ಈ ನಟಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ವರ್ಮಾ

ರಾಮ್ ಗೋಪಾಲ್ ವರ್ಮಾ ಅಂದ್ರೆ ಇಷ್ಟ ಪಡೋರು ಇದ್ದಾರೆ. ದ್ವೇಷ ಮಾಡೋರು ಇದ್ದಾರೆ. ವರ್ಮಾ ಅವರನ್ನ ದ್ವೇಷಿಸಿದರೂ ಅವರ ಚಿತ್ರಗಳನ್ನ ಎಂಜಾಯ್ ಮಾಡುವ ಪ್ರೇಕ್ಷಕ ವರ್ಗ ಇದೆ.

ಇಂತಹ ವಿಶೇಷವಾದ ವ್ಯಕ್ತಿತ್ವವುಳ್ಳ ರಾಮ್ ಗೋಪಾಲ್ ವರ್ಮಾ, ಬಾಲಿವುಡ್ ನಟಿಯೊಬ್ಬರ ಮೊಬೈಲ್ ಗೆ ಅಶ್ಲೀಲ ವಿಡಿಯೋಗಳನ್ನ ಕಳುಹಿಸಿದ್ದರಂತೆ. ಈ ವಿಷ್ಯವನ್ನ ಸಂದರ್ಶನವೊಂದರಲ್ಲಿ ನಟಿ ಬಹಿರಂಗಪಡಿಸಿದ್ದಾರೆ.

ರಾಮ್ ಗೋಪಾಲ್ ವರ್ಮಾ ಆ ನಟಿಗೆ ಯಾಕೆ ಅಶ್ಲೀಲ ವಿಡಿಯೋ ಕಳುಹಿಸಿದ್ದರು ಎಂದು ನೋಡಿದ್ರೆ, ಅದರ ಹಿಂದೆ ಒಂದು ಕಥೆಯೇ ಇದೆ. ಅಷ್ಟಕ್ಕೂ, ಯಾರು ಆ ನಟಿ? ವರ್ಮಾ ಆ ವಿಡಿಯೋ ಆಕೆಗೆ ಕಳುಹಿಸಿದ್ದು ಯಾಕೆ? ಮುಂದೆ ಓದಿ....

ಶೆರ್ಲಿನ್ ಚೋಪ್ರಾಗೆ ವಿಡಿಯೋ ಕಳುಹಿಸಿದ್ದರಂತೆ

ಶೆರ್ಲಿನ್ ಚೋಪ್ರಾಗೆ ವಿಡಿಯೋ ಕಳುಹಿಸಿದ್ದರಂತೆ

ಬಾಲಿವುಡ್ ನಟಿ ಮತ್ತು ಮಾಡೆಲ್ ಶೆರ್ಲಿನ್ ಚೋಪ್ರಾ ಅವರ ಮೊಬೈಲ್ ಗೆ ರಾಮ್ ಗೋಪಾಲ್ ವರ್ಮಾ ಅಶ್ಲೀಲ ವಿಡಿಯೋ ಕಳುಹಿಸಿ, ನೋಡಲು ಹೇಳಿದ್ದರಂತೆ. ಜೊತೆಗೆ ಕೆಲವು ಅಶ್ಲೀಲ ಫೋಟೋಗಳನ್ನ ಕೂಡ ಕಳುಹಿಸಿದ್ದರಂತೆ. ಸ್ವತಃ ನಟಿಯೇ ಈ ವಿಷ್ಯವನ್ನ ಹೇಳಿಕೊಂಡಿದ್ದಾರೆ.

ವಯಸ್ಕರ ಸಿನಿಮಾಗೆ ಆಫರ್ ನೀಡಿದ್ದರಂತೆ

ವಯಸ್ಕರ ಸಿನಿಮಾಗೆ ಆಫರ್ ನೀಡಿದ್ದರಂತೆ

2016ರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಾಟ್ಸಾಪ್ ನಂಬರ್ ಗೆ ಶೆರ್ಲಿನ್ ಕೆಲವು ಫೋಟೋ ಕಳುಹಿಸಿದ್ದರಂತೆ. 'ನಿಮ್ಮ ಚಿತ್ರಗಳನ್ನ ನೋಡಿದ್ದೇನೆ, ಕೆಲವು ಇಷ್ಟ ಆಗಿದೆ, ನಿಮ್ಮ ಸಿನಿಮಾದಲ್ಲಿ ನಟಿಸಲು ಇಷ್ಟವಿದೆ' ಎಂದಿದ್ದರಂತೆ. ಬಳಿಕ ಆರ್.ಜಿ.ವಿ ಆ ಕಡೆಯಿಂದ ನಟಿಯ ಮೊಬೈಲ್ ಗೆ ಕೆಲವು ವಿಡಿಯೋ, ಫೋಟೋ ಮತ್ತು ಚಿತ್ರದ ಸ್ಕ್ರಿಪ್ಟ್ ಕಳುಹಿಸಿ ಈ ಸ್ಕ್ರಿಪ್ಟ್ ಓದಿ ಎಂದಿದ್ದರಂತೆ. ಆ ಸ್ಕ್ರಿಪ್ಟ್ ಓದಿದ ಬಳಿಕ ಗೊತ್ತಾಯ್ತಂತೆ ಅದು ವಯಸ್ಕರ ಚಿತ್ರ ಎಂದು.

ವರ್ಮಾ ಒತ್ತಡ ಹಾಕಲಿಲ್ಲ

ವರ್ಮಾ ಒತ್ತಡ ಹಾಕಲಿಲ್ಲ

ಸ್ಕ್ರಿಪ್ಟ್ ಕಳುಹಿಸಿದ್ದ ವರ್ಮಾ ಜೊತೆ ಮಾತುಕತೆ ನಡೆಯಿತ್ತಂತೆ. 'ಸನ್ನಿ ಲಿಯೋನ್ ಕೂಡ ವಯಸ್ಕರ ನಟಿ. ವಯಸ್ಕರ ಸಿನಿಮಾ ಮಾಡಿದ್ಮೇಲೆಯೇ ಫೇಮಸ್ ಆಗಿದ್ದು, ನೀವು ಟ್ರೈ ಮಾಡಿ' ಎಂದಿದ್ದರಂತೆ. ಆದರೆ, ಮಾಡಲೇಬೇಕು ಎಂದು ಒತ್ತಡ ಹಾಕಿಲ್ಲ ಎಂದು ನಟಿ ಶೆರ್ಲಿನ್ ಚೋಪ್ರಾ ತಿಳಿಸಿದ್ದಾರೆ. 'ರಂಗೀಲಾ 2 ಸಿನಿಮಾ ಮಾಡಿದ್ರೆ ನನಗೆ ಅವಕಾಶ ಕೊಡಿ, ಇದು ನಾನು ಮಾಡಲ್ಲ, ಈ ಪಾತ್ರಕ್ಕೆ ನಾನು ಸೂಕ್ತವಲ್ಲ' ಎಂದು ತಿಳಿಸಿದ ಬಳಿಕ, 'ಸರಿ ಓಕೆ, ರಂಗೀಲಾ 2 ಮಾಡಿದಾಗ ನಿನಗೆ ಹೇಳುತ್ತೇನೆ' ಎಂದರಂತೆ ಆರ್.ಜಿ.ವಿ.

2018ರಲ್ಲಿ ಆ ಚಿತ್ರ ರಿಲೀಸ್ ಆಗಿತ್ತು

2018ರಲ್ಲಿ ಆ ಚಿತ್ರ ರಿಲೀಸ್ ಆಗಿತ್ತು

ಅಂದ್ಹಾಗೆ, ವರ್ಮಾ ವಯಸ್ಕರ ಸಿನಿಮಾ ಯಾವುದು ಮಾಡಿದ್ರು ಎಂದು ಯೋಚಿಸಬೇಡಿ. 2018ರಲ್ಲಿ ಗಾಡ್, ಸೆಕ್ಸ್ ಅಂಡ್ ಟ್ರೂತ್ ಎಂಬ ಸಾಕ್ಷ್ಯಚಿತ್ರ ಬಂದಿತ್ತು. ಈ ಚಿತ್ರದಲ್ಲಿ ಅಮೆರಿಕನ್ ವಯಸ್ಕರ ನಟಿ ಮಿಯಾ ಮಲ್ಕೋವಾ ನಟಿಸಿದ್ದರು. ಬಹುಶಃ ಆ ನಟಿಗೂ ಮೊದಲೂ ಈ ಚಿತ್ರಕ್ಕೆ ಶೆರ್ಲಿನ್ ಅವರಿಗೆ ಆಫರ್ ಮಾಡಿದ್ದರು ಎನ್ನಲಾಗಿದೆ.

More from Filmibeat

English summary
Controversial director ram gopal varma was sent adult videos to sherlyn chopra at 2016.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X