»   » ಜೂ.NTR-ಪ್ರಿನ್ಸ್ ಮಹೇಶ್ ಮಧ್ಯೆ ಬತ್ತಿಯಿಟ್ಟ ವರ್ಮಾ!

ಜೂ.NTR-ಪ್ರಿನ್ಸ್ ಮಹೇಶ್ ಮಧ್ಯೆ ಬತ್ತಿಯಿಟ್ಟ ವರ್ಮಾ!

Posted By:
Subscribe to Filmibeat Kannada

ವಿವಾದಗಳನ್ನೇ ಹುಡುಕಿ ಅದರ ಬೆನ್ನೆತ್ತಿ ಹೋಗ್ತಾರೋ, ಇಲ್ಲಾ ವಿವಾದಗಳೇ ವರ್ಮಾ ಸಾಹೇಬರನ್ನ ಹುಡುಕಿಕೊಂಡು ಬರುತ್ತೋ ಗೊತ್ತಿಲ್ಲ. ಆದ್ರೆ ವಿವಾದ ಅಂದ್ರೆ ಅದಕ್ಕೆ ಪರ್ಯಾಯ ಪದ ರಾಮ್ ಗೋಪಾಲ್ ವರ್ಮಾ! ಅನ್ನುವ ಮಟ್ಟಕ್ಕೆ ಈ ಕಾಂಟ್ರವರ್ಶಿಯಲ್ ಡೈರೆಕ್ಟರ್ ಜನಪ್ರಿಯ.

''ಮಾಡೋಕೆ ಕೆಲಸ ಇಲ್ದೆ, ಸುಮ್ಮನೆ ಕೂರೋಕೆ ಆಗ್ದೆ ಅದೇನನ್ನೋ ಮಾಡಿಕೊಂಡರು'' ಅನ್ನುವ ಹಾಗೆ ಏನಾದರೊಂದನ್ನ ಕೆದಕುವ ಚಾಳಿ ರಾಮ್ ಗೋಪಾಲ್ ವರ್ಮಾರದ್ದು. ಅದಕ್ಕೆ ಲೇಟೆಸ್ಟ್ ಉದಾಹರಣೆ ಹೇಳ್ತೀವಿ ಕೇಳಿ.

Ram Gopal Varma

ಮೊನ್ನೆಯಷ್ಟೇ ಜೂ.ಎನ್.ಟಿ.ಆರ್ ಅಭಿನಯದ ಹೊಸ ಚಿತ್ರ 'ಟೆಂಪರ್' ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದ್ರಲ್ಲಿ, ಮೊದಲಿಗಿಂತಲೂ ಸಖತ್ ಸ್ಲಿಮ್ ಆಗಿ ಸಿಕ್ಸ್ ಪ್ಯಾಕ್ ಆಬ್ಸ್ ನಲ್ಲಿ ಜೂ.ಎನ್.ಟಿ.ಆರ್ ಕೊಟ್ಟಿರುವ ಲುಕ್ಕು ಸೂಪರ್ರಾಗಿತ್ತು. ['ಟೆಂಪರ್' ರೈಸ್ ಆದ ಜೂ.ಎನ್.ಟಿ.ಆರ್ ಮಾಡಿದ್ದೇನು?]

ಇದನ್ನ ನೋಡಿ ವರ್ಮಾಗೆ ಸುಮ್ನೆ ಕೂರೋಕೆ ಆಗ್ಲಿಲ್ಲವೇನೋ. ಅದಕ್ಕೆ ಒಂದು ಟ್ವೀಟ್ ಮಾಡಿದ್ರು ನೋಡಿ. ಇಡೀ ಟಾಲಿವುಡ್ಡಿಗೆ ಟಾಲಿವುಡ್ಡೇ ಅಲ್ಲೋಲ ಕಲ್ಲೋಲ್ಲವಾಗಿ ಹೋಯ್ತು.


ಜೂನಿಯರ್ ಎನ್.ಟಿ.ಆರ್ (ತಾರಕ್)ಗೆ ಹೋಲಿಸಿದರೆ ಪೋಕಿರಿ, ಬಿಜಿನೆಸ್ ಮೆನ್ ''ಫ್ಲಾಪ್'' ಅಂತ ಅಂದು ಪ್ರಿನ್ಸ್ ಮಹೇಶ್ ಬಾಬುಗೆ ಟಾಂಗ್ ಕೊಟ್ಟಿದ್ದಾರೆ ರಾಮ್ ಗೋಪಾಲ್ ವರ್ಮಾ. ಮೊದಲೇ ಟಾಲಿವುಡ್ ನಲ್ಲಿ ಮಹೇಶ್ ಬಾಬುಗೆ ಅಭಿಮಾನಿಗಳು ಸಿಕ್ಕಾಪಟ್ಟೆ. ಅಂತದ್ರಲ್ಲಿ ವರ್ಮಾ ಈ ತರ ಟ್ವೀಟ್ ಮಾಡಿದ್ರೆ ಯಾರು ತಾನೆ ಸುಮ್ಮನೆ ಕೂರ್ತಾರೆ ಹೇಳಿ. ವರ್ಮಾ ಟ್ವೀಟ್ ಮಾಡ್ತಿದ್ದಾಗೆ, ಅವರ ವಿರುದ್ಧ ಬೇಡಬೇಡ ಅಂದರೂ ತಿರುಗುಬಾಣಗಳೇ ಬಂದು ಅಪ್ಪಳಿಸುತ್ತಿದೆ.

Mahesh Babu2

ಅಷ್ಟೇ ಅಲ್ಲದೇ, ಟ್ವಿಟ್ಟರ್ ನಲ್ಲಿ ಮಹೇಶ್ ಬಾಬು ಮತ್ತು ಜೂ.ಎನ್.ಟಿ.ಆರ್ ಅಭಿಮಾನಿಗಳ ನಡುವೆ ಮಾತಿನ ಸಮರ ನಡೆಯುತ್ತಿದೆ. ಇಷ್ಡು ಸಾಲ್ದು ಅಂತ ತಮ್ಮನ್ನ ತಾವು ಸಮರ್ಥಿಸಿಕೊಳ್ಳುವುದಕ್ಕೆ ಹೋಗಿ ವರ್ಮಾ ಸಾಹೇಬ್ರು ಮಾಡಿರುವ ಮತ್ತೊಂದು ಟ್ವೀಟ್ ನೋಡಿ...

''ಜೂ.ಎನ್.ಟಿ.ಆರ್ ಬಗ್ಗೆ ಇಷ್ಟು ಒಳ್ಳೆ ಕಮೆಂಟ್ಸ್ ಮಾಡಿ, ಅವರ ಕಾಲ್ ಶೀಟ್ ಪಡೆಯೋದಕ್ಕೆ ಪ್ರಯತ್ನಿಸುತ್ತೀದ್ದೀನಿ ಅಂತಲ್ಲ. ನನಗೆ ನಿರ್ದೇಶಕ ಪೂರಿ ಜಗನ್ನಾಥ್ ರಷ್ಟು ಕೆಪಾಸಿಟಿ ಇಲ್ಲ'' ಅಂತ ವರ್ಮಾ ಟ್ವೀಟ್ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ಮಾತಲ್ಲೇ ಹೇಳೋದಾದರೆ, 'ಬಜಿನೆಸ್ ಮೆನ್' ಮತ್ತು 'ಪೋಕಿರಿ' ಪೂರಿ ಜಗನ್ನಾಥ್ ನಿರ್ದೇಶನದ ಚಿತ್ರಗಳೇ. ಅವುಗಳನ್ನ ಫ್ಲಾಪ್ ಅಂದು 'ಟೆಂಪರ್'ಗೆ ಭೇಷ್ ಅನ್ನುತ್ತಿದ್ದಾರಂದ್ರೆ ನೀವೇ ಯೋಚನೆ ಮಾಡಿ.

ಆರ್.ಜಿ.ವಿ ಮನಸ್ಸಲ್ಲಿ ಅದೇನೇ ಇರಬಹುದು. ಅವರು ಜೂ.ಎನ್.ಟಿ.ಆರ್ ಕಾಲ್ ಶೀಟ್ ತೆಗೆದುಕೊಳ್ಳಲಿ, ಬಿಡಲಿ. ಅದು ಬೇರೆ ವಿಷ್ಯ. ಆದ್ರೆ ಎಲ್ಲೋ ಚೆನ್ನಾಗಿರುವ ಜೂ.ಎನ್.ಟಿ.ಆರ್ ಮತ್ತು ಮಹೇಶ್ ಬಾಬು ಮಧ್ಯೆ ಈ ತರಹ ಬತ್ತಿ ಇಡುವುದು ಬೇಕಾ? 'ಭಾಯಿ ಭಾಯಿ' ತರಹ ಇರುವ ಇಬ್ಬರ ಅಭಿಮಾನಿಗಳ ನಡುವೆ ಹುಳಿಹಿಂಡುವ ಅವಶ್ಯಕತೆ ಇದ್ಯಾ? ಇಲ್ಲಾಂತ ಸುಮ್ನಿದ್ರೆ ವರ್ಮಾ ಜಾಯಮಾನಕ್ಕೆ ಅವಮಾನ!

English summary
Controversial director Ram Gopal Varma is in news again for his controversial tweet against Prince Mahesh Babu. While comparing Jr.NTR's look in the movie 'Temper', Ram Gopal Varma reffered to the movies like 'Pokiri' and 'Businessman' seems like 'Flops'. This has created a huge fight between RGV and Mahesh Babu fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada