ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ವೀರಪ್ಪನ್: RGV ಟ್ವೀಟ್ ಮೇಲೆ ಟ್ವೀಟ್

ಕನ್ನಡದ 'ಕೆಜಿಎಫ್ 2' ಚಿತ್ರದ ಸರಣಿ ದಾಖಲೆಯ ಹಾವಳಿ ಮುಂದುವರೆದಿದೆ. 'ಕೆಜಿಎಫ್ 2' ಸಿನಿಮಾದ ಮೂಲಕ ಒಬ್ಬ ರಾಕಿ ಭಾಯ್ ಹುಟ್ಟಿಕೊಂಡಿದ್ದಾನೆ. ಯಶ್ ಈಗ ಎಲ್ಲೆಲ್ಲೂ ರಾಕಿ ಎನ್ನುವ ಹೆಸರಿನಲ್ಲೇ ಸಿಕ್ಕಾಪಟ್ಟೆ ಫೇಮಸ್. ಆದರೆ ಈ ರಾಕಿಯನ್ನು ಸೃಷ್ಟಿಸಿದ್ದು, 'ಕೆಜಿಎಫ್' ಹುಟ್ಟು ಹಾಕಿದ್ದು ಮಾತ್ರ ಸೂತ್ರಧಾರ ಪ್ರಶಾಂತ್ ನೀಲ್.

ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಮೊದಲ ಚಿತ್ರದಲ್ಲೇ ಸೂಪರ್ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. ಇನ್ನು 'ಕೆಜಿಎಫ್' ಚಿತ್ರ ಬಂದ ಮೇಲಂತೂ ಅವರ ಕೀರ್ತಿ ಗಗನಕ್ಕೇರಿದೆ. 'ಕೆಜಿಎಫ್' ಸಿನಿಮಾ ಚೆನ್ನಾಗಿ ಇಲ್ಲ ಎಂದವರೂ ಕೂಡ ಪ್ರಶಾಂತ್ ಚಾಣಾಕ್ಷತನವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ.

ಈಗ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಪ್ರಶಾಂತ್ ನೀಲ್ ಬಗ್ಗೆ ಪ್ರಶಂಸನೀಯ ಮಾತುಗಳನ್ನು ಆಡುತ್ತಿದ್ದಾರೆ. ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಪ್ರಶಾಂತ್ ನೀಲ್ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಪ್ರಶಾಂತ್ ನೀಲ್ ಭಾರತೀಯ ಚಿತ್ರರಂಗದ ವೀರಪ್ಪನ್ ಎಂದಿದ್ದಾರೆ.

ಪ್ರಶಾಂತ್ ಭಾರತೀಯ ಚಿತ್ರರಂಗದ ವೀರಪ್ಪನ್ ಅಂತೆ!

"ಅನ್‌ಹ್ಯಾಪಿ ನಿರ್ದೇಶಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಕಾರಣ ನಿರ್ದೇಶಕ ಪ್ರಶಾಂತ್ ನೀಲ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿಯೂ ಸಹ ಎಲ್ಲ ನಿರ್ದೇಶಕರ ತಲೆ ಕೆಡಿಸಿದ್ದಾರೆ. ಸರ್ ಪ್ರಶಾಂತ್ ನೀಲ್, ನೀವು ಭಾರತೀಯ ಚಿತ್ರರಂಗದ ವೀರಪ್ಪನ್." ಎಂದು ಬರೆದುಕೊಂಡು ವಿಶ್ವ ನಿರ್ದೇಶಕರ ದಿನಕ್ಕೆ ಟ್ವೀಟ್ ಮಾಡಿದ್ದಾರೆ.

'ಕೆಜಿಎಫ್ 2' ಬಗ್ಗೆ ತಲೆಕೆಡಿಸಿಕೊಂಡಿದೆ ಭಾರತ!

"ಶ್ರೀಮಾನ್ ಪ್ರಶಾಂತ್ ನೀಲ್, ನೀವು ಕ್ವಿಂಟಾಲ್ ಹಣವನ್ನು ಮಾಡಿದ್ದೀರಿ. ಆದರೆ ಭಾರತೀಯ ಚಲನಚಿತ್ರೋದ್ಯಮವು ರೀ-ಶೂಟ್, ರೀ- ಡ್ರಾಫ್ಟ್ಸ್ ಮತ್ತು ತಮ್ಮ ಮೇಲೆ ರೀ ಇನ್ವೆಸ್ಟ್ ಮಾಡುತ್ತಾ ನೂರಾರು ಟನ್‌ಗಳಷ್ಟು ಹಣವನ್ನು ಕಳೆದುಕೊಳ್ಳುತ್ತಿದೆ. ಆದರೆ 'ಕೆಜಿಎಫ್ 2' ಗೆಲ್ಲಲ್ಲು ಕಾರಣವೇನು ಎನ್ನುವುದು ಯಾರಗೂ ಅರ್ಥ ಆಗುತ್ತಿಲ್ಲ. ಹಾಗಾಗಿ ಇದು ಅನ್‌ಹ್ಯಾಪಿ ನಿರ್ದೇಶಕರ ದಿನಾಚರಣೆ."

'ಕೆಜಿಎಫ್ 2' ಒಂದು ಉದ್ಯಮ: ರಾಮ್ ಗೋಪಾಲ್ ವರ್ಮಾ!

"95% ಭಾಗದ ಸಾಂಪ್ರದಾಯಿಕ ಸಿನಿಮಾ ಮಂದಿ 'ಕೆಜಿಎಫ್ 2' ಚಿತ್ರವನ್ನು ದ್ವೇಷಿಸಿದ್ದಾರೆ. ಅದಕ್ಕೆ ಹಲವರು ಸಾಕ್ಷಿಯಾಗಿದ್ದಾರೆ. ಆದರೆ ಸ್ವತಃ 'ಕೆಜಿಎಫ್ 2' ಮೂಲಕ ಪ್ರಶಾಂತ್ ನೀಲ್ ಹಳೆಯ ಚಿತ್ರರಂಗವನ್ನು ಒದ್ದು ಓಡಿಸಿ ಹೊಸ ಚಿತ್ರರಂಗವನ್ನು ಸ್ಥಾಪಿಸಿದ್ದಾರೆ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಅಲ್ಲದೆ 'ಕೆಜಿಎಫ್ 2' ಒಂದು ಉದ್ಯಮವಾಗಿದೆ." ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

'ಕೆಜಿಎಫ್ 2' ಬಾಲಿವುಡ್ ಪಾಲಿಗೆ ಹಾರರ್

ರಾಮ್ ಗೋಪಾಲಗ ವರ್ಮಾ 'ಕೆಜಿಎಫ್ 2' ಚಿತ್ರದ ಬಗ್ಗೆ ಮಾತನಾಡುತ್ತಿರೋದು ಇದೆ ಮೊದಲೇನಲ್ಲ. ಈ ಹಿಂದೆಯೂ ಈ ಚಿತ್ರದ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಚಿತ್ರದ ಯಶಸ್ಸಿನ ಬಗ್ಗೆ ಟ್ವೀಟ್ ಮಾಡಿದ್ದರು. 'ಕೆಜಿಎಫ್ 2' ಚಿತ್ರ, ಬಾಲಿವುಡ್ ಮಂದಿಗೆ ಹಾರರ್ ಸಿನಿಮಾ ಎಂದಿದ್ದರು ರಾಮ್ ಗೋಪಾಲ್ ವರ್ಮಾ.

More from Filmibeat

English summary
Ram Gopal Varma Praises Prashanth Neel, Wish As Unhappy Directors day, He Says Prashanth Is Indian Film Veerappan,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X