For Quick Alerts
  ALLOW NOTIFICATIONS  
  For Daily Alerts

  ಮತ್ತೆ 'ರೋಮ್ಯಾಂಟಿಕ್' ಮೂಡ್ ನಲ್ಲಿ ನಿರ್ದೇಶಕ ಆರ್ ಜಿ ವಿ

  |

  ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತೆ ಬಂದಿದ್ದಾರೆ. ಅವರ 'ಬ್ಯೂಟಿಫುಲ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

  ಐದು ತುಣುಕುಗಳ ಮೂಲಕ ಟಾಲಿವುಡ್ ನಲ್ಲಿ ಸುದ್ದಿ ಮಾಡಿದ್ದ 'ಬ್ಯೂಟಿಫುಲ್' ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಗ್ಲಾಮರ್ ಅಂಶಗಳಿಗೆ ಮಾತ್ರ ಸೀಮಿತವಾಗಿದೆ. ನಾಯಕಿ ನೈನಾ ಗಂಗೂಲಿ ಹಾಟ್ ಅವತಾರ ಟ್ರೇಲರ್ ನಲ್ಲಿ ಕಂಡಿದೆ. ಕಿಸ್ಸಿಂಗ್ ದೃಶ್ಯಗಳು ಕೂಡ ಟ್ರೇಲರ್ ನಲ್ಲಿವೆ.

  'ಬ್ಯೂಟಿಫುಲ್': ಇದು ರಾಮ್ ಗೋಪಾಲ್ ವರ್ಮ ಕನಸಂತೆ

  ಪೋಸ್ಟರ್ ಮೇಲೆ, ಟ್ರೇಲರ್ ನಲ್ಲಿ 'ಎ ರಾಮ್ ಗೋಪಾಲ್ ವರ್ಮ ಡ್ರೀಮ್' ಎಂದು ಬರೆಯಲಾಗಿದೆ. ಈ ಸಿನಿಮಾದ ಕಥೆ ಬರೆದು, ಫೋಟೋಗ್ರಾಫಿ ಹಾಗೂ ನಿರ್ದೇಶನವನ್ನ ಅಗಸ್ಥ ಮಂಜು ಮಾಡಿದ್ದಾರೆ. ಚಿತ್ರದ ಟ್ರೇಲರ್ ಅನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಆರ್ ಜಿ ವಿ ಹಂಚಿಕೊಂಡಿದ್ದಾರೆ.

  ಟ್ರೇಲರ್ ನೋಡಿ ಟ್ವೀಟ್ ಮಾಡಿರುವ ಆರ್ ಜಿ ವಿ ಸ್ನೇಹಿತ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್ ಬ್ಯೂಟಿಫುಲ್ ಟ್ರೇಲರ್ ಬ್ಯೂಟಿಫುಲ್ ಆಗಿದೆ ಎಂದಿದ್ದಾರೆ. ಎರಡು ಗಂಟೆಗಳಲ್ಲಿ 19 ಸಾವಿರ ವೀಕ್ಷಣೆ ಪಡೆದಿರುವ ಟ್ರೇಲರ್, ಮುಂದೆ ಸಾಗುತ್ತಿದೆ.

  ನಟಿ ನೈನಾ ಗಂಗೂಲಿ ಈ ಹಿಂದೆ ರಾಮ್ ಗೋಪಾಲ್ ವರ್ಮ ಅವರ 'ಮೇರಿ ಭೇಟಿ ಸನ್ನಿ ಲಿಯೋನ್ ಬನಾ ಚಾಹ್ತಿ ಹೈ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಪಾರ್ತ್ ಸೂರಿ ಸಿನಿಮಾದ ನಾಯಕನಾಗಿದ್ದಾರೆ. ಚಿತ್ರದ ಟೈಟಲ್ ಕಾರ್ಡ್ ನಲ್ಲಿ 'An ode to RANGEELA' ಎಂದು ಬಳಸಲಾಗಿದೆ. ಆರ್ ಜಿ ವಿ ತಮ್ಮ ಹಳೆಯ ಸಿನಿಮಾ ಹೆಸರನ್ನು ಮತ್ತೆ ಇಲ್ಲಿ ತಂದಿದ್ದಾರೆ.

  English summary
  Ram Gopal Varma's 'Beautiful' telugu movie trailer released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X