಿನಿಮಾವನ್ನು ಆಯ್ಕೆ ಮಾಡುತ್ತಿದ್ದೆ. 'ಗರುಡ ಗಮನ ವೃಷಭ ವಾಹನ' ಚಿತ್ರವನ್ನು ನನ್ನ ಗೆಳೆಯರೊಂದಿಗೆ ನೋಡಿದ್ದೆ. ಸಿನಿಮಾ ಚಿತ್ರೀಕರಿಸಿದ ರೀತಿ ಅದ್ಭುತವಾಗಿದೆ. ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿದ್ದರಿಂದ ಥಿಯೇಟರ್‌ಗೆ ಮತ್ತೆ ಹೋಗಿ ನೋಡಿದಾಗ ಇರಲಿಲ್ಲ. ಈ ಕಾರಣಕ್ಕೆ ಬೇಸರ ಆಗಿತ್ತು." ಎಂದಿದ್ದಾರೆ.

8 ಕೋಟಿ ನಿಮಿಷ ಸ್ಟ್ರೀಮ್ ಆದ ಸಿನಿಮಾ
ನವೆಂಬರ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ದೊಡ್ಡ ಹಿಟ್ ಆಯಿತು. ಬಳಿಕ ಜನವರಿ 13 ರಂದು ಜೀ5 ನಲ್ಲಿ ಸಿನಿಮಾ ಬಿಡುಗಡೆ ಆಗಿದ್ದು ಅಲ್ಲಿಯೂ ಹಿಟ್ ಆಗಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಕೇವಲ 3 ದಿನಗಳ ಒಳಗಾಗಿ 8 ಕೋಟಿ ನಿಮಿಷ ಈ ಸಿನಿಮಾ ಸ್ಟ್ರೀಮ್ ಆಗಿದೆ. ಆ ಮೂಲಕ ಕನ್ನಡ ಸಿನಿಮಾ ಮಟ್ಟಿಗೆ ಹೊಸ ದಾಖಲೆ ಬರೆದಿದೆ. ದೇಶ-ವಿದೇಶಗಳಲ್ಲಿ ಸಿನಿಮಾವನ್ನು ನೋಡಿ ಬಹು ಮಂದಿ ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡಿದ್ದು, ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿದ್ದಾರೆ.