ರಾಮ್ ಗೋಪಾಲ್ ವರ್ಮಾಗೆ ಡಿಸ್ಟರ್ಬ್ ಮಾಡಿದ ನಟಿ: ಈಕೆ ಯಾರು.?
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದ್ಯ ಹೆಚ್ಚು ಫೋಕಸ್ ಮಾಡುತ್ತಿರುವ ಸಿನಿಮಾ ಭೈರವ ಗೀತಾ. ನವನಿರ್ದೇಶಕ ಸಿದ್ಧಾರ್ಥ್ ಆಕ್ಷನ್ ಕಟ್ ಹೇಳುತ್ತಿರುವ ದ್ವಿಭಾಷಾ ಸಿನಿಮಾ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಕನ್ನಡ ನಟ ಧನಂಜಯ್ ಈ ಚಿತ್ರದ ನಾಯಕನಾಗಿ ಅಭಿನಯಿಸುತ್ತಿದ್ದು, ಈಗ ನಾಯಕಿಯನ್ನ ಪರಿಚಯ ಮಾಡಿದ್ದಾರೆ ವರ್ಮಾ. ಅಂದ್ಹಾಗೆ, ಈ ಚಿತ್ರವನ್ನ ನಿರ್ಮಾಣ ಮಾಡುತ್ತಿರುವ ಸ್ವತಃ ರಾಮ್ ಗೋಪಾಲ್ ವರ್ಮಾ.

ಈ ಮೊದಲೇ ಸುದ್ದಿಯಾದಾಗ ನಟಿ ಇರಾ 'ಭೈರವಗೀತಾ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಇರಾ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಫೋಟೋ ಶೇರ್ ಮಾಡಿದ್ದಾರೆ ಆರ್.ಜಿ.ವಿ.
ಹಿಂಸಾಚಾರ ಪೀಡಿತ ವರ್ಗದಲ್ಲಿ ಪ್ರೀತಿ ಕಥೆ ಹೇಳುವ ಚಿತ್ರ ಭೈರವ ಗೀತ. ದಬ್ಬಾಳಿಕೆ ಮಾಡುವ ಭೂ ಮಾಲೀಕನ ಮಗಳ ಪಾತ್ರದಲ್ಲಿ ಇರಾ ಕಾಣಿಸಿಕೊಳ್ಳುತ್ತಿದ್ದಾರೆ. ಬೋಲ್ಡ್ ಮತ್ತು ಹಾಟ್ ಲುಕ್ ನಿಂದ ಗಮನ ಸೆಳೆದಿರುವ ಇರಾಗೆ ಮೊದಲ ಸಿನಿಮಾ.
ಇನ್ನು ಸಿನಿಮಾ ಬಗ್ಗೆ ಟ್ವೀಟ್ ಮಾಡಿರುವ ವರ್ಮಾ ''ಕಳೆದ 10 ಗಳಲ್ಲಿ ನಾನು ನೋಡಿದ ನಿರ್ದೇಶಕರಲ್ಲಿ ಸಿದ್ಧಾರ್ಥ್ ತುಂಬಾ ಭರವಸೆಯ ನಿರ್ದೇಶಕರಾಗಿದ್ದಾರೆ. ನಿಜಕ್ಕೂ ಚಿತ್ರವನ್ನ ಮಾಡುತ್ತಿರುವುದಕ್ಕೆ ಹೆಮ್ಮೆ ಮತ್ತು ಅದೃಷ್ಟವಾಗಿದೆ'' ಎಂದು ಮೆಚ್ಚಿಕೊಂಡಿದ್ದಾರೆ.
ಸದ್ಯ, ಹೈದ್ರಾಬಾದ್ ನಲ್ಲಿ 'ಭೈರವಗೀತಾ' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಆದಷ್ಟೂ ಬೇಗ ಟ್ರೈಲರ್ ರಿಲೀಸ್ ಮಾಡಲಿದ್ದಾರಂತೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಮೂಲಕ ಸಿನಿಮಾ ಕುತೂಹಲ ಮೂಡಿಸಿದೆ.


Click it and Unblock the Notifications











