»   » ವರ್ಮಾ ಸಾಹೇಬ್ರೇ ಇದೆಲ್ಲಾ ನಿಮ್ಗೆ ಬೇಕಾ?

ವರ್ಮಾ ಸಾಹೇಬ್ರೇ ಇದೆಲ್ಲಾ ನಿಮ್ಗೆ ಬೇಕಾ?

Posted By:
Subscribe to Filmibeat Kannada

'ಇರಲಾರದವರು ಇರುವೆ ಬಿಟ್ಟುಕೊಂಡರು' ಅನ್ನುವ ಗಾದೆ ಮಾತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರನ್ನ ನೋಡಿಯೇ ಹುಟ್ಟಿಕೊಂಡಿರಬೇಕು. ಸದಾ ಒಂದಲ್ಲೊಂದು ವಿವಾದಗಳಿಂದ ಸುದ್ದಿ ಮಾಡುತ್ತಲೇ ಇರುವ ಆರ್.ಜಿ.ವಿ ಸಾಹೇಬ್ರು ವಿವಾದ ಅನ್ನುವ ಪದಕ್ಕೆ ಅನ್ವರ್ಥ ಅನ್ನುವುದನ್ನ ನಾವು ಹೊಸದಾಗಿ ಹೇಳಬೇಕಾಗಿಲ್ಲ.

ರಾಮ್ ಗೋಪಾಲ್ ವರ್ಮಾ ಅಂದ್ರೆ ವಿವಾದ....ವಿವಾದ ಅಂದ್ರೇನೇ ರಾಮ್ ಗೋಪಾಲ್ ವರ್ಮಾ ಅನ್ನುವ ಮಟ್ಟಕ್ಕೆ ಬಂದು ತಲುಪಿರುವ ವರ್ಮಾ, ಮಾಡಿಕೊಂಡಿರುವ ಎಡವಟ್ಟುಗಳು ಒಂದೆರಡಲ್ಲ. [ಬದುಕಿದ್ದಾಗಲೇ ಬಾಲಚಂದರ್ ಗೆ ಶ್ರದ್ಧಾಂಜಲಿ ಸಲ್ಲಿಸಿದ ವರ್ಮಾ]

ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಕೊನೆಯುಸಿರೆಳೆಯುವ ಮುನ್ನವೇ ಶ್ರದ್ಧಾಂಜಲಿ ಸಲ್ಲಿಸಿ, ಮಹೇಶ್ ಬಾಬು ಮತ್ತು ಜೂ.ಎನ್.ಟಿ.ಆರ್ ಮಧ್ಯೆ ಬತ್ತಿ ಇಟ್ಟು, ಕಿಂಗ್ ಖಾನ್ ಶಾರೂಖ್ ಮಕ್ಕಳ ಬಗ್ಗೆ ಕಮೆಂಟ್ ಮಾಡಿ, ಟಾಲಿವುಡ್ ನಿಂದ ಬಾಲಿವುಡ್ ವರೆಗೂ ಬೆಂಕಿ ಹಚ್ಚಿ ಸುದ್ದಿ ಮಾಡಿದ್ದ ವರ್ಮಾ ಈಗ 'ಶ್ರೀರಾಮನ ಭಕ್ತ'ರ ಕೆಂಗಣ್ಣಿಗೆ ಗುರಿಯಾದರೆ ಅಚ್ಚರಿ ಪಡಬೇಡಿ. [ಜೂ.NTR-ಪ್ರಿನ್ಸ್ ಮಹೇಶ್ ಮಧ್ಯೆ ಬತ್ತಿಯಿಟ್ಟ ವರ್ಮಾ!]

ಯಾಕೆ ಅಂದ್ರೆ ಟ್ವಿಟ್ಟರ್ ನಲ್ಲಿ ಆರ್.ಜಿ.ವಿ ಮಾಡಿರುವ 'ರಾಮಾಯಣ' ಅಂಥದ್ದು. ಹೊಸ ವರ್ಷದ ಸಂಭ್ರಮದಲ್ಲಿ ಎಲ್ಲರೂ ತಮ್ಮ ಸಂಭ್ರಮದ ಕ್ಷಣಗಳನ್ನು ಟ್ಟೀಟ್ ಮಾಡ್ತಿದ್ರೆ, ವರ್ಮಾಗೆ ಇದ್ದಕ್ಕಿದ್ದ ಹಾಗೆ 'ರಾಮಾಯಣ' ನೆನಪಾಗಿ ಬಿಟ್ಟಿದೆ. 'ಶ್ರೀರಾಮ' ಗ್ರೇಟಾ? ಇಲ್ಲಾ 'ರಾವಣ' ಗ್ರೇಟಾ? ಅನ್ನುವ ಡೌಟ್ ಅವರಿಗೆ ಬಂದುಬಿಟ್ಟಿದೆ. ಅದರ ಪರಿಣಾಮವೇ ಈ ಟ್ವೀಟ್...

ರಾಮ ಗ್ರೇಟಾ..? ರಾವಣ ಗ್ರೇಟಾ...?

''ಸೀತಾ ಮಾತೆಯನ್ನ ರಾವಣ ಮುಟ್ಟಲಿಲ್ಲ. ಹೀಗಾಗಿ ರಾವಣನನ್ನ ಗ್ರೇಟ್ ಅನ್ನಬಹುದೇ? ಇಲ್ಲಾ, ಸೀತೆಯನ್ನ ಕೈಹಿಡಿದು ಅನುಮಾನ ಪಟ್ಟ ರಾಮನನ್ನ ಗ್ರೇಟ್ ಅನ್ನಬೇಕಾ? ರಾಮನಿಗಿಂತ ರಾವಣನಿಗೆ ಹೆಚ್ಚು ಗೌರವ ಕೊಡಬಹುದಲ್ಲವೇ?'' ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್ ನಲ್ಲಿ 'ರಾಮಾಯಣ'

ಕಾಡ್ಗಿಚ್ಚಿನಂತೆ ಹಬ್ಬಿರುವ ಈ ಟ್ವೀಟ್ ಗೆ ಅದಾಗಲೇ ಟ್ವಿಟ್ಟರ್ ನಲ್ಲಿ ಮಹಾಯುದ್ಧವೇ ನಡೆಯುತ್ತಿದೆ. ಶ್ರೀರಾಮನ ಭಕ್ತರು, ರಾಮನ ಬಗ್ಗೆ ಅಪಾರ ನಂಬಿಕೆಯುಳ್ಳವರು ಆರ್.ಜಿ.ವಿಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ.

'ರಾವಣ ವರ್ಮಾ..!'

''ರಾಮ್ ಗೋಪಾಲ್ ವರ್ಮಾ ಅನ್ನುವ ಹೆಸರು ಬದಲಿಗೆ ರಾವಣ ವರ್ಮಾ ಅಂತ ಹೆಸರು ಬದಲಿಸಿಕೊಳ್ಳಬೇಕು'' ಅಂತ ವರ್ಮಾಗೆ ಶ್ರೀರಾಮನ ಭಕ್ತರೊಬ್ಬರು ಟಾಂಗ್ ನೀಡಿದ್ದಾರೆ.

''ರಾಮಾಯಣವನ್ನ ಪಠಿಸಿ''

''ರಾಮಾಯಣವನ್ನ ಓದೋದು ಮಾತ್ರ ಅಲ್ಲ, ಅದನ್ನ ಪಠಿಸಿ..ನಿಮಗೆ ಉತ್ತರ ಸಿಗುತ್ತದೆ'' ಅಂತ ಆರ್.ಜಿ.ವಿ ಟ್ವೀಟ್ ಬಗ್ಗೆ ಬೇಸರವ್ಯಕ್ತಪಡಿಸಿರುವ ಮಹೇಶ್ ಎನ್ನುವರು ಮಾಡಿರುವ ಕಮೆಂಟ್ ಇದು.

''ಸೀತೆಯನ್ನು ಮುಟ್ಟಿದ್ದರೆ ರಾವಣ ಭಸ್ಮವಾಗುತ್ತಿದ್ದ''

''ಸೀತೆಯನ್ನ ಮುಟ್ಟಿದ್ದರೆ ರಾವಣ ಭಸ್ಮವಾಗುತ್ತಿದ್ದ ಅನ್ನುವ ಸತ್ಯ ಸಂಗತಿ ಈ ಆರ್.ಜಿ.ವಿ ಗೊತ್ತಿಲ್ಲ''

''ಇಂಡಸ್ಟ್ರಿಯಿಂದ ಒದ್ದು ಓಡಿಸಬೇಕು''

''ರಾಮ್ ಗೋಪಾಲ್ ವರ್ಮಾರನ್ನ ಫಿಲ್ಮ್ ಇಂಡಸ್ಟ್ರಿಯಿಂದ ಒದ್ದು ಓಡಿಸಬೇಕು''

''ಆರ್.ಜಿ.ವಿ ಹುಚ್ಚ...!''

''ಬರೀ ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಿರುವ ವರ್ಮಾ ರಿಗೆ ಹುಚ್ಚು ಹಿಡಿದಿರಬೇಕು. ಮೊದಲು ಗಣೇಶನ ಬಗ್ಗೆ ಮಾತಾಡಿ, ಈಗ ಶ್ರೀರಾಮನ ಬಗ್ಗೆ ಮಾತನಾಡುತ್ತಿದ್ದಾರೆ''.

ಗಣಪತಿಯ ಮೂಲ ಕೆದಕಿದ್ದರು..!

ಹಿಂದೊಮ್ಮೆ ಸಂಕಷ್ಟ ಹರ ಗಣಪತಿ ಹುಟ್ಟಿನ ಬಗ್ಗೆ ಟ್ವೀಟ್ ಮಾಡಿ 'ಹಿಂದೂ ಸಂಘಟನೆ'ಗಳ ಕೆಂಗಣ್ಣಿಗೆ ಗುರಿಯಾಗಿ ನಂತ್ರ ಕ್ಷಮೆಯಾಚಿಸಿದರೂ, ಆರ್.ಜಿ.ವಿಗೆ ಬುದ್ಧಿ ಬಂದ ಹಾಗಿಲ್ಲ. ಹಳೆಯದ್ದನ್ನೆಲ್ಲಾ ಮರೆತಂತೆ ಕಾಣುವ ವರ್ಮಾ, ಈಗ ರಾಮನ ಬಗ್ಗೆ ವೃಥಾ ಟ್ವೀಟ್ ಮಾಡಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. [ಗಣೇಶನ ಬಗ್ಗೆ ವರ್ಮಾ ಅಣುಕು ಟ್ವೀಟ್ ರಾದ್ಧಾಂತ]

ಪಬ್ಲಿಸಿಟಿ ಗಿಮಿಕ್ಕಾ..?

ಇದೆಲ್ಲಾ ಪಬ್ಲಿಸಿಟಿ ಗಿಮಿಕ್ಕೋ ಅಥವಾ ಸದಾ ಸುದ್ದಿಯಲ್ಲಿರಬೇಕೆನ್ನುವ ಮೆಂಟಾಲಿಟಿಯೋ, ಇಲ್ಲಾ, ನಿಜವಾಗಿಯೂ ಇಂಥ ಆಲೋಚನೆಗಳು ವರ್ಮಾಗೆ ಮಾತ್ರ ಮೂಡುತ್ತವೆಯೋ...ಒಟ್ನಲ್ಲಿ, ಇಂತಹ ರಾದ್ಧಾಂತಗಳನ್ನ ಮಾಡಿಕೊಳ್ಳದೇ ಇದ್ದರೆ ರಾಮ್ ಗೋಪಾಲ್ ವರ್ಮಾ ಜಾಯಮಾನಕ್ಕೆ ಅವಮಾನ.

ಸಾರಿ ಕೇಳ್ತಾರಾ..?

ಈಗಾಗ್ಲೇ ಈ ಟ್ವೀಟ್ ನಿಂದ ಅನೇಕ ಮಂದಿ ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದಿದ್ದಾರೆ. ಇನ್ನೂ ನಿದ್ದೆಯಿಂದ ಎಚ್ಚರವಾದಂತೆ ಕಾಣದ ವರ್ಮಾ, ಮುಂದಕ್ಕೆ ಎಲ್ಲಾ ಕಮೆಂಟ್ ಗಳನ್ನ ಓದಿ ಕ್ಷಮೆಯಾಚಿಸಿದರೆ ಅಶ್ಚರ್ಯವಿಲ್ಲ. (ಫಿಲ್ಮಿಬೀಟ್ ಕನ್ನಡ)

English summary
Controversial director Ram Gopal Varma is in news again for his controversial tweet against Hindu God Sri Rama.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada