ಟಿವಿ9 ಸಿಬ್ಬಂದಿಗೆ ಒಂದು ಲಕ್ಷ ರೂಪಾಯಿ ಕೊಟ್ಟ ರಾಮ್ ಗೋಪಾಲ್ ವರ್ಮಾ.!

ನುಡಿದಂತೆ ನಡೆಯುವವರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಒಬ್ಬರು. ನಿನ್ನೆಯಷ್ಟೇ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಒಂದು ಘೋಷಣೆ ಮಾಡಿದ್ದರು.

ಚಂದ್ರಬಾಬು ನಾಯ್ಡು ರನ್ನು ಹೋಲುವ ವ್ಯಕ್ತಿಯನ್ನ ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಆರ್.ಜಿ.ವಿ ಟ್ವೀಟ್ ಮಾಡಿದ್ದರು. ಅದರ ಜೊತೆಗೆ ಚಂದ್ರಬಾಬು ನಾಯ್ಡು ರಂತೆಯೇ ಕಾಣುವ ಹೋಟೆಲ್ ನಲ್ಲಿ ಕೆಲಸ ಮಾಡುವ ವ್ಯಕ್ತಿಯ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಅಪ್ ಲೋಡ್ ಮಾಡಿದ್ದರು.

ಆ ಹೋಟೆಲ್ ನಲ್ಲಿರುವ ವೈಟರ್ ಬಗ್ಗೆ ಕಾಂಟ್ಯಾಕ್ಟ್ ಡೀಟೇಲ್ಸ್ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡುವೆ ಅಂತ ರಾಮ್ ಗೋಪಾಲ್ ವರ್ಮಾ ಹೇಳಿದ್ದರು.

ಇದೀಗ ಆರ್.ಜಿ.ವಿಗೆ ಚಂದ್ರಬಾಬು ನಾಯ್ಡು ರನ್ನೇ ಹೋಲುವ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಮಾಹಿತಿ ನೀಡಿದ ಟಿವಿ9 ಸಿಬ್ಬಂದಿಗೆ ರಾಮ್ ಗೋಪಾಲ್ ವರ್ಮಾ ಒಂದು ಲಕ್ಷ ರೂಪಾಯಿ ಕೊಡಲು ಮುಂದಾಗಿದ್ದಾರೆ. ಮುಂದೆ ಓದಿರಿ...

ವೈಟರ್ ಬಗ್ಗೆ ಮಾಹಿತಿ ನೀಡಿದ ಟಿವಿ9 ಸಿಬ್ಬಂದಿ

''ಈ ವಿಡಿಯೋ ನನಗೆ ಫಾರ್ವರ್ಡ್ ಆಗಿ ಬಂತು. ಈ ಹೋಟೆಲ್ ನ ವೈಟರ್ ಚಂದ್ರಬಾಬು ನಾಯ್ಡುರಂತೆಯೇ ಕಾಣುವುದು ಆಶ್ಚರ್ಯಕರ. ಇವರ ಬಗ್ಗೆ ಮಾಹಿತಿ ಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಕೊಡುವೆ ಅಂತ ನಾನು ಹೇಳಿದ್ದೆ. ಅದೃಷ್ಟವಶಾತ್ ಟಿವಿ9 ನಲ್ಲಿ ಕೆಲಸ ಮಾಡುವ ರೋಹಿತ್ ಮುತ್ಯಾಲ ಇವರನ್ನ ನನಗಾಗಿ ಟ್ರೇಸ್ ಮಾಡಿದ್ದಾರೆ'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಧನ್ಯವಾದ ಅರ್ಪಿಸಿದ ಆರ್.ಜಿ.ವಿ

''ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕೆ ಚಂದ್ರಬಾಬು ನಾಯ್ಡುರನ್ನ ಉಡುಗೊರೆಯಾಗಿ ನೀಡಿದ ರೋಹಿತ್ ಅವರಿಗೆ ಧನ್ಯವಾದಗಳು. ಚಿತ್ರದ ಆರಂಭದಲ್ಲಿ ನಿಮಗೆ ನಾನು ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಸದ್ಯಕ್ಕೆ ನಿಮ್ಮ ಅಕೌಂಟ್ ಡೀಟೇಲ್ಸ್ ನ ನನಗೆ ಕಳುಹಿಸಿ. ನಿಮ್ಮ ಒಂದು ಲಕ್ಷ ರೂಪಾಯಿಯನ್ನು ನಾನು ಕಳುಹಿಸುವೆ'' ಎಂದು ಟ್ವೀಟ್ ಮಾಡಿದ್ದಾರೆ ಆರ್.ಜಿ.ವಿ

ಚಂದ್ರಬಾಬು ನಾಯ್ಡು ಪಾತ್ರ ಪ್ರಮುಖ

''ಲಕ್ಷ್ಮೀಸ್ ಎನ್.ಟಿ.ಆರ್' ಚಿತ್ರದಲ್ಲಿ ಚಂದ್ರಬಾಬು ನಾಯ್ಡು ಪಾತ್ರಕ್ಕೆ ನಟರನ್ನು ಆಯ್ಕೆ ಮಾಡಲು ನನಗೆ ತುಂಬಾ ಕಷ್ಟ ಆಗಿತ್ತು. ಯಾಕಂದ್ರೆ, ಲಕ್ಷ್ಮಿ ಪಾರ್ವತಿ ಹಾಗೂ ಎನ್.ಟಿ.ಆರ್ ಸಂಬಂಧದಲ್ಲಿ ಚಂದ್ರಬಾಬು ನಾಯ್ಡು ಪಾತ್ರ ಪ್ರಮುಖವಾದದ್ದು'' ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

'ಲಕ್ಷ್ಮೀಸ್ ಎನ್.ಟಿ.ಆರ್' ಕುರಿತು

'ಲಕ್ಷ್ಮೀಸ್ ಎನ್.ಟಿ.ಆರ್' ಕುರಿತು

ಈಗಾಗಲೇ 'ಲಕ್ಷ್ಮೀಸ್ ಎನ್.ಟಿ.ಆರ್' ಚಿತ್ರದ ಫಸ್ಟ್ ಲುಕ್ ನ ರಾಮ್ ಗೋಪಾಲ್ ವರ್ಮಾ ಬಿಡುಗಡೆ ಮಾಡಿದ್ದಾರೆ. ನಟ ಎನ್.ಟಿ.ಆರ್ ಮತ್ತು ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಅವರ ನಡುವಿನ ಸಂಬಂಧದ ಕುರಿತು ಈ ಸಿನಿಮಾ ಮೂಡಿಬರಲಿದೆ.

More from Filmibeat

English summary
Director Ram Gopal Varma rewards Rs.1 Lakh cash prize for a person who traced a person who looks like Chandrababu Naidu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X