'ಬ್ಯೂಟಿಫುಲ್': ಇದು ರಾಮ್ ಗೋಪಾಲ್ ವರ್ಮ ಕನಸಂತೆ

ಟಾಲಿವುಡ್ ನಲ್ಲಿ ಇಂದು (ಸಪ್ಟೆಂಬರ್ 7) ಒಂದು ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದ್ದು, ದೊಡ್ಡ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ರಾಮ್ ಗೋಪಾಲ್ ವರ್ಮ ಎಂಬ ಹೆಸರು.

'ಬ್ಯೂಟಿಫುಲ್' ಎಂಬ ತೆಲುಗಿನ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ತುಂಬ ಹಾಟ್ ಆಗಿ ಸಿನಿಮಾ ಪೋಸ್ಟರ್ ಇದೆ. ಪೋಸ್ಟರ್ ಮೇಲೆ 'ಎ ರಾಮ್ ಗೋಪಾಲ್ ವರ್ಮ ಡ್ರೀಮ್' ಎಂದು ಬರೆಯಲಾಗಿದೆ. ಈ ಸಿನಿಮಾದ ಕಥೆ ಬರೆದು, ಫೋಟೋಗ್ರಾಫಿ ಹಾಗೂ ನಿರ್ದೇಶನವನ್ನ ಅಗಸ್ಥ ಮಂಜು ಮಾಡಿದ್ದಾರೆ.

ಇತ್ತೀಚಿಗೆ ರಾಮ್ ಗೋಪಾಲ್ ವರ್ಮ ಗ್ಲಾಮರ್ ಬಗ್ಗೆಯೇ ಹೆಚ್ಚು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ತುಣುಕುಗಳನ್ನು ನೋಡುತ್ತಿದ್ದರೆ, ಇದು ಕೂಡ ಅದೇ ಸಾಲಿಗೆ ಸೇರುವ ಆಗಿದೆ. ಅಂದಹಾಗೆ, 'ಬ್ಯೂಟಿಫುಲ್' ಸಿನಿಮಾದ ಟೀಸರ್ ಅಕ್ಟೋಬರ್ 9 ರಂದು ಬಿಡುಗಡೆ ಆಗುತ್ತಿದೆ.

Ram Gopal Varmas Beautiful Movie Poster Out

ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ನಟಿ ನೈನಾ ಗಂಗೂಲಿ ಕಾಣಿಸಿಕೊಂಡಿದ್ದಾರೆ. ಪಾರ್ತ್ ಸೂರಿ ಸಿನಿಮಾದ ನಾಯಕ. ನೈನಾ ಗಂಗೂಲಿ ಈ ಹಿಂದೆ ರಾಮ್ ಗೋಪಾಲ್ ವರ್ಮ ಅವರ 'ಮೇರಿ ಭೇಟಿ ಸನ್ನಿ ಲಿಯೋನ್ ಬನಾ ಚಾಹ್ತಿ ಹೈ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು.

ಈಗಾಗಲೇ ಸಿನಿಮಾದ ಐದು ಸಣ್ಣ ತುಣುಕು ಹೊರಬಂದಿದೆ. ಐದು ದೃಶ್ಯಗಳು ಒಂದೇ ರೀತಿ ಕಾಣುತ್ತಿವೆ. ಸಿನಿಮಾದ ಪೋಸ್ಟರ್ ನಲ್ಲಿ 'An ode to RANGEELA' ಎಂದು ಬರೆಯಲಾಗಿದೆ. ಆರ್ ಜಿ ವಿ ತಮ್ಮ ಹಳೆಯ ಸಿನಿಮಾ ಹೆಸರನ್ನು ಮತ್ತೆ ಇಲ್ಲಿ ತಂದಿದ್ದಾರೆ.

More from Filmibeat

English summary
Ram Gopal Varma's 'Beautiful' telugu movie poster out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X