ನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ

Recommended Video

ನೀಲಿತಾರೆಯ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ | FILMIBEAT KANNADA

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅಂದ್ರನೇ ಹಾಗೆ. ಯಾರೂ ನಿರೀಕ್ಷೆ ಮಾಡದ್ದನ್ನ ಮಾಡುವಂತಹ ವ್ಯಕ್ತಿತ್ವ. ಬಾಲಿವುಡ್ ನಟಿ ಹಾಗೂ ಮಾಡೆಲ್ ಶೆರ್ಲಿನ್ ಚೋಪ್ರಾಗೆ ಅಶ್ಲೀಲ ವಿಡಿಯೋ ಕಳುಹಿಸಿ, ವಯಸ್ಕರ ಚಿತ್ರದಲ್ಲಿ ನಟಿಸಲು ಆಫರ್ ಮಾಡಿದ್ದರು ಎಂಬ ಸುದ್ದಿ ಇತ್ತೀಚಿಗಷ್ಟೆ ವೈರಲ್ ಆಗಿತ್ತು.

ಇದೀಗ, ನೀಲಿತಾರೆಯ ಅರೆನಗ್ನ ಫೋಟೋವನ್ನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ. ಅಮೆರಿಕನ್ ನೀಲಿ ತಾರೆ ಮಿಯಾ ಮಲ್ಕೋವಾ ಅವರ ಬಿಕಿನಿ ಫೋಟೋವನ್ನ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ಸುದ್ದಿಯಾಗಿದ್ದಾರೆ.

Ram Gopal Varma Shared Mia Malkova Bikini Photo

ಮಿಯಾ ಮಲ್ಕೋವಾ ಬೀಚ್ ನಲ್ಲಿ ಬಿಕಿನಿಯಲ್ಲಿ ಮಲಗಿರುವ ಫೋಟೋ ಶೇರ್ ಮಾಡಿ, ಇದಕ್ಕೊಂದು ಕ್ಯಾಪ್ಸನ್ ಕೊಡಿ ಎಂದು ಕೇಳಿದ್ದಾರೆ. ಆ ಫೋಟೋವನ್ನ ತಮ್ಮ ಟ್ವಿಟ್ಟರ್ ಗೆ ಶೇರ್ ಮಾಡಿಕೊಂಡಿರುವ ಆರ್.ಜಿ.ವಿ ''ಆಯತಾಕಾರದ ಪ್ರೀತಿಯ ತ್ರಿಕೋನ ವಕ್ರರೇಖೆ'' ಎಂದು ಬರೆದುಕೊಂಡಿದ್ದಾರೆ.

ಮಿಯಾ ಮಲ್ಕೋವಾಗೂ ಮತ್ತು ರಾಮ್ ಗೋಪಾಲ್ ವರ್ಮಾಗೂ ಪರಿಚಯ ಇದೆ. ಈ ಹಿಂದೆ ಇದೇ ನಟಿ ಜೊತೆ ಗಾಡ್ ಸೆಕ್ಸ್ ಮತ್ತು ಟ್ರೂತ್ ಎಂಬ ಸಾಕ್ಷ್ಯಚಿತ್ರ ಮಾಡಿದ್ದರು. ಹಾಗಾಗಿ, ಮಿಯಾ ಮಲ್ಕೋವಾ ಫೋಟೋವನ್ನ ಶೇರ್ ಮಾಡಿದ್ದಾರೆ.

Ram Gopal Varma Shared Mia Malkova Bikini Photo

'ಕಮ್ಮ ರಾಜ್ಯಂಲೋ ಕಡಪ ರೆಡ್ಡಲು' ಎಂಬ ಸಿನಿಮಾ ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರಂತೆ ಕಾಣಿಸುವ ನಟನೊಬ್ಬನನ್ನ ಕರೆತಂದು ಎಲ್ಲರಿಗೂ ಅಚ್ಚರಿ ನೀಡಿದ್ದಾರೆ.

ನಕಲಿ ಪವನ್ ಕಲ್ಯಾಣ್ ಅವರ ಲುಕ್ ಕೂಡ ಇತ್ತೀಚಿಗಷ್ಟೆ ಬಹಿರಂಗಗೊಳಿಸಿದ್ದು, ಸಹಜವಾಗಿ ಇದು ಪವನ್ ಕಲ್ಯಾಣ್ ಅಭಿಮಾನಿಗಳನ್ನ ಕೆರಳಿಸಿದೆ. ಎರಡು ಜಾತಿಯ ಆಧಾರದ ಮೇಲೆ ಈ ಸಿನಿಮಾ ಮಾಡುತ್ತಿದ್ದು, ಆಂಧ್ರಪ್ರದೇಶದ ಭವಿಷ್ಯಕ್ಕೆ ಸಂಬಂಧಪಟ್ಟಿದೆಯಂತೆ.

More from Filmibeat

English summary
Famous director ram gopal varma shared mia malkova bikini photos in twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X